ಬಳ್ಳಾರಿ

ಸಾಮಾಜಿಕ ನ್ಯಾಯಕ್ಕೆ ಶ್ರಮಿಸಿದ ಘೋರ್ಪಡೆ

Published On :

ಸಂಡೂರು: ಐವತ್ತು ವರ್ಷಗಳ ಕಾಲ ರಾಜಕೀಯ ನಡೆಸಿದ ಎಂ.ವೈ. ಘೋರ್ಪಡೆಯವರ ರಾಜಕೀಯ ಬದುಕು ಸಾಮಾಜಿಕ ನ್ಯಾಯ ನೀಡುವುದಕ್ಕೆ ಮೀಸಲಾಗಿತ್ತು ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ವಿ.ವೈ. ಘೋರ್ಪಡೆ ಅವರು ತಿಳಿಸಿದರು.
ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಈಚೆಗೆ ಏರ್ಪಡಿಸಿದ್ದ ಘೋರ್ಪಡೆ ಅವರ ನುಡಿ ನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂಡಿಯನ್ ಫಾರೆನ್ ಸರ್ವಿಸ್ ಪರೀಕ್ಷೆ ಪಾಸಾಗಿದ್ದ ಅವರು ಸ್ಮಯೋರ್ ಕಂಪನಿಯಲ್ಲಿ ಆಫೀಸ್ ಸೂಪರಿಟೆಂಡೆಂಟ್ ಆಗಿ ಸೇರಿಕೊಂಡ ಅವರ ಮುಖ್ಯ ಧ್ಯೇಯ ಜನಸೇವೆ ಆಗಿತ್ತು. ಆಧುನಿಕ ಪ್ರಜಾಪ್ರಭುತ್ವದಲ್ಲಿ ಪ್ರಚಂಡ ಬದಲಾವಣೆಗಳು ಆಗುತ್ತಿರುವ ಸಂದರ್ಭದಲ್ಲಿ ಸಂಸ್ಥಾನದ ಒಡೆಯರಾಗಿದ್ದ ಘೋರ್ಪಡೆ ಅವರು ಸ್ಥಿತಪ್ರಜ್ಞರಾಗಿದ್ದುಕೊಂಡು ಹರಿದು ಹಂಚಿ ಹೋಗುತ್ತಿದ್ದ ಸಂಡೂರನ್ನು ಒಂದು ತಾಲೂಕು ಕೇಂದ್ರವನ್ನಾಗಿ ಉಳಿಸಿಕೊಂಡ ಕೀರ್ತಿ ಅವರಿಗೆ ಸಲ್ಲಬೇಕೆಂದರು.
ಸಾಂಸ್ಕೃತಿಕ ಸಜ್ಜನ ಡಾ. ಎಂ.ವೈ. ಘೋರ್ಪಡೆ ಎಂಬ ಪುಸ್ತಕ ಬಿಡುಗಡೆ ಮಾಡಿದ ಶಾಸಕ ಈ. ತುಕಾರಾಂ ಮಾತನಾಡಿ, ರಾಜಕೀಯ ಕಲುಷಿತವಾಗುತ್ತಿದೆ. ಮೌಲ್ಯಗಳು ಹಾಳಾಗುತ್ತಿರುವುದನ್ನ ಕಂಡ ಘೋರ್ಪಡೆಯವರು 2004ರಲ್ಲಿ ರಾಜಕೀಯದಿಂದ ದೂರ ಉಳಿಯಲು ಇವೇ ಕಾರಣಗಳಾಗಿದ್ದವು ಎಂಬುದರಲ್ಲಿ ಎರಡು ಮಾತಿಲ್ಲ ಎಂದರು.
ಪ್ರಭುದೇವರ ಜನಕಲ್ಯಾಣ ಸಂಸ್ಥೆಯಿಂದ 2013ರ ಬಸವ ಬೆಳಗು ಪ್ರಶಸ್ತಿಯನ್ನು ಹಸ್ತಪ್ರತಿ ಮತ್ತು ಸಂಶೋಧನೆಗಾಗಿ ಮೈಸೂರಿನ ವೈ.ಸಿ. ಭಾನುಮತಿ ಮತ್ತು ಶಿಕ್ಷಣ ಹಾಗೂ ಸಮಾಜ ಸೇವೆಗಾಗಿ ತಂಬ್ರಹಳ್ಳಿಯ ಅಕ್ಕಿ ಕೊಟ್ರಪ್ಪ ಇವರಿಗೆ ನೀಡಲಾಯಿತು. ಡಾ. ಕೆ. ರವೀಂದ್ರನಾಥ್ ಪ್ರಾಸ್ತಾವಿಕ ಮಾತನಾಡಿದರು. ಪ್ರಭು ಸ್ವಾಮೀಜಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಘೋರ್ಪಡೆಯವರ ಚಿಂತನೆಗಳ ಕುರಿತ ಗೋಷ್ಠಿಗಳಲ್ಲಿ ಪತ್ರಕರ್ತ ಅಜಿತ್ ಘೋರ್ಪಡೆ, ಹಂಪಿ ವಿವಿಯ ಟಿ.ಆರ್. ಚಂದ್ರಶೇಖರ್, ಐಎಸ್‌ಇಸಿ ನಾಗರಬಾವಿ ಬೆಂಗಳೂರಿನ ಪ್ರೊ. ಅಬ್ದುಲ್ ಅಜೀಜ್, ಡಾ. ಶಿವಣ್ಣ, ಮಾಜಿ ಪುರಸಭೆ ಅಧ್ಯಕ್ಷ ಡಿ. ಕೃಷ್ಣಪ್ಪ, ಪುರಸಭೆ ಸದಸ್ಯರಾದ ಆಶಾಲತಾ ಸೋಮಪ್ಪ, ರಾಘವೇಂದ್ರ, ನಭೀಸಾಬ್, ಪಾರ್ವತಮ್ಮ, ಕೆ. ಸುರೇಶ್, ಗುಡೇಕೋಟೆ ನಾಗರಾಜ್, ಶ್ರೀಕಾಂತ್ ಗೋಂದಿ, ನಿವೃತ್ತ ಉಪನ್ಯಾಸಕರಾದ ಬಸವರಾಜ್ ಮಸೂತಿ, ಸಿ.ಎಂ. ಶಿಗ್ಗಾಂವಿ ಇದ್ದರು. ಡಾ. ಎಂ.ವಿ. ರುದ್ರಮುನಿಯಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ. ಆರ್. ಚಲಪತಿ ನಿರೂಪಿಸಿದರು. ಹಗರಿ ಬಸವರಾಜಪ್ಪ ಪ್ರಾರ್ಥಿಸಿ, ಉಪನ್ಯಾಸಕ ಕೆ. ಗೋಪಾಲ ಕೃಷ್ಣ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.