ಬಳ್ಳಾರಿ

ಹಿರೇಮಠ ಕಾಲೇಜಿನಲ್ಲಿ ಎನ್ನೆಸ್ಸೆಸ್ ಕಾರ್ಯಕ್ರಮ

Published On :

ಕೂಡ್ಲಿಗಿ: ಸಾಮಾನ್ಯ ಜನತೆಯ ಬದುಕು, ಬವಣೆ ಹಾಗೂ ಶ್ರಮದ ಮಹತ್ವವನ್ನು ಅರ್ಥ ಮಾಡಿಕೊಳ್ಳಲು ಎನ್‌ಎಸ್‌ಎಸ್ ಪೂರಕವಾಗುತ್ತದೆ ಎಂದು ಕೂಡ್ಲಿಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಜೀಲಾನ್‌ಖಾನ್ ಹೇಳಿದರು.
ಅವರು ಪಟ್ಟಣದ ಹಿರೇಮಠ ವಿದ್ಯಾಪೀಠ ಪ.ಪೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಏರ್ಪಡಿಸಿದ್ದ ದೈನಂದಿನ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದೇ ಸಂದರ್ಭ ಕಳೆದ ವರ್ಷದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಎನ್‌ಎಸ್‌ಎಸ್ ವಿದ್ಯಾರ್ಥಿಗಳಾದ ಎಚ್.ಕೆ. ಮೂಗಜ್ಜ, ಮೂರ್ತಿ, ಶಶಿಧರಕುಮಾರ್ ಅವರಿಗೆ ನೆನಪಿನ ಕಾಣಿಕೆ ನೀಡಿ ಸತ್ಕರಿಸಲಾಯಿತು.
ಉತ್ತಮ ವರದಿಗಾರರೆಂದು ಆಯ್ಕೆಯಾದ ಬಿ. ಸಂತೋಷ, ಕೆ. ರವಿಕುಮಾರ್, ಕೋಟಿಲಿಂಗನಗೌಡಗೆ ಬಹುಮಾನ, 2 ವರ್ಷ ಎನ್ನೆಸ್ಸೆಸ್ ಪೂರೈಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಕಾಲೇಜಿನ ಪ್ರಾಚಾರ್ಯ ಸಿದ್ಧರಾಮ ಹಿರೇಮಠ, ಪ್ರೌಢಶಾಲಾ ವಿಭಾಗದ ಮುಖ್ಯಗುರು ಪಿ.ಎಂ. ತಿಪ್ಪಯ್ಯಸ್ವಾಮಿ, ಉಪನ್ಯಾಸಕರಾದ ಅರವಿಂದ ಕುಲಕರ್ಣಿ, ಟಿ. ದೇವಪ್ಪ, ಬೀನಾಜಾನ್, ಮುದ್ದೇಬಿಹಾಳ ಇದ್ದರು. ಸುರೇಶ ಮಂಜುಶ್ರೀ ಪ್ರಾರ್ಥಿಸಿದರು. ಅರುಣಾ, ಲಕ್ಷ್ಮಿ, ಅಪ್ಸಾನಾ, ಅನಿತಾ ಸಂಗಡಿಗರು ಎನ್ನೆಸ್ಸೆಸ್ ಗೀತೆ ಹಾಡಿದರು. ಶಿಕ್ಷಕ ಆರ್.ಎಸ್. ಮರಿದೇವರಮಠ ಹಾರ್ಮೋನಿಯಂ ಸಾಥ್ ನೀಡಿದರು. ಎಸ್. ಸಂತೋಷಕುಮಾರ್ ಸ್ವಾಗತಿಸಿ, ಕೆ. ಶೋಭಾ ನಿರೂಪಿಸಿದರು. ಅಪ್ಸಾನಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.