ಮಕ್ಕಳಿಗೆ ಮೌಂಟ್ ಕಾರ್ಮೆಲ್ ಶಾಲೆ ವರದಾನ
ಹೂವಿನಹಡಗಲಿ: ಶಿಸ್ತಿನ ಜತೆಗೆ ಉತ್ತಮ ಶಿಕ್ಷಣ ನೀಡುತ್ತಿರುವ ಮೌಂಟ್ ಕಾರ್ಮೆಲ್ ಶಾಲೆ ಗ್ರಾಮೀಣ ಮಕ್ಕಳಿಗೆ ವರದಾನವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಕೊಟ್ರೇಶ್ ಹೇಳಿದರು.
ಪಟ್ಟಣದ ಮೌಂಟ್ ಕಾರ್ಮೆಲ್ ಶಾಲೆಯ 4ನೇ ವರ್ಷದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತಮ ಶೈಕ್ಷಣಿಕ ಪರಿಸರ ಹೊಂದಿರುವ ಶಾಲೆ ಆರಂಭವಾದ ಕೆಲವೇ ದಿನಗಳಲ್ಲಿ ಹೆಮ್ಮರವಾಗಿ ಬೆಳೆದಿದೆ ಎಂದು ಪ್ರಶಂಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾರ್ಮೆಲ್ ಜ್ಞಾನ ಎಜ್ಯುಕೇಶನ್ ಟ್ರಸ್ಟ್ ಕಾರ್ಯದರ್ಶಿ ಎಲಿಯಾಸ್ ಡೇನಿಯಲ್ ಮಾತನಾಡಿ, ಸರ್ವ ಜನಾಂಗದವರಿಗೂ ಉತ್ತಮ ಶಿಕ್ಷಣ ನೀಡುವ ಮೂಲಕ ಕಾರ್ಮೆಲ್ ಶಾಲೆಯಲ್ಲಿ ಸರ್ವಧರ್ಮ ಸಮನ್ವಯ ಸಾಧಿಸಿದೆ ಎಂದರು. ಮಂಗಳೂರಿನ ಸಮಾಜ ಸೇವಕರಾದ ಪ್ಲೋರಾ, ಜಾನ್ ಹಿಸ್ಲೋಪ್ ಅವರನ್ನು ಸನ್ಮಾನಿಸಲಾಯಿತು. ಪಿ.ಎಸ್.ಅರವಿಂದನ್, ಸಿಪ್ರಿಯಾನ್ ಫೆರ್ನಾಂಡಿಸ್, ರಾಜೇಶ್, ಸಿಸ್ಟರ್ ಐಡಾ ಭಾಗವಹಿಸಿದ್ದರು. ಸಿಲ್ವೆಸ್ಟರ್ ಫಿರೇರಾ ಸ್ವಾಗತಿಸಿದರು. ನಭೀಮಾ, ಅನಿತಾ, ಎಂ. ದಯಾನಂದ ನಿರೂಪಿಸಿದರು. ಶಾಲೆಯ ಪ್ರಾಚಾರ್ಯ ಪ್ರಕಾಶ್ ತಾವ್ರೋ ವಂದಿಸಿದರು. ನಂತರ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಜಿಎಸ್ಸೆಸ್ ನಿಧನಕ್ಕೆ ಸಂತಾಪ
ಕೂಡ್ಲಿಗಿ: ಎಲ್ಲ ವರ್ಗದ ಜನತೆಗೆ ತನ್ನ ಕಾವ್ಯಗಳ ಮೂಲಕ ಹತ್ತಿರವಾಗಿರುವ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ನಿಧನಕ್ಕೆ ತಾಲೂಕಿನ ಅನೇಕ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಬುದ್ದಿ ಜೀವಿಗಳು, ಮಠಾಧೀಶರು ಸಂತಾಪ ವ್ಯಕ್ತಪಡಿಸಿದ್ದಾರೆ. ಕಾನಮಡುಗು ದಾಸೋಹ ಮಠದ ಧರ್ಮಾಧಿಕಾರಿ ದಾ.ಮ. ಶರಣಾರ್ಯ, ಹಿರೇಮಠ ಶ್ರೀ ಪ್ರಶಾಂತ ಸಾಗರ ಸ್ವಾಮೀಜಿ, ಹಿರಿಯ ನಾಗರಿಕ ಕೆ. ಮಲ್ಲಣ್ಣ, ಯುವ ಸಾಹಿತಿ ಡಾ. ಅರುಣ ಜೋಳದಕೂಡ್ಲಿಗಿ, ತಾಲೂಕು ಕಸಾಪ ಅಧ್ಯಕ್ಷ ಎಸ್.ಎಂ. ಗುರುಪ್ರಸಾದ್, ಕಾರ್ಯದರ್ಶಿ ಕೆ.ಎಂ. ವೀರೇಶ್, ನಿಕಟಪೂರ್ವ ಅಧ್ಯಕ್ಷ ಎನ್.ಎಂ. ರವಿಕುಮಾರ್, ಕನ್ನಡ ಮಿತ್ರ ಸಂಘದ ಅಧ್ಯಕ್ಷ ಆರ್.ಕೆ. ಶೆಟ್ರು, ಸಾಹಿತಿಗಳಾದ ಡಾ. ವೆಂಕಟಗಿರಿ ದಳವಾಯಿ, ಸಿದ್ಧರಾಮ ಹಿರೇಮಠ, ಡಾ. ಎ. ವೃಷಭೇಂದ್ರಾಚಾರ್, ಕಂಪ್ಲಿ ಶಿವಕುಮಾರ್, ಬ್ಯಾಳಿ ವಿಜಯಕುಮಾರಗೌಡ ಇತರರಿದ್ದರು.
