ಬಳ್ಳಾರಿ

ರೈಲಿಗೆ ಬಿದ್ದು ಬಾಲಕ ಸಾವು: ಪ್ರಕರಣ ದಾಖಲು

Published On :

ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಬೈಲುವದ್ದಿಗೇರಿ ಬಳಿ ಹತ್ತು ವರ್ಷದ ಬಾಲಕನೋರ್ವ ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಜರುಗಿದೆ. ಹನುಮೇಶ್ ಎಂಬ ಬಾಲಕನೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೂಲತಃ ಹೊಸಪೇಟೆ ತಾಲೂಕಿನ ಕಾಕುಬಾಳು ಗ್ರಾಮದವನಾಗಿದ್ದ ಇವನು, ಮಾನಸಿಕ ಅಸ್ವಸ್ಥನಾಗಿದ್ದನು. ಎಂದಿನಂತೆ ಬೆಳಗ್ಗೆ ಶಾಲೆಗೆ ಹೋಗಲು ಮನೆಯಿಂದ ತೆರಳಿದ ಬಾಲಕ, ಬೈಲುವದ್ದಿಗೇರಿ ಬಳಿ ರೈಲಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಈ ಬಗ್ಗೆ ಬಳ್ಳಾರಿ ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈಲಿಗೆ ಬಿದ್ದು ವೃದ್ಧ ಸಾವು
ಬಳ್ಳಾರಿ: ಬಳ್ಳಾರಿ ತಾಲೂಕಿನ ವೀರಾಪುರ ರೈಲು ನಿಲ್ದಾಣದ ಬಳಿ 65 ವರ್ಷದ ವೃದ್ಧನೋರ್ವ ರೈಲಿಗೆ ಬಿದ್ದು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವೀರಾಪುರದಿಂದ ಹೊಸಪೇಟೆಗೆ ತೆರಳಲು ಟಿಕೆಟ್ ಖರೀದಿಸಿದ್ದನು. ಆದರೆ ಆ ವೃದ್ಧನ ಹೆಸರು, ವಿಳಾಸ ಹಾಗೂ ಸಾವಿಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಈ ಬಗ್ಗೆ ಬಳ್ಳಾರಿ ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮ್ಯಾಕಲರ್ ಬೊಮ್ಮಕ್ಕ
ಕೂಡ್ಲಿಗಿ: ಕೂಡ್ಲಿಗಿಯ ಮಾಜಿ ಶಾಸಕ ಎನ್.ಟಿ. ಬೊಮ್ಮಣ್ಣ ಅವರ ಹಿರಿಯ ಸಹೋದರಿ, ತಾಲೂಕಿನ ಹೊಸಹಟ್ಟಿ ಗ್ರಾಮದ ಮ್ಯಾಕಲರ್ ಬೊಮ್ಮಕ್ಕ (95) ಸೋಮವಾರ ರಾತ್ರಿ ನಿಧನರಾಗಿದ್ದಾರೆ. ಮೃತರಿಗೆ 3 ಪುತ್ರರು, 6 ಪುತ್ರಿಯರು, ಬಂಧುಗಳಿದ್ದಾರೆ. ನಿಧನಕ್ಕೆ ಮಾಜಿ ಶಾಸಕ ಎನ್.ಟಿ. ಬೊಮ್ಮಣ್ಣ, ಜಿಪಂ ಸದಸ್ಯೆ ಸಾವಿತ್ರಮ್ಮ, ಡಾ. ಶ್ರೀನಿವಾಸ್, ಎನ್.ಟಿ. ತಮ್ಮಣ್ಣ, ಎನ್.ಪಿ. ಮಂಜುನಾಥ, ಕರಿಬಸಪ್ಪ ಗಾದ್ರಿ ಪಾಲಯ್ಯ, ಸಿ. ರಾಜಶೇಖರಪ್ಪ, ಚನ್ನಬಸಪ್ಪ. ನರಸಿಂಹನಗಿರಿ ವಿದ್ಯಾ ಸಂಸ್ಥೆ ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.