ಸ್ವಾತ್ರಂತ್ರ್ಯ ಹೋರಾಟಗಾರರ ಮಾರ್ಗ ಅನುಸರಿಸಬೇಕು
ಬಳ್ಳಾರಿ: ದೇಶಕ್ಕಾಗಿ ಹೋರಾಟ ನಡೆಸಿ ನಮಗೆ ಸ್ವಾತ್ರಂತ್ರ್ಯ ತಂದುಕೊಟ್ಟ ಮಹನೀಯರ ಮಾರ್ಗವನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ, ಜೆಡಿಎಸ್ನ ಬಳ್ಳಾರಿ ಗ್ರಾಮಾಂತರ ವಿಧಾನ ಸಭಾಕ್ಷೇತ್ರದ ಅಧ್ಯಕ್ಷ ಪಿ. ಭಾಸ್ಕರರೆಡ್ಡಿ ಕರೆ ನೀಡಿದರು. ನಗರದ ಕೆ.ಸಿ. ರಸ್ತೆಯಲ್ಲಿರುವ ಜನತಾದಳ(ಜಾತ್ಯಾತೀತ) ಪಕ್ಷದ ಕಚೇರಿಯಲ್ಲಿ 67ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಧ್ವಜರೋಹಣ ನೇರವೆರಿಸಿ ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ, ಸುಭಾಸ್ಚಂದ್ರ ಬೋಸ್, ಸರ್ಧಾರ್ ವಲ್ಲಭಾಯಿ ಪಟೇಲ್ ಇನ್ನಿತರ ಮಹಾತ್ಮರು ತಮ್ಮ ಪ್ರಾಣವನ್ನೇ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಅಂಥವರ ಮಾರ್ಗವನ್ನು ನಾವು ತುಳಿಯಬೇಕು ಎಂದರು. ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಮುಂಡ್ರಿಗಿ ನಾಗರಾಜ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಕ್ಷದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಳ ಬಸವರಾಜ್ ಅವರು ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ಮಾಲೆ ಸಲ್ಲಿಸಿದರು. ಈ ಸಂದರ್ಭ ಗೋವಿಂದರಾಜುಲು, ಜಗದೀಶ್ವರರೆಡ್ಡಿ, ವೈ. ದುರುವಾಸ್, ವದ್ದಟಿಸತ್ಯಬಾಬು, ಡಾ ಶರ್ಮ, ಪ್ರಭಾಕರರೆಡ್ಡಿ, ಕುರುಗೋಡು ಜಗದೀಶ್, ಆಂದ್ರಳ್ ಗೋವಿಂದರೆಡ್ಡಿ, ರಾಮೇಶ್ವರಿ, ಅನಿತ, ಅದಿಲಕ್ಷ್ಮಿ, ಮುನ್ನಿ, ಇಂದಿರ, ಕಿರಣ್, ಕುಮಾರಸ್ವಾಮಿ, ಹುಚ್ಚರೆಡ್ಡಿ, ಜಗನ್ನಾಥರೆಡ್ಡಿ, ದುರ್ಗಪ್ರಸಾದ್, ಶ್ರೀಧರಗಡ್ಡೆ ಮಲ್ಲಿಕಾರ್ಜುನ, ಎಚ್.ಎಸ್. ಹಿರೇಮಠ, ಕ್ರೀಷ್ಟೋಪರ್, ಎಂ.ಡಿ. ರಫಿಕ್, ಶೇಕ್ಷಾವಲಿ, ಎನ್. ಜನಾರ್ದನರೆಡ್ಡಿ ಮತ್ತಿತರರಿದ್ದರು.