ಕಾಂಗ್ರೆಸ್ಗೆ ನೇಮಕ
ಕಂಪ್ಲಿ: ಶಿಕ್ಷಣ ಮತ್ತು ಪದವಿಧರ ವಿಭಾಗದ ಕಂಪ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಬಿ. ವಿರೂಪಾಕ್ಷಗೌಡ ಅವರನ್ನು ನೇಮಕ ಮಾಡಲಾಗಿದೆ ಎಂದು ಶಿಕ್ಷಣ ಮತ್ತು ಪದವೀಧರ ಕಾಂಗ್ರೆಸ್ ವಿಭಾಗದ ಬಳ್ಳಾರಿ ಜಿಲ್ಲಾಧ್ಯಕ್ಷ ತಾರಿಹಳ್ಳಿ ವೆಂಕಟೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಗ್ಗಲ್ ವಿ. ಶಂಕ್ರಪ್ಪ ಅವರನ್ನು ಶಿಕ್ಷಣ ಮತ್ತು ಪದವೀಧರ ವಿಭಾಗದ ಕೋಳೂರು ಮತ್ತು ಕುರುಗೋಡ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ನೇಮಕಕ್ಕೆ ಸಹಕರಿಸಿದ ಕೆಪಿಸಿಸಿ ಮಾನವ ಹಕ್ಕುಗಳ ಮತ್ತು ಕಾನೂನು ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಗುಜ್ಜಲ ನಾಗರಾಜ, ಪುರಸಭೆ ಸದಸ್ಯ ಎಂ. ರಾಜೇಶ್ ಹಾಗೂ ಎಲ್ಲ ಕಾಂಗ್ರೆಸ್ ಮುಖಂಡರ ಸಹಕಾರಕ್ಕೆ ನೇಮಕಗೊಂಡ ಅಧ್ಯಕ್ಷರು ಅಭಿನಂದಿಸಿದ್ದಾರೆ.
ಜಿಎಸ್ಸೆಸ್ ಸಮನ್ವಯದ ಕವಿ
ಕಂಪ್ಲಿ: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರು ಸಮನ್ವಯದ ಕವಿಯಾಗಿದ್ದರು ಎಂದು ಕನ್ನಡ ಹಿತರಕ್ಷಕ ಸಂಘ ನಿರ್ದೇಶಕ ಕರೇಕಲ್ ಶಂಕ್ರಪ್ಪ ಹೇಳಿದರು. ಪಟ್ಟಣದ ವಿಕಾಸ್ ಐಟಿಐ ಕಾಲೇಜಿನಲ್ಲಿ ಸಿರಿಗನ್ನಡ ಬಳಗ ಮಂಗಳವಾರ ಹಮ್ಮಿಕೊಂಡಿದ್ದ ಜಿಎಸ್ಎಸ್ ಸಂತಾಪ ಸೂಚನಾ ಸಭೆಯಲ್ಲಿ ಮಾತನಾಡಿದರು. ನಿವೃತ್ತ ಹಿಂದಿ ಶಿಕ್ಷಕ ಯು. ಸುಬ್ರಹ್ಮಣ್ಯಾಚಾರ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕ.ಮ. ಹೇಮಯ್ಯಸ್ವಾಮಿ, ಅಧ್ಯಕ್ಷ ಬೂದಗುಂಪಿ ಅಂಬಣ್ಣ, ತಾಲೂಕು ಕಸಾಪ ಘಟಕ ಅಧ್ಯಕ್ಷ ಅಗಳಿ ಪಂಪಾಪತಿ, ಬಂಗಿ ದೊಡ್ಡ ಮಂಜುನಾಥ, ಅಂಬಿಗರ ಮಂಜುನಾಥ, ರಟ್ಟಿಹಳ್ಳಿ ರವೀಂದ್ರನಾಥ, ಎಚ್.ಎನ್. ನಟರಾಜ್, ರುಕ್ಮಣಬಾಬುರಾಜ್ ಇದ್ದರು.
