ಜಿಎಸ್ಸೆಸ್‌ಗೆ ತ್ರಿವಿಧ ನಮನ
ಬಳ್ಳಾರಿ: ನಗರದ ಎಂಬಿಎಸ್‌ಎಲ್ ಪ್ರೌಢಶಾಲೆಯಲ್ಲಿ ಶನಿವಾರ ದಿ. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರಿಗೆ ತ್ರಿವಿಧ ನಮನ (ಪುಷ್ಪನಮನ, ನುಡಿನಮನ ಹಾಗೂ ಗೀತನಮನ) ಸಲ್ಲಿಸಲಾಯಿತು.
ಪ್ರಾರಂಭದಲ್ಲಿ ಜಿ.ಎಸ್. ಶಿವರುದ್ರಪ್ಪ ಅವರ ಭಾವಚಿತ್ರಕ್ಕೆ ಪುಷ್ಪಹಾರ ಹಾಕಿ ಪೂಜೆ ಸಲ್ಲಿಸಿ, ಗೌರವ ಸಲ್ಲಿಸಲಾಯಿತು.
ಎಂಬಿಎಸ್‌ಎಲ್ ಶಾಲೆಯ ಮುಖ್ಯೋಪಾಧ್ಯಾಯ ಕಾಳಪ್ಪ ಪತ್ತಾರ್ ಕಾರ್ಯಕ್ರಮದಲ್ಲಿ ಮಾತನಾಡಿ, ಜಿ.ಎಸ್. ಶಿವರುದ್ರಪ್ಪ ಅವರು ಕೇವಲ ಕವಿಗಳು ಮಾತ್ರವಲ್ಲ. ಉತ್ತಮ ಅಧ್ಯಾಪಕರು, ವಿಮರ್ಶಕರು, ಆಡಳಿತಗಾರರು ಹಾಗೂ ಸಾಂಸ್ಕೃತಿಕ ಸಂಘಟಕರು ಆಗಿದ್ದಾರೆ. ಜಿಎಸ್ಸೆಸ್ ಸಮನ್ವಯದ ಕವಿ. ಅವರ ಕಾವ್ಯದುದ್ದಕ್ಕೂ ಪ್ರಕೃತಿ ಕಾಲ ಜೀವನ ಪ್ರೀತಿಯೇ ತುಂಬಿ ತುಳುಕುತ್ತದೆ. ಅವರು ಬದುಕಿದಂತೆ ಬರೆದವರು, ಬರೆದಂತೆ ಬದುಕಿದವರು ಎಂದು ವರ್ಣಿಸಿದರು. ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಸೋಂತ ವೆಂಕಟಲಕ್ಷ್ಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ದೊಡ್ಡಬಸವ ಗವಾಯಿಗಳು ಮತ್ತು ಲಕ್ಷ್ಮಿ ಅವರು ರಾಷ್ಟ್ರಕವಿಯ ಭಾವಗೀತೆಗಳ ಗಾಯನ ಮಾಡಿದರು.
ಈ ಸಂದರ್ಭದಲ್ಲಿ ಸಂಗನಕಲ್ಲು ರಾಜೇಂದ್ರ ಪ್ರಸಾದ್, ಜೋಳದರಾಶಿಯ ಪಂಪನಗೌಡ, ಗವಿಸಿದ್ದಪ್ಪ, ಕೆ. ಚಿದಂಬರರಾವ್, ರಘುರಾಮ, ನರಸಿಂಹಯ್ಯ, ಎಸ್.ಆರ್. ಆಶಾ, ಬಸವರಾಜ, ಗವಿಸಿದ್ದಪ್ಪ, ಮಂಜುನಾಥ, ಉಮಾಪತಿ, ರಮೇಶ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

