ರಾಷ್ಟ್ರಕವಿ ಜಿಎಸ್ಸೆಸ್‌ಗೆ ಶ್ರದ್ಧಾಂಜಲಿ
ಹಗರಿಬೊಮ್ಮನಹಳ್ಳಿ: ಪಟ್ಟಣದ ರಾಷ್ಟ್ರೋತ್ಥಾನ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರಿಗೆ ವಿದ್ಯಾರ್ಥಿಗಳು ಶ್ರದ್ಧಾಂಜಲಿ ಸಲ್ಲಿಸಿದರು.
ಕಾಲೇಜಿನ ಪ್ರಾಚಾರ್ಯ ಚಂದ್ರಕಾಂತ ಪಾಟೀಲ್ ಮಾತನಾಡಿ, ತಮ್ಮ ಬದುಕಿನುದ್ದಕ್ಕೂ ಯಾವುದೇ ಹಗರಣ ಮತ್ತು ವಿವಾದಗಳಿಗೆ ಸಿಲುಕದೇಯೆ ಕನ್ನಡ ತಾಯಿಯ ಸೇವೆ ಮಾಡಿದ ಜಿಎಸ್‌ಎಸ್ ಕರುನಾಡಿನ ಶ್ರೇಷ್ಠ ಕವಿ ಎಂದು ಗುಣಗಾನ ಮಾಡಿದರು.
ಸರಳ ಮತ್ತು ಸಜ್ಜನಿಕೆ ಮೈಗೂಡಿಸಿಕೊಂಡು ಇತರ ಯುವ ಸಾಹಿತಿಗಳನ್ನು ಪ್ರೋತ್ಸಾಹಿಸುತ್ತಿದ್ದ ಜಿಎಸ್‌ಎಸ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬರದಿರುವುದಕ್ಕೆ ವಿಷಾದಿಸಿದರು. ಉಪನ್ಯಾಸಕರು, ಸಿಬ್ಬಂದಿ ಶ್ರದ್ಧಾಂಜಲಿ ಸಲ್ಲಿಸಿದರು.
ನಾಡಿಗೆ ತುಂಬಲಾರದ ನಷ್ಟ: ರಾಷ್ಟ್ರಕವಿ ಜಿಎಸ್‌ಎಸ್ ಆಗಲಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಎಂದು ಹಗರಿಬೊಮ್ಮನಹಳ್ಳಿ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಮಾತಾಗ್ಯಾಸ್ ಯರ್ರಿಸ್ವಾಮಿ ಹೇಳಿದರು.
ಹಿರಿಯ ಸಾಹಿತಿ ಹಿ.ಮ. ಗುರುಬಸವರಾಜ, ಲೇಖಕ ಎ. ಚಿದಾನಂದಗೌಡ, ಸಾಹಿತಿ ಸುಧಾ ಚಿದಾನಂದಗೌಡ, ಹುರಕಡ್ಲಿ ಶಿವಕುಮಾರ, ಕಥೆಗಾರರಾದ ಶಿವಾನಂದ ಶಿಶುವಿನಹಳ್ಳಿ, ಉಪ್ಪಾರ ಬಸಪ್ಪ, ಓಂ. ಪ್ರಕಾಶ, ಪರ್ವತಪ್ಪ, ಪ್ರಸಾದ ಸೇರಿದಂತೆ ಹಲವು ಸಾಹಿತಿ, ಬರಹಗಾರರು ಸಂತಾಪ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