ಜಿಎಸ್ಎಸ್ ನಿಧನ: ಪ್ರಜ್ಞೆ ಪ್ರತಿಷ್ಠಾನದಿಂದ ಸಂತಾಪ
ಬಳ್ಳಾರಿ: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ನಿಧನಕ್ಕೆ ಇಲ್ಲಿನ ಪ್ರಜ್ಞೆ ಪ್ರತಿಷ್ಠಾನ ಸಂತಾಪ ವ್ಯಕ್ತಪಡಿಸಿದೆ.ಕಾವ್ಯ ಮಿಮಾಂಸೆ, ವಿಮರ್ಶಾ ಕ್ಷೇತ್ರದಲ್ಲೂ ಸಾಧನೆ ಗಮನಾರ್ಹ. ಜಿಎಸ್ಎಸ್ ಅವರ ಪಾಂಡಿತ್ಯ ಪ್ರತಿಭೆಗೆ ಸಾಕ್ಷಿ. ಕೇಂದ್ರ ಸಾಹಿತ್ಯ ಅಕಾಡೆಮಿ, ಪಂಪ ಪ್ರಶಸ್ತಿ ಸೇರಿದಂತೆ ಅತ್ಯುನ್ನತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು, ಜನಸಾಮಾನ್ಯರ ಹತ್ತಿರಕ್ಕೆ ಕನ್ನಡ ಕಾವ್ಯ ಕೊಂಡೊಯ್ದ ದಾರ್ಶನಿಕ ಕವಿ. ಜೀವನ ಪ್ರೀತಿಯ ಗಾರುಡಿಗ ಕವಿ ಇನ್ನಿಲ್ಲವೆಂಬುದು ನೋವುಂಟು ಮಾಡಿದ್ದು, ಜಿಎಸ್ಸೆಸ್ರ ನಿಧನಕ್ಕೆ ಪ್ರಜ್ಞೆ ಪ್ರತಿಷ್ಠಾನದ ಅಧ್ಯಕ್ಷ ಸಿದ್ಧರಾಮ ಕಲ್ಮಠ, ವೆಂಕಟೇಶ ಉಪ್ಪಾರ, ಟಿ.ಎಂ. ಪಂಪಾಪತಿ, ಗೋವರ್ಧನ ರೆಡ್ಡಿ ಸಂತಾಪ ಸೂಚಿಸಿದ್ದಾರೆ.
ಯುವ ಕುರುಬ ಸಂಘದ ಪದಾಧಿಕಾರಿಗಳ ಆಯ್ಕೆ
ಕೂಡ್ಲಿಗಿ: ತಾಲೂಕಿನ ಕೆಂಚಮಲ್ಲನಹಳ್ಳಿ ಗ್ರಾಮದಲ್ಲಿ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಗ್ರಾಮ ಘಟಕಕ್ಕೆ ಪದಾಧಿಕಾರಿಗಳನ್ನು ರಾಜ್ಯಾಧ್ಯಕ್ಷ ಬಿ.ಎಂ. ಪಾಟೀಲ್ ಆದೇಶದಂತೆ ಜಿಲ್ಲಾಧ್ಯಕ್ಷ ಕೆ. ಮಂಜುನಾಥ ಆಯ್ಕೆ ಮಾಡಿದ್ದಾರೆ. ಎಚ್.ಎಂ. ಅಜ್ಜಪ್ಪ (ಅಧ್ಯಕ್ಷ), ಎಸ್. ಗುಡ್ಡಪ್ಪ (ಗೌರವಾಧ್ಯಕ್ಷ), ಜಿ. ಕರಿಬಸಪ್ಪ (ಉಪಾಧ್ಯಕ್ಷ), ವೈ. ತಿಪ್ಪೇರುದ್ರ (ಪ್ರಧಾನ ಕಾರ್ಯದರ್ಶಿ), ಆರ್.ಎಚ್. ಜಗದೀಶ್ ಖಜಾಂಚಿ), ಎಚ್ಎಸ್ಎನ್ ಮಂಜುನಾಥ, ಜಿ.ನಾಗರಾಜ, ಕೆ.ಪಿ. ಗಂಗಾಧರ, ವೈ.ಜಿ. ಅಶೋಕ (ಸಂಘಟನಾ ಕಾರ್ಯದರ್ಶಿಗಳು), ಕೆ. ನಿಂಗಪ್ಪ, ವೈ. ಶರಣಪ್ಪ, ಜಿ. ಬಸವರಾಜ, ಎಚ್.ಜಿ. ರೇವಣ್ಣ, ವೈ.ಬಿ. ಬಸವರಾಜ (ಸಲಹಾ ಸಮಿತಿ ಸದಸ್ಯರು), ಎಚ್. ರಮೇಶ್, ವೈ.ಬಿ. ಶಿವರಾಜ, ಎಸ್. ಮಹಾಂತೇಶ್, ಎಸ್.ಜಿ. ಶಿವರಾಜ, ಎಸ್. ಚಂದ್ರಪ್ಪ, ವೈ. ಭರಮಪ್ಪ, ಜೆ. ಚಂದ್ರಪ್ಪ (ಸದಸ್ಯರು). ಸಮಾಜದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವುದು, ಪರಿಸರ ಜಾಗೃತಿ ಸೇರಿದಂತೆ ಸಂಸ್ಕೃತಿ, ಭಾಷೆ, ತಾಯ್ನೆಲಕ್ಕೆ ಹೆಚ್ಚಿನ ಮನ್ನಣೆಗೆ ಒತ್ತು ನೀಡುವ ಮೂಲಕ ಕ್ರಿಯಾಶೀಲತೆಯಿಂದ ಸಂಘದ ಚಟುವಟಿಕೆಯಲ್ಲಿ ತೊಡಗುವಂತೆ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
