ಬಳ್ಳಾರಿ

ಮೈಲಾರ ಕ್ಷೇತ್ರದಲ್ಲಿ ವ್ಯಕ್ತಿ ಉತ್ಸವ ಸಲ್ಲದು

Published On :

ಹೂವಿನಹಡಗಲಿ: ನಾಡಿನ ಕೋಟ್ಯಂತರ ಭಕ್ತರ ಆರಾಧ್ಯ ದೈವ ಮೈಲಾರ ಸುಕ್ಷೇತ್ರದಲ್ಲಿ ವ್ಯಕ್ತಿ ಉತ್ಸವ ಸಲ್ಲದು ಎಂದು ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದ್ದಾರೆ.
ತಾಲೂಕಿನ ಮೈಲಾರ ಗ್ರಾಮದಲ್ಲಿ ಶುಕ್ರವಾರ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ಶ್ರೀ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದೀರಿ, ಅದರಂತೆಯೇ ದೇವಸ್ಥಾನಗಳು ಜೂಜಾಟಗಳ ಕೇಂದ್ರಗಳಾಗದೇ ದೇವರು ನಿತ್ಯ ಪೂಜಿಸಲ್ಪಡಬೇಕು ಎಂದರು.
ಮೈಲಾರಲಿಂಗೇಶ್ವರನ ಗೊರವರು ಪರಿವರ್ತನೆಯ ಹಾದಿ ಹಿಡಿಯಬೇಕಿದೆ. ಭಕ್ತರಲ್ಲಿ ಭೀತಿ ಹುಟ್ಟಿಸಿ ಭೀಕ್ಷೆ ಬೇಡುವ ಪರಿಪಾಠ ನಿಲ್ಲಿಸಿ, ಅದನ್ನೇ ನಿಷ್ಠೆಯಿಂದ ದೇವರ ಪಾತ್ರ ಸಲ್ಲಿಸುವಂತ ಉತ್ತಮ ಸಾಮಾಜಿಕ ಕಾರ್ಯ ಮಾಡಿದರೆ ದೇವರೇ ನಿಮ್ಮ ಮನೆಗೆ ಬರುತ್ತಾನೆಂದು ಹೇಳಿದರು.
ಕಾಲನಿ ನಿರ್ಮಿಸಲಿ: ಗುರುವಿನ ಕೊಟ್ರಯ್ಯ ಮಾತನಾಡಿ, ಮೈಲಾರಲಿಂಗೇಶ್ವರನಿಗೆ ನಾಡಿನಲ್ಲಿ ಎಲ್ಲ ವರ್ಗ, ಜನಾಂಗಗಳ ಭಕ್ತರಿದ್ದಾರೆ. ದೇವಸ್ಥಾನಕ್ಕೆ ಈ ಹಿಂದೆ 700 ಎಕರೆ ಜಮೀನು ಇತ್ತು. ಉಳುವವನೇ ಭೂಮಿ ಒಡೆಯ ಕಾನೂನಿನಡಿ ಜಮೀನು ಹಂಚಿಕೆಯಾಗಿ ಹೋಗಿದೆ. ಆದರೆ ದೇವರ ಚಾಕರಿ ಮಾಡುತ್ತಾ ಬಂದಿರುವ ಸುಮಾರು 40 ಕುಟುಂಬಗಳಿಗೆ ಇಂದಿಗೂ ವಾಸಕ್ಕೆ ಮನೆ, ಭೂಮಿ ಇಲ್ಲ. ಸರ್ಕಾರ ಮಾಸಾಶನ ನೀಡಿ ಈ ಕೂಡಲೇ ಗ್ರಾಮದಲ್ಲಿ ಗೊರವರ ಕಾಲೋನಿಯನ್ನು ಮಾಡಬೇಕೆಂದು ಒತ್ತಾಯಿಸಿದರು.
ಪಿ. ಹನುಮಂತಪ್ಪ ಮಾತನಾಡಿ, ವಿಧಾನಸೌಧದಲ್ಲಿ ಕಂಬಳಿ ಬೀಸಲಿ ಎಂದು ಕನಕ ಶ್ರೀಗಳು ಹೇಳಿಕೆ ನಿಜವಾಗಿದ್ದು, ಇಂದು ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಮೈಲಾರದಲ್ಲಿ ಕನಕ ಗುರುಪೀಠದ 7 ಎಕರೆ ನಿವೇಶನದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳು ನಿರಂತರವಾಗಿ ನಡೆಯುವಂತೆ ಮಾಡಲಿ ಎಂದು ಆಶಿಸಿದರು.
ಹಿರಿಯ ವಕೀಲ ಎಂ. ಪರಮೇಶ್ವರಪ್ಪ ಮಾತನಾಡಿದರು. ವೈ. ಷಣ್ಮುಖಪ್ಪ, ತಾಪಂ ಮಾಜಿ ಅಧ್ಯಕ್ಷ ಬಿ. ಹುಲುಗಪ್ಪ, ಜಿಪಂ ಮಾಜಿ ಸದಸ್ಯೆ ಪ್ರೇಮಕ್ಕ, ಕೆಂಚಪ್ಪ, ಗ್ರಾಪಂ ಅಧ್ಯಕ್ಷ ಚನ್ನಬಸವನಗೌಡ, ಬೀರಪ್ಪ, ಎಂ. ಭೂಪಾಲರೆಡ್ಡಿ, ಈಟಿ ಲಿಂಗರಾಜ ಸೇರಿದಂತೆ ಇತರರಿದ್ದರು.
ಡಿ. ವಿರೂಪಣ್ಣ ಪ್ರಾಸ್ತಾವಿಕ ಮಾತನಾಡಿದರು. ಪ್ರಕಾಶ ಸ್ವಾಗತಿಸಿದರು. ಬಸವರಾಜ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.