ಜಿಎಸ್ಸೆಸ್ ಪ್ರೀತಿ, ಸ್ನೇಹದ ಕವಿ: ಹಂಪನಗೌಡ
ಬಳ್ಳಾರಿ: ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪನವರು ಕನ್ನಡ ಸಾಹಿತ್ಯ ಲೋಕದ ಸಮನ್ವಯದ ಕವಿಯಾಗಿ ಪ್ರೀತಿ, ಸ್ನೇಹಗಳ ಅವಶ್ಯಕತೆಯನ್ನು ತಮ್ಮ ಸಾಹಿತ್ಯದ ಮೂಲಕ ಮನಮುಟ್ಟುವಂತೆ ಮಾಡಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಎಚ್. ಹಂಪನಗೌಡ ತಿಳಿಸಿದರು.
ಮಂಗಳವಾರ ನಗರದ ಅಲ್ಲಂ ಸುಮಂಗಳಮ್ಮ ಮಹಿಳಾ ಕಾಲೇಜಿನಲ್ಲಿ ಹರಿಹರ-ರಾಘವಾಂಕ ಕನ್ನಡ ಸಂಘದಿಂದ ಏರ್ಪಡಿಸಿದ್ದ ಡಾ. ಜಿ.ಎಸ್. ಶಿವರುದ್ರಪ್ಪ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿವರುದ್ರಪ್ಪನವರು ಜನಪರ ಮತ್ತು ಜೀವಮುಖಿ ಸಾಹಿತ್ಯವನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ ಎಂದರು.
ಉಪನ್ಯಾಸಕರಾದ ಕಾಳಪ್ಪ ಪತ್ತಾರ್ ಮಾತನಾಡಿ, ಜಿಎಸ್ಎಸ್ ಅವರ ಕಾವ್ಯಗಳಲ್ಲಿ ಜೀವನ ಪ್ರೀತಿಯಿಂದು ಕೂಡಿತ್ತು ಎಂದರು.
ವೇದಿಕೆಯಲ್ಲಿ ಕವಿಯತ್ರಿ ಎ.ಎಂ. ಜಯಶ್ರೀ, ಬಿ. ಹೇಮನಗೌಡ, ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ಎಎಸ್ಎಂ ಪದವಿ ಕಾಲೇಜು ಪ್ರಾಂಶುಪಾಲ ತೇಜಸ್ ಮೂರ್ತಿ ಮತ್ತು ಪಿಯು ಕಾಲೇಜ್ ಪ್ರಾಂಶುಪಾಲ ಆನಂದ್ ಉಪಸ್ಥಿತರಿದ್ದರು. ಬೆಳಗಲ್ಲು ಪ್ರಕಾಶ್ ಮತ್ತು ಎಸ್. ಲಕ್ಷ್ಮಿ, ಡಾ. ಜಿ.ಎಸ್. ಶಿವರುದ್ರಪ್ಪನವರ ಹಾಡುಗಳನ್ನು ಹಾಡುವ ಮೂಲಕ ಸ್ವರ ಶ್ರದ್ಧಾಂಜಲಿ ಸಲ್ಲಿಸಿದರು. ಸರೋಜ ಬ್ಯಾತನಾಳ್ ಡಾ. ಜಿಎಸ್ಸೆಸ್ ಕುರಿತು ಸ್ವ-ರಚಿತ ಕವನವನ್ನು ಪ್ರಸ್ತುತಪಡಿಸಿದರು.
ಸಭೆಯಲ್ಲಿ ಯೋಗಾ ನಾಗರಾಜ್, ಬಿಸಲಳ್ಳಿ ಬಸವರಾಜ್, ಅರವಿಭೀಮನಗೌಡ, ಚಂದ್ರಶೇಖರ್ ಆಚಾರ್ ಮತ್ತಿತರರಿದ್ದರು. ಮೇಡಂ ಕ್ಯೂರಿ ಅಕಾಡೆಮಿ ಅಧ್ಯಕ್ಷ ಎಸ್. ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