ಸ್ವಾತಂತ್ರ್ಯೋತ್ಸವ ಆಚರಣೆ
ಹಗರಿಬೊಮ್ಮನಹಳ್ಳಿ: 67ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಹಗರಿಬೊಮ್ಮನಹಳ್ಳಿ ಪಟ್ಟಣ ಸೇರಿದಂತೆ ತಾಲೂಕಾದ್ಯಂತ ಸಂಘ-ಸಂಸ್ಥೆಗಳು, ಶಾಲಾ, ಕಾಲೇಜು, ಮಹಿಳಾ ಮಂಡಲ, ಗ್ರಾಪಂ, ತಾಪಂ, ವಿವಿಧ ಸರ್ಕಾರಿ ಇಲಾಖೆ ಕಚೇರಿಗಳಲ್ಲಿ ಗುರುವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಪಟ್ಟಣದ ಚಿಂತ್ರಪಳ್ಳಿ ಗ್ರಾಪಂ ಕಚೇರಿ ಆವರಣದಲ್ಲಿ ಅಧ್ಯಕ್ಷ ಎಂ. ಆನಂದ್ ರಾಷ್ಟ್ರಧ್ವಜಾರೋಹಣ ನೇರವೇರಿಸಿದರು. ಶಾಸಕ ಎಸ್. ಭೀಮಾನಾಯ್ಕ, ಗ್ರಾಪಂ ಸದಸ್ಯರು, ವಿವಿಧ ಮುಖಂಡರು ಭಾಗಿಯಾಗಿದ್ದರು. ಎಪಿಎಂಸಿ ಆವರಣದಲ್ಲಿ ಸಮಿತಿ ಅಧ್ಯಕ್ಷ ಟಿ. ಬುಳ್ಳಪ್ಪ ಧ್ವಜಾರೋಹಣ ನೇರವೇರಿಸಿದರು. ಸಮಿತಿ ಸದಸ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಪಟ್ಟಣದ ಕೂಡ್ಲಿಗಿ ರಸ್ತೆಯಲ್ಲಿನ ಎಂ.ವೈ. ಘೋರ್ಪಡೆ ಶಾಲೆಯಲ್ಲಿ ಮಾಜಿ ಶಾಸಕ ಸಿರಾಜಶೇಖ್ ರಾಷ್ಟ್ರಧ್ಜಜಾರೋಹಣ ನೇರವೇರಿಸಿದರೆ, ಶಾಸಕ ಎಸ್. ಭೀಮಾನಾಯ್ಕ, ಮುಖಂಡರಾದ ಹೂಗಾರ ಮಲ್ಲಣ್ಣ, ಎಚ್.ಎಂ. ಚೋಳರಾಜ್, ಹಂಚಿನಮನಿ ಹನುಮಂತಪ್ಪ, ಹೆಗ್ಡಾಳ ಶ್ರೀನಿವಾಸ ಭಾಗವಹಿಸಿದ್ದರು. ರೇಣುಕಾ ಕಾಲೇಜಿನ ಕ್ಯಾಂಪಸ್ನಲ್ಲಿ ಸಂಸ್ಥೆ ಅಧ್ಯಕ್ಷ ಕೆ.ಎಂ. ತಿಪ್ಪೇಸ್ವಾಮಿ ಧ್ವಜಾರೋಹಣ ನೆರವೇರಿಸಿದರು. ರಥ ಬೀದಿಯ ಶ್ರೀಗುರುಕೊಟ್ಟೂರೇಶ್ವರ ಕಾಲೇಜಿನಲ್ಲಿ ಟಿ.ಎಂ. ಶಿವಪ್ರಕಾಶ ಧ್ವಜಾರೋಹಣ ನೇರವೇರಿಸಿದರು. ತಾಪಂನಲ್ಲಿ ಅಧ್ಯಕ್ಷೆ ವಿಜಯಲಕ್ಷ್ಮಿ ಪೂರ್ಯನಾಯ್ಕ ಧ್ವಜಾರೋಹಣ ನೆರವೇರಿಸಿದರು. ನಾಗರತ್ನ ವೆಂಕಟೇಶ ಸದಸ್ಯರು ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

