ಕುಡಿವ ನೀರು: ಗ್ರಾಪಂ ಕಚೇರಿಗೆ ಗ್ರಾಮಸ್ಥರಿಂದ ಬೀಗ
ಕೊಟ್ಟೂರು: ಕುಡಿಯುವ ನೀರಿನ ಕೊರತೆ ನಿಭಾಯಿಸುವಲ್ಲಿ ವಿಫಲರಾದ ಕೆ. ಅಯ್ಯನಹಳ್ಳಿ ಗ್ರಾಮ ಪಂಚಾಯಿತಿ ಆಡಳಿತದ ವಿರುದ್ಧ ಗ್ರಾಮಸ್ಥರು ಆಕ್ರೋಶಗೊಂಡು ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟನೆ ವ್ಯಕ್ತಡಿಸಿದ ಘಟನೆ ಗುರುವಾರ ನಡೆಯಿತು. ಕೆ. ಅಯ್ಯನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ 2 ತಿಂಗಳಿಂದಲೂ ಬಾಧಿಸುತ್ತಿದೆ. ನೀರನ್ನು ಹರಸಿ ಜನ ದೂರದೂರದ ಪ್ರದೇಶಗಳಿಗೆ ತೆರಳಿ ನೀರು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರಲ್ಲಿಯೇ ದಿನ ನೂಕುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಯಾವುದೇ ಜನಪ್ರತಿನಿಧಿ ಈ ಸಮಸ್ಯೆ ಬಗ್ಗೆ ಗಮನಹರಿಸದೇ ನಿರ್ಲಕ್ಷ್ಯ ವಹಿಸಿರುವುದು ಕೆ. ಅಯ್ಯನಹಳ್ಳಿ ಗ್ರಾಮದ ಜನರನ್ನು ಸಿಟ್ಟಿಗೆಬ್ಬಿಸಿದೆ. ಈ ಕಾರಣದಿಂದಾಗಿ ನೂರಾರು ಸಂಖ್ಯೆಯ ಗ್ರಾಮಸ್ಥರು ಕೂಡಲೇ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ, ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು. ನೀರಿನ ತೊಂದರೆ ನಿಭಾಯಿಸಲು ವಿಫಲರಾದ ಜನಪ್ರತಿನಿಧಿಗಳು ಮತ್ತು ಗ್ರಾಪಂ ಅಧಿಕಾರಿಗಳ ವಿರುದ್ಧ ಧಿಕ್ಕಾರಗಳನ್ನು ಕೂಗಿ ಕೆಲ ಹೊತ್ತಿನವರೆಗೆ ಪಂಚಾಯಿತಿ ಕಾರ್ಯಾಲಯದ ಬಳಿ ಪ್ರತಿಭಟನೆ ವ್ಯಕ್ತಡಿಸಿದ ಗ್ರಾಮಸ್ಥರು, ಕೂಡಲೇ ಸಂಬಂಧಪಟ್ಟವರು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುವ ನಿಟ್ಟಿನತ್ತ ಮುಂದಾಗದ ಹೊರತು ತಾವು ಇಲ್ಲಿಂದ ಕದಲುವುದಿಲ್ಲ ಎಂದು ಘೋಷಿಸಿ ಠಿಕಾಣಿ ಹೂಡಿದರು. ಪ್ರತಿಭಟನಾಕಾರರು ಕಾಲಿ ಡ್ರಮ್ನೊಂದಿಗೆ ಘೋಷಣೆ ಕೂಗಿ ತಮ್ಮ ಸಂಕಟ ತೋರಿಕೊಂಡರು. ಗ್ರಾಮದ ಮುಖಂಡರಾದ ಎ. ಸಿದ್ದಪ್ಪ, ಎಂ.ಜಿ. ಮುಂಜನಾಥ, ಬಿ.ಎಂ. ಕೊಟ್ರೇಶ್, ಎ.ಎಂ.ಟಿ. ಕೊಟ್ರೇಶ್, ವಿಮಾನ ನಾಗರಾಜ. ಎಂ.ಜಿ. ಪ್ರದೀಪ, ಎ.ಎಂ.ಟಿ. ಸತೀಶ, ಎ.ಎಂ. ಚನ್ನಯ್ಯ, ಎ.ಎಂ.ಎ. ಕೊಟ್ರಯ್ಯ, ಮೂರ್ತಿ, ಎ.ಎಂ.ಜಿ. ಮಲ್ಲಿಕಾರ್ಜುನ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

