ಬಳ್ಳಾರಿ

ದೇಸಿ ರಾಸುಗಳ ಸಂರಕ್ಷಣೆಗೆ ಒತ್ತು: ಶಶಿಧರ

Published On :

ಕೂಡ್ಲಿಗಿ: ದೇಶೀಯ ರಾಸುಗಳಾದ ಅಮೃತಮಹಲ್, ಹಳ್ಳಿಕಾರ, ದೇವಣಿ, ಕಿಲಾರಿ ಸೇರಿದಂತೆ ಅನೇಕ ತಳಿಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ಪಶುವೈದ್ಯ ಇಲಾಖೆ ಹೆಚ್ಚಿನ ಆಸಕ್ತಿ ವಹಿಸುತ್ತಿದೆ ಎಂದು ಬಳ್ಳಾರಿ ಸಮೀಪದ ಹಗರಿ ಸಹಾಯಕ ಪಶುವೈದ್ಯ ತರಬೇತಿ ಕೇಂದ್ರ ವೈದ್ಯಾಧಿಕಾರಿ ಡಾ. ಶಶಿಧರ ತಿಳಿಸಿದರು.
ತಾಲೂಕಿನ ಚಿಕ್ಕಜೋಗಿಹಳ್ಳಿ ಪಶು ಚಿಕಿತ್ಸಾಲಯದಲ್ಲಿ ಇತ್ತೀಚಿಗೆ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ರಾಯೋಗಿಕ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಜನರು ಇಂದಿಗೂ ದೇಶೀಯ ತಳಿಗಳ ಹಸುಗಳನ್ನು ಸಾಕಲು ಆಸಕ್ತಿ ಹೊಂದಿರುವ ಕಾರಣ ಅಂಥ ತಳಿಗಳನ್ನು ವೃದ್ಧಿಸಲು ಪಶುವೈದ್ಯ ಇಲಾಖೆ ಮುಂದಾಗಿದೆ ಎಂದು ತಿಳಿಸಿದರು.
ಸ್ಥಳೀಯ ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಅನಿಲ್‌ಕುಮಾರ್ ಮಾತನಾಡಿ, ವಿಶ್ವದಲ್ಲಿಯೇ ದೇಶ ಹೆಚ್ಚು ಹಾಲು ಉತ್ಪಾದಿಸುತ್ತಿದೆ. ಪಶುವೈದ್ಯ ಇಲಾಖೆಯ ಉತ್ತಮ ವೈಜ್ಞಾನಿಕ ಚಿಂತನೆ ಪೂರಕವಾಗಿದೆ ಎಂದು ತಿಳಿಸಿದರು.
ಹಗರಿ ಕೃಷಿ ತರಬೇತಿ ಕೇಂದ್ರದ ವಿಜ್ಞಾನಿ ಡಾ. ರಮೇಶ, ಸೀಂಡ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ನಿರ್ದೇಶಕ ಡಾ. ಬಾಳೆಕಾಯಿ, ಸ್ಥಳೀಯ ಪಶುವೈದ್ಯ ಚಿಕಿತ್ಸಾಲಯ ಪರೀಕ್ಷಕ ಸಂಜೀವ ರೆಡ್ಡಿ, ಮಂಗಳಾ, ನಾಗರಾಜ, ಮಹಬಾಷಾ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.