ಶ್ರೀಕಾಂತ್ ಕರ್ತವ್ಯನಿಷ್ಠೆ ಮಾದರಿ: ನಾಗರಾಜ್
ಹೂವಿನಹಡಗಲಿ: ಚುನಾವಣೆಗಳು ಸೇರಿದಂತೆ ತಾಲೂಕಿನ ಐತಿಹಾಸಿಕ ಜಾತ್ರೆಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಕರ್ತವ್ಯ ನಿಷ್ಠೆ ಮೆರೆದಿರುವ ಸಿಪಿಐ ಶ್ರೀಕಾಂತ ಕಟ್ಟಿಮನಿ ಅವರ ತಾಳ್ಮೆ ಮತ್ತು ಸಂಯಮ ಠಾಣೆಯ ಪೊಲೀಸ್ ಸಿಬ್ಬಂದಿಗೆ ಮಾದರಿಯಾಗಿದೆ ಎಂದು ಡಿವೈಎಸ್ಪಿ ಡಿ. ನಾಗರಾಜ ಹೇಳಿದರು. ತಾಲೂಕಿನ ಆರಕ್ಷಕ ವೃತ್ತದಲ್ಲಿ ಸಿಪಿಐ ಆಗಿ ಕಾರ್ಯನಿರ್ವಹಿಸಿ ಬಡ್ತಿ ಹೊಂದಿ ವರ್ಗಾವಣೆಗೊಂಡ ಶ್ರೀಕಾಂತ ಕಟ್ಟಿಮನಿ ಅವರನ್ನು ಪೊಲೀಸ್ ಇಲಾಖೆ ಸಿಬ್ಬಂದಿ ಶುಕ್ರವಾರ ಸನ್ಮಾನಿಸಿ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಹಸೀಲ್ದಾರ್ ವಿಜಯಕುಮಾರ್ ಮಾತನಾಡಿ, ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಇರುವ ಗುಣಗಳೊಂದಿಗೆ ಕೆಲ ವಿಶೇಷ ಗುಣಗಳನ್ನು ಮೈಗೂಡಿಸಿಕೊಂಡಿರುವ ಕಟ್ಟಿಮನಿಯವರ ಸೇವೆ ನಿರಂತರವಾಗಿ ನೆನಪಿನಲ್ಲಿ ಉಳಿಯುಂತೆ ಮಾಡಿದೆ ಎಂದರು. ಸನ್ಮಾನ ಸ್ವೀಕರಿಸಿದ ಶ್ರೀಕಾಂತ ಕಟ್ಟಿಮನಿ ಮಾತನಾಡಿ, ಇಲಾಖೆಯ ಕರ್ತವ್ಯ ನಿರ್ವಹಣೆಯಲ್ಲಿ ಅಧಿಕಾರಿಗಳ ಪಾತ್ರಕ್ಕಿಂತ ಸಿಬ್ಬಂದಿಯ ಶ್ರಮ ಹೆಚ್ಚಿನದಾಗಿರುತ್ತದೆ. ಸಿಬ್ಬಂದಿ, ಸಾರ್ವಜನಿಕರ ಸಹಕಾರದೊಂದಿಗೆ ಇಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು ಎಂದರು. ಕಾರ್ಯಕ್ರಮದಲ್ಲಿ ಹಿರೇಹಡಗಲಿ ಪಿಎಸ್ಐ ಮಹೇಂದ್ರಕುಮಾರ್, ಎಎಸ್ಐ ಧರ್ಮಣ್ಣ, ಹರಿದಾಸ್, ಪೇದೆಗಳಾದ ಪ್ರಕಾಶ್, ರವಿಕುಮಾರ್, ಮಧುಸೂದನ್, ಪತ್ರಕರ್ತ ಎಸ್.ಎಂ. ಬಸವರಾಜ, ಪುತ್ರೇಶ್, ಶಿವರಾಜ್ ಇತರರು ಮಾತನಾಡಿದರು. ಇಟ್ಟಿಗಿ ಪಿಎಸ್ಐ ಮಹಮ್ಮದ್ ರಫಿ ನಿರೂಪಿಸಿದರು. ಹಡಗಲಿ ಪಿಎಸ್ಐ ಎಂ.ಎಸ್. ಆಂಜನೇಯ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

