ಕಾಮಗಾರಿ ಪೂರ್ಣಗೊಳಿಸಲು ಮನವಿ
ಹೂವಿನಹಡಗಲಿ: ತಾಲೂಕಿನಲ್ಲಿ ಸೋನಿಯಾ ಪ್ಯಾಕೇಜ್ನಲ್ಲಿ ಸಾರ್ವಜನಿಕ ಆಸ್ಪತ್ರೆಗಳ ಕಟ್ಟಡ ಹಾಗೂ ಸಿಬ್ಬಂದಿ ಕೊಠಡಿಗಳ ಕಾಮಗಾರಿಗಳು ಅರೆಬರೆಯಾಗಿದ್ದು, ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಿ ಪೂರ್ಣಗೊಳಿಸಬೇಕೆಂದು ಎಸ್ಯೂಸಿಐ ತಾಲೂಕು ಘಟಕ ತಹಸೀಲ್ದಾರ್ಗೆ ಮನವಿ ಸಲ್ಲಿಸಿದೆ.
ಸೋನಿಯಾ ಗಾಂಧಿ ಪ್ಯಾಕೇಜ್ ಯೋಜನೆಯಡಿ ತಾಲೂಕಿನ ಹಿರೇಹಡಗಲಿ, ಹೂವಿನಹಡಗಲಿ, ಮಾಗಳ, ಕೆ.ಅಯ್ಯನಹಳ್ಳಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಆಸ್ಪತ್ರೆ ಕಟ್ಟಡ ಹಾಗೂ ಸಿಬ್ಬಂದಿ ಕೊಠಡಿಗಳ ಕಾಮಗಾರಿ ಅರ್ಧಕ್ಕೆ ನಿಂತು 10 ವರ್ಷವಾದರೂ ಇನ್ನೂ ಪೂರ್ಣಗೊಳ್ಳದೇ ನೆನೆಗುದಿಗೆ ಬಿದ್ದಿವೆ. ಇದರಿಂದ ಸಾರ್ವಜನಿಕರಿಗೆ ಯಾವುದೇ ಉಪಯೋಗವಾಗದೆ ಸರ್ಕಾರ ನೀಡಿದ್ದ ತೆರಿಗೆ ಹಣ ಪೋಲಾಗುತ್ತಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
10 ವರ್ಷವಾದರೂ
ಕಟ್ಟಡಗಳಿಲ್ಲದೆ ಹೆರಿಗೆಯಾದ ಬಾಣಂತಿಯರಿಗೆ ಈಗಿರುವ ಹಿರೇಹಡಗಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಲಗಿಸಲು ವ್ಯವಸ್ಥಿತ ಜಾಗವಿಲ್ಲದೆ ನೆಲದ ಮೇಲೆ ಮಲಗಿಸುವ ಪರಿಸ್ಥಿತಿ ಉಂಟಾಗಿದೆ. ಇದರಿಂದಾಗಿ ಬಾಣಂತಿ ಮತ್ತು ಮಗುವಿಗೆ ಸೊಂಕು ತಗಲುವ ಸಾಧ್ಯತೆ ಇದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಆಸ್ಪತ್ರೆಯ ಕಟ್ಟಡ ಕಾಮಗಾರಿ 10 ವರ್ಷವಾದರೂ ಏಕೆ ಪೂರ್ಣಗೊಂಡಿಲ್ಲವೆಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಕೊಡಲಾಗದೆ ಸುಮ್ಮನಾಗುತ್ತಿದ್ದಾರೆ. ಇದರಂತೆ ಹಿರೇಹಡಗಲಿಯ ಮಾಗಳ ರಸ್ತೆಯಲ್ಲಿನ ಎಎನ್ಎಂ ಕೇಂದ್ರ ಕೂಡ ಅರ್ಧಕ್ಕೆ ನಿಂತು ಹಿರೇಹಡಗಲಿ ಹೋಬಳಿ ಸುತ್ತಮುತ್ತಲ ಗ್ರಾಮಗಳ ನಾಗರಿಕರಿಗೆ ಬಹಳಷ್ಟು ತೊಂದರೆಯಾಗಿದೆ. ಆಸ್ಪತ್ರೆಯ ಅನಾನುಕೂಲತೆಯಿಂದಾಗಿ ಜನರಿಗೆ ಸಿಗುವ ಅವಶ್ಯಕ ಅನುಕೂಲತೆಗಳು ಸಿಗಲಾರದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ ಎಂದು ನೋವನ್ನು ತೋಡಿಕೊಂಡಿದ್ದಾರೆ.
ಸೋನಿಯಾ ಪ್ಯಾಕೇಜ್ ಕಾಮಗಾರಿಗಳನ್ನು ಈವರೆಗೂ ಪೂರ್ಣಗೊಳಿಸದಿರುವುದು ಸರ್ಕಾರಗಳ ಮತ್ತು ತಾಲೂಕಾಡಳಿತದ ದಿವ್ಯ ನಿರ್ಲಕ್ಷ್ಯ ಎತ್ತಿತೋರಿಸುತ್ತದೆ. ಜನರ ತೆರಿಗೆ ಹಣ ದುರ್ಬಳಕೆ ಮಾಡಿದಂತಾಗುತ್ತದೆ ಎಂದು ಎಸ್ಯೂಸಿಐ ತಾಲೂಕು ಘಟಕ ಆಡಳಿತದ ಕ್ರಮ ಖಂಡಿಸುತ್ತಾ, ಪ್ರಜಾಪ್ರಭುತ್ವದಲ್ಲಿ ಜನರ ತೆರಿಗೆ ದುಡ್ಡು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಬಳಕೆಯಾದರೂ ಜನರಿಗೆ ಅದು ಪೂರ್ಣವಾಗಿ ದೊರೆಯುತ್ತಿಲ್ಲವೆಂದು ದೂರಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಘಟಕದ ಕಾರ್ಯದರ್ಶಿ ರಹಮತ್ ಬೀರಬ್ಬಿ ಬೀರನಾಯ್ಕ, ಹನುಮೇಶ, ಅಜ್ಜಯ ಸೇರಿದಂತೆ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

