ಬಳ್ಳಾರಿ

ದಲಿತರಲ್ಲಿ ಕೀಳರಿಮೆ ಇನ್ನೂ ಹೋಗಿಲ್ಲ: ಡಾ. ಮೂಡ್ನಾಕೂಡು

Published On :

ಬೆಂಗಳೂರು:  ಯಾವುದನ್ನು ಡಾ. ಬಿ.ಆರ್. ಅಂಬೇಡ್ಕರ್ ಗಟ್ಟಿಯಾಗಿ ಹೇಳಿದರೋ ಅದನ್ನು ಅಷ್ಟೇ ಗಟ್ಟಿಯಾಗಿ ಹೇಳುವುದು ಇಂದಿನ ದಲಿತರಿಗೆ ಸಾಧ್ಯವಾಗುತ್ತಿಲ್ಲ. ಹಾಗೆ ಹೇಳಿದರೆ ಮುಖ್ಯವಾಹಿನಿಯಿಂದ ಬೇರ್ಪಡುವ ಭಯ ಅವರನ್ನು ಕಾಡುತ್ತಿದೆ ಎಂದು ಚಿಂತಕ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು.
ಇಂದು ದಲಿತರ ಹೋರಾಟ ಸಮಷ್ಟಿಯ ಹೋರಾಟವಾಗಿಲ್ಲ ಏಕೆ? ದಲಿತರ ನೋವು ಸಮಷ್ಟಿಯ ನೋವಾಗಿಲ್ಲ ಏಕೆ?  ದಲಿತರು ಅಂಬೇಡ್ಕರ್ ಅವರನ್ನು ಗಟ್ಟಿಯಾಗಿ ಹಿಡಿದುಕೊಳ್ಳದೇ ಇರುವುದೇ ಇದಕ್ಕೆ ಕಾರಣ ಎಂದು ಅವರು ತಿಳಿಸಿದರು.
ನಗರದಲ್ಲಿ ಶನಿವಾರ ಹೊಸಪೇಟೆಯ ಯಾಜಿ ಪ್ರಕಾಶನದ ಉದ್ಘಾಟನೆ ಮತ್ತು ಐದು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು, ಯಾವುದೇ ಉನ್ನತ ಹುದ್ದೆಯಲ್ಲಿದ್ದರೂ ಅವರು ತಾವು ದಲಿತ ಎಂಬ ಕೀಳರಿಮೆಯಿಂದ ನರಳುತ್ತಿರುತ್ತಾರೆ ಎಂದು ಹೇಳಿದರು.
ಡಾ. ಹಂಪನಾ, ಪ್ರಕಾಶನ ಉದ್ಘಾಟಿಸಿ, ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಹಂಪಿ ಕನ್ನಡ ವಿ.ವಿ. ಕುಲಪತಿ ಡಾ.ಹೀ.ಚಿ. ಬೋರಲಿಂಗಯ್ಯ ಅವರು, ಕನ್ನಡ ಬೆಳೆಯುವುದಕ್ಕೆ ಉತ್ತಮ ಪುಸ್ತಕಗಳು ಪ್ರಕಟವಾಗಬೇಕು ಎಂದು ಹೇಳಿದರು.
ಪ್ರೊ. ಪಿ. ಶ್ರೀಕೃಷ್ಣ ಭಟ್ ಅವರ ಕನ್ನಡ ಸಾಂಪ್ರದಾಯಿಕ ವ್ಯಾಕರಣಗಳು, ಡಾ. ಶಿವಾನಂದ ಎಚ್. ಭಂಟನೂರ ಅವರ ಮಾಟದೊಳಗಣ ನೋಟ, ಡಾ. ಎನ್. ಚಿನ್ನಸ್ವಾಮಿ ಸೋಸಲೆ ಅವರ ಅಂಬೇಡ್ಕರ್ ದೃಷ್ಟಿಯಲ್ಲಿ ದಲಿತರು ಮತ್ತು ಮತಾಂತರ ಹಾಗೂ ದಲಿತರ ಮೇಲಿನ ದೌರ್ಜನ್ಯ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆಗಳು ಎಂಬ ಎರಡು ಕೃತಿಗಳನ್ನು ಮತ್ತು ಡಾ. ಮೋಹನ ಕುಂಟಾರ್ ಅವರ ಯಕ್ಷಗಾನ ಸ್ಥಿತ್ಯಂತರ ಕೃತಿಯನ್ನು ಲೋಕಾರ್ಪಣಗೊಳಿಸಲಾಯಿತು.
ಕೃತಿಗಳನ್ನು ಡಾ. ಕೆ.ಪಿ. ಭಟ್, ಮಾವಳ್ಳಿ ಶಂಕರ್, ಡಾ. ಎಚ್.ಜಿ. ಶ್ರೀಧರ ಅವರು ಪರಿಚಯಿಸಿದರು. ಈ ಸಂದರ್ಭದಲ್ಲಿ ಲೇಖಕರನ್ನು ಸನ್ಮಾನಿಸಲಾಯಿತು.
ಸವಿತಾ ಯಾಜಿ ಪ್ರಸ್ತಾವಿಕವಾಗಿ ಮಾತನಾಡಿದರು. ಕೆ.ಎಲ್. ರಾಜಶೇಖರ್ ಕಾರ್ಯಕ್ರಮ ನಿರ್ವಹಿಸಿದರು. ಛಾಯಾ ಶ್ರೀನಿವಾಸ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.