ಪಂಚಮಸಾಲಿಶ್ರೀ ಲಿಂಗೈಕ್ಯ: ಶ್ರದ್ಧಾಂಜಲಿ ಸಭೆ
ಹಗರಿಬೊಮ್ಮನಹಳ್ಳಿ: ಸೋಮವಾರ ಬೆಳಗಿನಜಾವ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಲಿಂಗೈಕ್ಯರಾದ ವೀರಶೈವ ಲಿಂಗಾಯಿತ ಪಂಚಮಸಾಲಿ ಹರಿಹರ ಪೀಠದ ಸ್ಥಿರ ಪೀಠಾಧೀಶ ಡಾ. ಮಹಾಂತ ಸ್ವಾಮೀಜಿಗೆ ವೀರಶೈವ ಪಂಚಮಸಾಲಿ ಸಮಾಜದ ತಾಲೂಕ ಘಟಕದಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸೋಮವಾರ ಮಧ್ಯಾಹ್ನ ಪಟ್ಟಣದ ಕೆಚ್ಚಿನಬಂಡಿ ರಸ್ತೆಯಲ್ಲಿನ ಸಮಾಜದ ನಿವೇಶನದಲ್ಲಿರುವ ಹರ ದೇವಸ್ಥಾನದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಪಂಚಮಸಾಲಿ ಬಂಧುಗಳು ಅಗಲಿದ ಸಮಾಜದ ಗುರುಗಳ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸಿದರು.
ಸಮಾಜದ ಇಟಿಗಿ ಕಲ್ಲೇಶಪ್ಪ ಮಾತನಾಡಿ, ಡಾ. ಮಹಾಂತ ಸ್ವಾಮಿಗಳ ಅಗಲಿಕೆಯಿಂದಾಗಿ ನಮ್ಮ ಸಮಾಜ ಒರ್ವ ಮುತ್ಸದಿ ಗುರುವನ್ನು ಕಳೆದುಕೊಂಡಂತಾಗಿದೆ. ಶ್ರೀಗಳ ನಿಧನ ಸಮಾಜಕ್ಕೆ ಸಾಕಷ್ಟು ನಷ್ಟ ಉಂಟು ಮಾಡಿದೆ.
ಕಳೆದ ಐದು ವರ್ಷಗಳ ಹಿಂದೆ ಹರಿಹರದ ಪಂಚಮಸಾಲಿ ಗುರುಪೀಠದ ಸ್ಥಿರಪೀಠಾಧ್ಯಕ್ಷರಾಗಿ ಪೀಠಾರೋಹಣ ಮಾಡಿದ ತರುವಾಯ ರಾಜ್ಯದ್ಯಂತ ಪಂಚಮಸಾಲಿಗಳನ್ನು ಪ್ರಬಲವಾಗಿ ಸಂಘಟಿಸುವ ಮೂಲಕ ಸಮಾಜಕ್ಕೆ ಸಂಘಟನಾ ಶಕ್ತಿ ತುಂಬುವ ಕೆಲಸ ಮಾಡಿದ್ದರು ಎಂದು ಆಗಲಿದ ಶ್ರೀಗಳ ಕುರಿತು ಸಭೆಯಲ್ಲಿ ಗುಣಗಾನಮಾಡಿ, ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸಿದರು.
ವೀರಶೈವ ಪಂಚಮಸಾಲಿ ಸೌಹಾರ್ದ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಚ್.ನೇತಾಜಿಗೌಡ, ಉಪಾಧ್ಯಕ್ಷೆ ನಿರ್ಮಲಾ ಮೆಣಸಿಗಿ, ಸದಸ್ಯ ಎಚ್.ಪಿ. ಶಿವಶಂಕರಗೌಡ, ಮಹಿಳಾ ಘಟಕದ ಅಧ್ಯಕ್ಷೆ ಚನ್ನವೀರಮ್ಮ, ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಾಣಿ ಶಿವಶಂಕರಗೌಡ, ಸಮಾಜದ ಮಹಿಳಾ ಘಟಕದ ಪುಷ್ಪಾಲತಾ ಬೆಟ್ಟಪ್ಪ, ಮಂಗಳಾ ಬಸವರಾಜ, ಪಾರ್ವತಿ, ನೌಕರರ ಘಟಕದ ಉತ್ತಂಗಿ ರವಿ, ಮೆಣಸಿಗಿ, ಯುವ ಘಟಕದ ಅಧ್ಯಕ್ಷ ರಾಜೇಶ ಬ್ಯಾಡಿಗಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಂಭುಲಿಂಗಪ್ಪ, ಮಂಜುನಾಥಗೌಡ, ಯು.ಕೆ. ಕೊಟ್ರೇಶ್, ಬ್ಯಾಲಾಳು ಮಂಜುನಾಥಗೌಡ, ಕರಿಬಸವನಗೌಡ, ನಿಂಗಪ್ಪ ಭಾಗವಹಿಸಿದ್ದರು.
ಎಚ್. ರೇವಣ್ಣ ಸಂತಾಪ
ಕೊಟ್ಟೂರು: ಹರಿಹರ ವೀರಶೈವ ಪಂಚಮಸಾಲಿ ಜನಾಂಗದ ಸ್ಥಿರಪೀಠಾಧಿಪತಿ ಡಾ. ಮಹಾಂತ ಮಹಾಸ್ವಾಮೀಜಿ ಹೃದಯಘಾತದಿಂದ ನಿಧನರಾಗುವ ಮೂಲಕ ಜನಾಂಗದ ಆತ್ಮಶಕ್ತಿಗೆ ಕುಂದು ಬಂದಂತಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ಎಚ್. ರೇವಣ್ಣ ಶೋಕ ವ್ಯಕ್ತಪಡಿಸಿದ್ದಾರೆ. ಬಹು ಸಂಖ್ಯೆಯ ಪಂಚಮಸಾಲಿ ಜನಾಂಗಕ್ಕೆ ಕಳೆದ 5 ವರ್ಷಗಳಿಂದ ಅತ್ಯುತ್ತಮ ಮಾರ್ಗದರ್ಶಕರಾಗಿ ಸಂಘಟನೆ ಉತ್ತಮ ರೀತಿಯಲ್ಲಿ ಬೆಳೆಯಲು ಶ್ರೀಗಳು ಪ್ರೇರಕರಾಗಿದ್ದರು. ಅವರ ಆತ್ಮಕ್ಕೆ ದಯಾಮಯನಾದ ದೇವರು ಶಾಂತಿ ನೀಡಲೆಂದು ಪ್ರಾರ್ಥಿಸುವೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

