ಬಳ್ಳಾರಿ

ಹಾಲಿನ ಹಣ ಬಿಡುಗಡೆಗೆ ವಿಳಂಬ: ರೈತರ ಆಕ್ರೋಶ

Published On :

ಕೂಡ್ಲಿಗಿ: ತಾಲೂಕಿನ ಕೆಂಚಮಲ್ಲನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವು ರೈತರಿಂದ ಹಾಲು ಶೇಖರಣೆ ಮಾಡಿ ಕೆಎಂಎಫ್‌ಗೆ ನೀಡಲಾಗುತ್ತದೆ. ಹಾಲು ನೀಡುವ ರೈತರಿಗೆ ತಿಂಗಳಿಗೊಮ್ಮೆ ಸರಿಯಾಗಿ ಹಣ ಬಟವಾಡೆ ನೀಡುವಲ್ಲಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆಂದು ರೈತರು ಆರೋಪಿಸಿದ್ದಾರೆ.
ಸ್ವಾವಲಂಬಿ ಜೀವನ ನಡೆಸುವ ಉದ್ದೇಶದಿಂದ 158  ಮಹಿಳಾ ಸದಸ್ಯರನ್ನು ಒಳಗೊಂಡ ಸಂಘವನ್ನು 2003 ರಲ್ಲಿ ಸ್ಥಾಪಿಸಿಕೊಂಡಿದ್ದಾರೆ. ಇದರಿಂದ ಅನೇಕ ರೈತರಿಗೆ ಸಹಾಯಕವಾಗಿದೆ. ಹೊಸಹಳ್ಳಿ ರೈತರ ಸೇವಾ ಸಹಕಾರ ಬ್ಯಾಂಕಿನಲ್ಲಿ ಸಂಘದ 10 ಮಹಿಳೆಯರು ಸಾಲಸೌಲಭ್ಯ ಪಡೆದು ಹಸು ಖರೀದಿಸಿದ್ದಾರೆ. ಇನ್ನುಳಿದವರು ಸ್ವಂತಕ್ಕೆ ಹಸು, ಎಮ್ಮೆ ಖರೀದಿಸಿ ಹಾಲು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಆದರೆ. ಸಾಲ ಪಡೆದವರು ಕಂತು ಕಟ್ಟುವಲ್ಲಿ ಸ್ವಲ್ಪ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಉಳಿದ ಎಲ್ಲ ಸದಸ್ಯರ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳಲಾಗುತ್ತದೆ. ಈ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಷ್ಟ ಪಟ್ಟಾದರು ಹಸು, ಎಮ್ಮೆಗಳನ್ನು ಜೋಪಾನ ಮಾಡಿ, ತಿಂಗಳು ಪೂರಾ ಹಾಲು ನೀಡುತ್ತೇವೆ. ಸಕಾಲಕ್ಕೆ ಹಣ ಬಟವಾಡೆ ಮಾಡುವುದಿಲ್ಲ. ಇದರಿಂದ ಇದನ್ನೇ ನಂಬಿದ ಬಡ ಕುಟುಂಬಕ್ಕೆ ಸಾಲದ ಹೊರೆ ಜಾಸಿಯಾಗುತ್ತದೆ ಎಂದು ತಿಳಿಸಿದರು. ಎಂಟು ವರ್ಷಗಳಿಂದ ನಡೆಯುತ್ತಿರುವ ಹಾಲು ಉತ್ಪಾದಕರ ಸಂಘದ ಸಭೆಗಳೇ ನಡೆಯುವುದಿಲ್ಲ. ಈ ಸಂಘದ ಲಾಭ-ನಷ್ಟವೂ ಸದಸ್ಯರಿಗೆ ತಿಳಿಯುತ್ತಿಲ್ಲ. ಏನಾದರು ಕಾರ್ಯದರ್ಶಿಯನ್ನು ಕೇಳಿದರೆ ಮೇಲಧಿಕಾರಿಗಳ ಕಡೆ ತೋರಿಸುತ್ತಾರೆ ಎಂದು ಆರೋಪಿಸಿದರು. ಪ್ರತಿ ತಿಂಗಳು 5ನೇ ತಾರೀಕಿನೊಳಗೆ ಹಾಲಿನ ಬಟವಾಡೆ ಮಾಡುವುದರಿಂದ ರೈತರ ನೆಮ್ಮದಿ ಜೀವನಕ್ಕೆ ಸಹಕಾರಿಯಾಗುತ್ತದೆ ಎಂದು ಗ್ರಾಮದ ಕೆ. ಶಿವಮೂರ್ತಿ, ಮಲ್ಲಿಕಾರ್ಜುನ, ನಾಗರಾಜ, ಜಿ. ಮಲ್ಲಿಕಾರ್ಜುನ, ಸುಲೋಚನಮ್ಮ, ಎಂ.ಜಿ. ಬಸವನಗೌಡ, ಬಸಪ್ಪ, ಜಿ. ಬಸವರಾಜ, ಎಸ್. ಶರಣಪ್ಪ ಇತರರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.