ತರಬೇತಿಗೆ ಅರ್ಜಿ ಆಹ್ವಾನ
ಬಳ್ಳಾರಿ: ವಾರ್ತಾ ಇಲಾಖೆಯು ವಿಶೇಷ ಘಟಕ ಯೋಜನೆಯಡಿ ಆಸಕ್ತ ಪರಿಶಿಷ್ಟ ಜಾತಿಯ 40 ನಿರುದ್ಯೋಗಿ ಪದವೀಧರ ಯುವಕ-ಯುವತಿಯರಿಗೆ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ತಾಂತ್ರಿಕ ವೃತ್ತಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ ಎಂದು ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ತಿಳಿಸಿದ್ದಾರೆ. ತರಬೇತಿಯು ಒಂದು ತಿಂಗಳ ಸರ್ಟಿಫಿಕೇಟ್ ಕೋರ್ಸ್ ಆಗಿದ್ದು, ಮೈಸೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರದಲ್ಲಿ 2014ರ ಜನವರಿ, ಫೆಬ್ರರಿಯಲ್ಲಿ ನಡೆಯಲಿದೆ. ಛಾಯಾಗ್ರಹಣ, ಸಂಕಲನ, ಮಲ್ಟಿ ಮೀಡಿಯಾದಲ್ಲಿ ತರಬೇತಿ ನೀಡಲಾಗುವುದು. ಈ ಅವಧಿಯಲ್ಲಿ ಉಚಿತ ಊಟ, ವಸತಿ ಸೌಕರ್ಯ ಕಲ್ಪಿಸಲಾಗುವುದು. ಅಭ್ಯರ್ಥಿಗಳು ಯಾವುದೇ ಪದವಿ ಹೊಂದಿದ್ದು, ಕಂಪ್ಯೂಟರ್ ಜ್ಞಾನವುಳ್ಳವರಿಗೆ ಆದ್ಯತೆ ನೀಡಲಾಗುವುದು. ವಯೋವುತಿ 21ರಿಂದ 35 ವರ್ಷದೊಳಗಿರಬೇಕು. ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆಸಕ್ತರು ತಮ್ಮ ಹೆಸರು, ವಯಸ್ಸು, ವಿಳಾಸ, ವಿದ್ಯಾರ್ಹತೆ, ಜಾತಿ ಮತ್ತಿತರ ಸ್ವ-ವಿವರವುಳ್ಳ ಮಾಹಿತಿಯನ್ನು ಬಿಳಿ ಹಾಳೆ ಮೇಲೆ ಬೆರಳಚ್ಚುಗೊಳಿಸಿ, ಸ್ಪಷ್ಟವಾಗಿ ಬರೆದ ಅರ್ಜಿಯನ್ನು ದೃಢೀಕೃತ ದಾಖಲೆಗಳೊಂದಿಗೆ ನಿರ್ದೇಶಕರು, ವಾರ್ತಾ ಇಲಾಖೆ, ವಾರ್ತಾ ಸೌಧ, ನಂ. 17, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು-1 ಇವರಿಗೆ ಡಿ. 31ರೊಳಗಾಗಿ ಸಲ್ಲಿಸಬೇಕು. ಲಕೋಟೆಯ ಮೇಲೆ ತಾಂತ್ರಿಕ ವೃತ್ತಿ ತರಬೇತಿಗಾಗಿ ಅರ್ಜಿ ಎಂದು ನಮೂದಿಸಿರಬೇಕು.ಹೆಚ್ಚಿನ ಮಾಹಿತಿಗಾಗಿ ದೂರವಾಣಿ: 080-22028052, 56ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

