ಬಳ್ಳಾರಿ

ಎಲ್ಲರೂ ಕನ್ನಡತನ ಮೈಗೂಡಿಸಿಕೊಳ್ಳಿ: ಡಿ.ಎಲ್. ಜೋಶಿ

Published On :

ಹೊಸಪೇಟೆ: ಕನ್ನಡದ ಮೇಲಿನ ಪ್ರೀತಿ ಕೇವಲ ತೋರಿಕೆಯಾಗಿ ಉಳಿಯದೇ ಪ್ರತಿಯೊಬ್ಬರೂ ಹೃದಯದಿಂದ ಕನ್ನಡತನವನ್ನು ಮೈಗೂಡಿಸಿಕೊಳ್ಳಬೇಕು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎಲ್.ಡಿ. ಜೋಶಿ ಹೇಳಿದರು.
ನಗರದ ಬಳ್ಳಾರಿ ರಸ್ತೆ ವೃತ್ತದಲ್ಲಿ ಮಹರ್ಷಿ ಯುವಕ ಸಂಘ ಹಮ್ಮಿಕೊಂಡಿದ್ದ ಕರ್ನಾಟಕ ರಾಜೋತ್ಸವ ಹಾಗೂ ಸಾಂಸ್ಕೃತಿಕ ಹಾಗೂ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಗುಜ್ಜಲ್ ಶಿವರಾಮಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬರೂ ನಾಡು-ನುಡಿಗಾಗಿ ಹೋರಾಟ ಮಾಡುವ ಮೂಲಕ ಕನ್ನಡತವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು.
ರಾಣಿ ಸಂಯುಕ್ತಾ, ಪತ್ತಿಕೊಂಡ ಕಿಶೋರ್, ವಾಲ್ಮೀಕಿ ಗುರುಪೀಠದ ಜಿಲ್ಲಾ ಧರ್ಮದರ್ಶಿ ಬಿ.ಎಸ್. ಜಂಬಯ್ಯ ನಾಯಕ, ಜಂಬಾನಹಳ್ಳಿ ವಸಂತ, ನಗರಸಭೆ ಸದಸ್ಯ ಮಲ್ಲಪ್ಪ, ಅಬ್ದುಲ್ ಖಾದರ್ ಬಾಷಾ, ಇದ್ಲಿ ಚನ್ನಮ್ಮ, ಗುಡಗುಂಟಿ ಮಲ್ಲಿಕಾರ್ಜುನ, ವಿ. ಆಂಜನಿ, ದೇವರಮನಿ ಶ್ರೀನಿವಾಸ, ಗೋವಿಂದ ಕುಲಕರ್ಣಿ, ಎಸ್.ಆರ್. ಬದ್ರಿ, ಇ.ವಿ. ಅಂಗನಗೌಡ, ಕಣ್ಣಿ ಶ್ರೀಕಂಠ, ಗುಜ್ಜಲ್ ಹುಲುಗಪ್ಪ, ಸಿಪಿಐ ಶ್ರೀಧರ್ ದೊಡ್ಡಿ ಮತ್ತಿತರರು ಭಾಗವಹಿಸಿದ್ದರು.
ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆಗೈದು ಮುಖ್ಯಮಂತ್ರಿ ಪದಕ ಪುರಸ್ಕೃತ ಮಂಜುನಾಥ ಮೇಟಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಗುಜ್ಜಲ್ ಹುಲುಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಇ.ವಿ. ಅಂಬನಗೌಡ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.