ಸಂಭ್ರಮದ ದೇವರ ವಿವಾಹ ಮಹೋತ್ಸವ
ಕಂಪ್ಲಿ: ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನ ಸಮಿತಿಯವರು ಪೇಟೆ ಬಸವೇಶ್ವರ ದೇವರ ಮತ್ತು ನೀಲಮ್ಮ ದೇವಿಯ ವಿವಾಹ ಮಹೋತ್ಸವವನ್ನು ಶ್ರದ್ಧಾ ಭಕ್ತಿಗಳಿಂದ ನೆರವೇರಿಸಿದರು.
ಡಿ. 12ರ ಗುರುವಾರ ಸಂಜೆ 4 ಗಂಟೆಗೆ ನಡೆಯಲಿರುವ ಪೇಟೆ ಬಸವೇಶ್ವರ ದೇವರ ಮತ್ತು ನೀಲಮ್ಮ ದೇವಿಯ ಜೋಡಿ ರಥೋತ್ಸವ ಅಂಗವಾಗಿ ಈ ಮಂಗಲ ಕಾರ್ಯಕ್ರಮ ನಡೆಸಲಾಗಿದ್ದು, ಪೇಟೆ ಬಸವೇಶ್ವರ ದೇವರ ಮನೆತನದವರಾಗಿ ಗೌರಮ್ಮ ಮತ್ತು ನಿತ್ಯಾನಂದಶಾಸ್ತ್ರಿ ಇವರು ರು. 24,501 ಮಾಂಗಲ್ಯ ಪದಕದ ಲಿಲಾವು ನಡೆಸಿದರು. ನೀಲಮ್ಮ ದೇವಿಯ ಮನೆತನದವರಾಗಿ ಗೊಗ್ಗ ಶಾಂತಾ ಮತ್ತು ಗೊಗ್ಗ ಚನ್ನಬಸವರಾಜ ಇವರು ರು. 17,001 ಮಾಂಗಲ್ಯ ಪದಕದ ಸೇವೆ ಲಿಲಾವು ನಡೆಸಿದರು.
ಮಹೋತ್ಸವದಲ್ಲಿ ಗೌರಮ್ಮ ಮತ್ತು ನಿತ್ಯಾನಂದಶಾಸ್ತ್ರಿ ಬಸವೇಶ್ವರ ದೇವರ ಮನೆತನದವರಾಗಿ, ಮುಕ್ಕುಂದಿ ರುದ್ರಾಣಿ ಮತ್ತು ಮುಕ್ಕುಂದಿ ಬಸವರಾಜ್ ನೀಲಮ್ಮ ದೇವಿ ಮನೆತನದವರಾಗಿ ಮಾಂಗಲ್ಯ ಕಾರ್ಯಕ್ರಮ ನಡೆಸಿದರು. ವಿಶ್ವನಾಥ ಶಾಸ್ತ್ರಿ ಹಾಗೂ ಸಾಂಗತ್ರಯ ಸಂಸ್ಕೃತ ಪಾಠ ಶಾಲೆ ವಿದ್ಯಾರ್ಥಿಗಳು ಪೌರೋಹಿತ್ಯ ನೆರವೇರಿಸಿದರು. ಅರ್ಚಕ ಬಸವರಾಜಸ್ವಾಮಿ ಇದ್ದರು.
ದೇವಸ್ಥಾನ ಕಮಿಟಿ ಅಧ್ಯಕ್ಷ ಡಿ. ವೀರಪ್ಪ, ಧರ್ಮಕರ್ತ ಪಿ.ಎ. ಬೆನಕನಾಳಮಠ, ಕಾರ್ಯದರ್ಶಿ ಕಪ್ಪರದ ಕಾಶೀನಾಥಸ್ವಾಮಿ, ಸಹ ಕಾರ್ಯದರ್ಶಿ ಯು.ಎಂ. ವಿದ್ಯಾಶಂಕರ, ಸದಸ್ಯರಾದ ಸಿ.ಕೆ. ಶಿವಮೂರ್ತಿ ಸ್ವಾಮಿ, ಎಸ್. ಬಂಡಯ್ಯಸ್ವಾಮಿ, ಮುಕ್ಕುಂದಿ ಬಸವರಾಜ, ಸಿ.ಕೆ. ಪಡದಯ್ಯಸ್ವಾಮಿ, ಬಣಗಾರ ಚಂದ್ರಶೇಖರಪ್ಪ, ಪುಟ್ಟಿ ಬಸವನಗೌಡ, ವಾಲಿ ವಿದ್ಯಾಧರ, ಮಣ್ಣೂರು ಶರಣಪ್ಪ, ಬಡಿಗೇರ ವೀರೇಶಪ್ಪ, ಪಾವಾಡಶೆಟ್ಟಿ ಎರ್ರಿಸ್ವಾಮಿ, ಭತ್ತದ ಮಂಜುನಾಥ, ಸಾಂಗತ್ರಯ ಸಂಸ್ಕೃತ ಪಾಠ ಶಾಲೆ ಸಮಿತಿ ಅಧ್ಯಕ್ಷ ಜವಳಿ ಚನ್ನಬಸಪ್ಪ, ಎಚ್. ಗವಿಸಿದ್ದಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

