ಪಠ್ಯದೊಂದಿಗೆ ಸಾಂಸ್ಕೃತಿಕ ಚಟುವಟಿಕೆ ಅಗತ್ಯ
ಹೊಸಪೇಟೆ: ಕಾಲೇಜು ವಿದ್ಯಾರ್ಥಿಗಳು ಪಠ್ಯ, ಪುಸ್ತಕಗಳೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಪ್ರತಿಭಾವಂತರಾಗಿ ಗುರುತಿಸಿಕೊಳ್ಳಲು ಮುಂದಾಗಬೇಕು ಎಂದು ರಂಗ ವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್ ತಿಳಿಸಿದರು.
ತಾಲೂಕಿನ ಮರಿಯಮ್ಮನಹಳ್ಳಿಯ ಸರ್ಕಾರಿ ಪಪೂ ಕಾಲೇಜು ಅವರಣದಲ್ಲಿ ಮಂಗಳವಾರ ಹಾಲ್ಕುರಿಕೆ ಥಿಯೇಟರ್ನ ಕಾಲೇಜು ರಂಗ ಪಯಣದ ನಾಟಕ ಪ್ರದರ್ಶನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಲೇಜು ವಿದ್ಯಾರ್ಥಿಗಳು ತಮ್ಮ ಕಾಲೇಜಿನಲ್ಲಿ ನಡೆಯುವ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಮತ್ತು ತಮ್ಮ ಪಠ್ಯದಲ್ಲಿ ಬರುವ ನಾಟಕಗಳನ್ನು ಕಾಲೇಜಿನಲ್ಲಿ ಅಭಿನಯಿಸುವ ಮೂಲಕ ರಂಗಾಸಕ್ತಿ ಮೂಡಿಸಿಕೊಳ್ಳಲು ಮುಂದಾಗಬೇಕು. ಅಭಿನಯ, ನೃತ್ಯ, ಹಾಡು ಸೇರಿದಂತೆ ರಂಗಭೂಮಿಯ ಜ್ಞಾನ ಮತ್ತು ಪ್ರಜ್ಞೆ ಬೆಳೆಸುವುದೇ ಕಾಲೇಜು ರಂಗ ಪಯಣದ ಉದ್ದೇಶ ಎಂದರು.
ವಿನೂತನ ರಂಗ ಪ್ರಯೋಗ: ಹಿರಿಯ ರಂಗಕಲಾವಿದೆ ಡಾ.ಕೆ. ನಾಗರತ್ನಮ್ಮ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ರಂಗಾಸಕ್ತಿ ಬೆಳೆಸಲು ಕಾಲೇಜು ರಂಗಪಯಣ ಒಂದು ವಿನೂತನ ರಂಗ ಪ್ರಯೋಗವಾಗಿದೆ. ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆ ಅನಾವರಣಗೊಳ್ಳಲು ರಂಗ ಅನುಸಂಧಾನ ಪ್ರಮುಖ ಪಾತ್ರವಹಿಸುತ್ತದೆ. ಬದುಕಿನ ವಾಸ್ತವಗಳನ್ನು ರಂಗದ ಮೂಲಕ ಪ್ರಯೋಗಗೊಳಿಸುತ್ತ ಜಾಗೃತಿ ಮೂಡಿಸುವ ಶಕ್ತಿ ರಂಗಭೂಮಿಗಿದೆ ಎಂದು ಅಭಿಪ್ರಾಯಪಟ್ಟರು.
ಸ್ಥಳೀಯ ಕಾಲೇಜು ಪ್ರಾಚಾರ್ಯ ಕೆ. ಲಕ್ಷ್ಮಣ, ಪ್ರಿಯದರ್ಶಿನಿ ಕಾಲೇಜು ಪ್ರಾಚಾರ್ಯ ಎಂ.ಅಶೋಕ, ಉಪನ್ಯಾಸಕರಾದ ಪ್ರೊ.ಸಿ. ವೀರನಾಯಕ, ನಾಗರಾಜ ಹವಲ್ದಾರ್, ತಿಪ್ಪೇರುದ್ರಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನಾಟಕ ಪ್ರದರ್ಶನ: ಡಾ. ಸಿದ್ದಲಿಂಗಯ್ಯ ರಚಿಸಿರುವ ಏಕಲವ್ಯ ಮತ್ತು ಡಾ. ಚಂದ್ರಶೇಖರ್ ಕಂಬಾರ ರಚಿಸಿರುವ ಬೆಪ್ಪುತಕ್ಕಡಿ ಬೋಳೆಶಂಕರ ನಾಟಕಗಳನ್ನು ಹಾಲ್ಕುರಿಕೆ ಶಿವಶಂಕರ್ ನಿರ್ದೇಶನದಲ್ಲಿ ರವಿಕುಮಾರ್ ಬಿಸರಹಳ್ಳಿ, ಎಲ್. ಪ್ರಶಾಂತ್, ತುಳಜಾರಾಂ ಠಾಕೂರ್, ದಾನೇಶ್, ಭಾಗ್ಯ ಸಿದ್ದಿ ಮಂಚಿಕೇರಿ, ಮಣಿಕಂಠ ಅವರು ಮನೋಜ್ಞವಾಗಿ ಅಭಿನಯಿಸಿ ನಾಟಕ ಪ್ರಿಯರ ಪ್ರಶಂಸೆಗೆ ಪಾತ್ರ ರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

