ವೀರಶೈವ ಧರ್ಮ ವಿಶಾಲವಾದದ್ದು: ಸಂಗನ ಬಸವಶ್ರೀ
ಕುರುಗೋಡು: ವೀರಶೈವ ಧರ್ಮ ವಿಶಾಲ ತಳಹದಿ ಹೊಂದಿದ್ದು, ಇದರಲ್ಲಿ ಜಾತಿ, ಮತ ಭೇದಕ್ಕೆ ಆಸ್ಪದ ಇಲ್ಲ ಎಂದು ಹಂಪಿ ಹೇಮಕೂಟದ ಸಂಗನ ಬಸವ ಶ್ರೀಗಳು ಹೇಳಿದರು.
ಪಟ್ಟಣದ ಕೊಟ್ಟೂರಸ್ವಾಮಿ ಮಠದಲ್ಲಿ ವೀರಶೈವ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಕುರುಗೋಡು ಹೋಬಳಿ ಮಟ್ಟದ ವೀರಶೈವರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಶೈವ ಧರ್ಮ ಅತ್ಯಂತ ಪುರಾತನವಾದ ಹಾಗೂ ಅನೇಕ ಪ್ರಗತಿಪರ ಸಿದ್ಧಾಂತ ಪ್ರತಿಪಾದಿಸಿದ ಧರ್ಮವಾಗಿದೆ. ಪ್ರಾರಂಭದಿಂದಲೂ ಕಾಯಕ, ಮನುಕುಲದ ಐಕ್ಯತೆ ಮತ್ತು ಶಾಂತಿಯ ಸಾರ ಹೊಂದಿದ ಧರ್ಮವಾಗಿದೆ.
ಸ್ವಾಂತಂತ್ರ್ಯ ಪೂರ್ವದಲ್ಲಿ ಸಮಾನ ಶಿಕ್ಷಣ ಪ್ರತಿಪಾದಿಸಿದೆ. ಇದಕ್ಕೆ 12ನೇ ಶತಮಾನದ ಶರಣ ಚಿಂತನೆಗಳೇ ಸಾಕ್ಷಿ ಎಂದರು. ಈ ಪರಂಪರೆ ಮುಂದುವರೆಸಲು ಸ್ಥಳೀಯ ಮಠದ ಬಯಲಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿ ಇದರ ಅದಾಯವನ್ನು ಜಾತಿಮತ ಭೇದವಿಲ್ಲದೆ ಬಡ ಮಕ್ಕಳ ಶಿಕ್ಷಣಕ್ಕೆ ಬಳಸಲಾಗುವುದು ಎಂದರು.
ಸಂಘದ ಮಾಜಿ ಅಧ್ಯಕ್ಷ ಎನ್.ಎಂ. ಮಂಜುನಾಥ ಗೌಡ ಮಾತನಾಡಿದರು. ಪ್ರಾರಂಭದಲ್ಲಿ ತಂಗಿನ ಸುರೇಶಪ್ಪ ಸಂಘದ ಸಾಧನೆ ಹಾಗೂ ಚಟುವಟಿಕೆಗಳ ವರದಿ ಸಲ್ಲಿಸಿದರು. ಡಾ. ಅರಳಿ ಮಠ್ ವೀರಶೈವ ಧರ್ಮದಲ್ಲಿ ಆಚಾರ ಸ್ಥಾನ, ಷಡಕ್ಷರ ಸ್ವಾಮಿ ಅವರು ಧರ್ಮ ಮತ್ತು ರಾಜಕಾರಣ ಕುರಿತು ಉಪನ್ಯಾಸ ನೀಡಿದರು.
ಅಧ್ಯಕ್ಷ ಉಮಾಪತಿಗೌಡ, ಎಚ್.ಎಂ. ವಿಶ್ವನಾಥಸ್ವಾಮಿ, ಮುದಿಮಲ್ಲನಗೌಡ, ಪ್ರಧಾನ ಕಾರ್ಯದರ್ಶಿ ಕೆ.ಎಂ. ಪಂಚಾಕ್ಷರಯ್ಯಸ್ವಾಮಿ, ಕಲ್ಲುಕಂಬ ಎರ್ರೆಪ್ಪ, ಚಂದಾ ಜಗದೀಶಪ್ಪ, ವಿಜಯಕುಮಾರ ಶ್ಯಾಸ್ತ್ರಿ, ವೀರೇಶ ಗಾಣಿಗರ, ಟಿ.ಎಂ. ಚಂದ್ರಶೇಖರ್,ಬಿ. ಮಹಾಲಿಂಗ, ಎಚ್. ಈರಣ್ಣ, ತಿಪ್ಪೇಸ್ವಾಮಿ, ದಕ್ಷಿಣಮೂರ್ತಿ, ಸೋಮಶೇಖರ ಗೌಡ, ಎನ್. ತಿಪ್ಪನಗೌಡ, ಹೋತೂರು ವಾಗೀಶ್ ಇದ್ದರು. ಟಿಎಚ್ಎಂ ಸುರೇಶ್ ನಿರ್ವಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

