ಬೌದ್ಧಿಕ ವಿಕಾಸಕ್ಕೆ ಯೋಗ ಪೂರಕ: ಜಂಬುನಾಥ
ಹೊಸಪೇಟೆ: ಬೌದ್ಧಿಕ ವಿಕಾಸಕ್ಕೆ ಯೋಗ ಪೂರಕವಾಗಿದ್ದು, ಕ್ರಿಯಾಶೀಲ ಚಟುವಟಿಕೆಗಳಿಗೂ ಸಹಕಾರಿಯಾಗಿದೆ ಎಂದು ಚೇತನ ಸಾಹಿತ್ಯ ಸಂಸ್ಥೆ ಅಧ್ಯಕ್ಷ ಎಚ್.ಎಂ. ಜಂಬುನಾಥ ಅಭಿಪ್ರಾಯಿಸಿದರು.
ತಾಲೂಕಿನ ಹೊಸೂರು ಗ್ರಾಮದಲ್ಲಿ ವಿಜಯನಗರ ಮಹಾವಿದ್ಯಾಲಯ ಹಮ್ಮಿಕೊಂಡಿದ್ದ ಎನ್ನೆಸ್ಸೆಸ್ ಶಿಬಿರದಲ್ಲಿ ಯೋಗಾಭ್ಯಾಸದ ಪ್ರಯೋಜನೆಗಳು ಕುರಿತು ಅವರು ಮಾತನಾಡಿದರು.
ಯೋಗ ಶಿಕ್ಷಕ ವಿ. ಹುಲುಗಪ್ಪ ಮಾತನಾಡಿ, ಯೋಗವು ಒಂದು ಶಿಕ್ಷಣವಾಗಿದೆ. ಈ ಶಿಕ್ಷಣವನ್ನು ಅಳವಡಿಸಿಕೊಂಡಾಗ ಮನುಷ್ಯನ ದೈಹಿಕ ಮತ್ತು ಮಾನಸಿಕ ಸ್ಥಿತಿ, ಗತಿಗಳು ಸುಧಾರಿಸುತ್ತವೆ. ಏಕಾಗ್ರತೆ ಮತ್ತು ನೆನಪಿನಶಕ್ತಿ ವೃದ್ಧಿಯಾಗುತ್ತದೆ. ಮುಖದಲ್ಲಿ ಕಾಂತಿ ಮತ್ತು ತೇಜಸ್ಸು ಸದಾ ಕಂಗೊಳಿಸುತಿರುತ್ತದೆ ಎಂದು ಹೇಳಿದರು.
ಯೋಗ ಸಾಧಕ ವೆಂಕಣ್ಣ ಶೆಟ್ಟಿ ಮಾತನಾಡಿ, ಯೋಗ ಮಾಡುವುದರಿಂದ ಮನುಷ್ಯನ ಆರೋಗ್ಯ ಸುಧಾರಿಸುತ್ತದೆ. ಇದರಿಂದ ವೈದ್ಯಕೀಯ ವೆಚ್ಚಗಳು ಕಡಿಮೆಯಾಗುತ್ತವೆ. ರಕ್ತದೊತ್ತಡ, ಮಧುಮೇಹ, ಮೂತ್ರಕೋಶ ತೊಂದರೆಗಳಂಥ ಮಾರಕ ರೋಗಗಳು ನಮ್ಮಿಂದ ದೂರವಾಗುತ್ತವೆ. ಇದು ವೈಜ್ಞಾನಿಕ ಸತ್ಯವೂ ಆಗಿದೆ ಎಂದು ತಿಳಿಸಿದರು.
ಯೋಗಾಭ್ಯಾಸದಲ್ಲಿ ಉಪನ್ಯಾಸಕ ನಿರಂಜನ ಎಚ್.ಎಂ., ಬಸವರಾಜ ಮೇಟಿ, ಶಿವಕುಮಾರ್ ಜಿ. ಮತ್ತು ಶಿಬಿರಾಧಿಕಾರಿ ಕೊಟ್ರೇಶ್ ದುರ್ಗದ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಹೊಸೂರು ಗ್ರಾಮದಲ್ಲಿ ಐದು ದಿನಗಳ ಕಾಲ ನಡೆದ ಶಿಬಿರದಲ್ಲಿ ಪಾಲ್ಗೊಂಡ ಎಲ್ಲ ವಿದ್ಯಾರ್ಥಿಗಳು ಪ್ರತಿದಿನ ಯೋಗಾಭ್ಯಾಸ ಮಾಡಿದರು.
--
ಸದಾಶಿವ ವರದಿ ಅನುಷ್ಠಾನಕ್ಕೆ ಒತ್ತಾಯ
ಬಳ್ಳಾರಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿಯೇ ನ್ಯಾ. ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಅಂಗೀಕರಿಸಬೇಕು ಎಂದು ದಲಿತ ಮುಖಂಡ ಜೆ.ಎಂ. ಜಯಗೋಪಾಲ್ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂದು ಹೋರಾಟಕ್ಕೆ ಬೆಂಬಲ ನೀಡಿದ್ದ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರೇ ಇದೀಗ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಸಾಮಾಜಿಕ ನ್ಯಾಯ, ಸೈದ್ಧಾಂತಿಕ ಹಿನ್ನೆಲೆಯಲ್ಲಿ ಹೋರಾಟ ನಡೆಸಿಕೊಂಡು ಬಂದಿರುವ ಸಿಎಂ, ತಳ ಸಮುದಾಯಗಳ ಸಾಮಾಜಿಕ ಭದ್ರತೆ ಗಟ್ಟಿಗೊಳಿಸಲು ಕೂಡಲೇ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಡಿಎಸ್ಎಸ್ ಜಿಲ್ಲಾ ಸಂಚಾಲಕ ವೆಂಕಟೇಶ್ ಮೂರ್ತಿ, ವಿಘ್ನೇಶ್, ವೆಂಕಟೇಶ್ ಬಾಪೂಜಿನಗರ, ಪಂಪಾಪತಿ, ನರಸಪ್ಪ, ಜೆ. ಸುಂಕಣ್ಣ, ಎಚ್. ರಮೇಶ್ ಗೋನಾಳ್, ಎಂಗೋರಪ್ಪ, ನಾಗರಾಜ್, ಶ್ರೀನಿವಾಸ ಕರ್ಚೇಡು, ಪಿ. ರಾಮಾಂಜಿನಿ, ಎಚ್. ಶಿವಪ್ಪ, ಎಚ್. ವೀರೇಶ, ನೆಟ್ಟಪ್ಪ ಸಂಗನಕಲ್ಲು, ವೆಂಕಟೇಶ್ ಸೋಮಸಮುದ್ರ, ಗುರ್ರಪ್ಪ, ಅನಿಲ್ ಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

