ಬಿಎಸ್ಸಾರ್ನಿಂದ ಮಾತ್ರ ಬಳ್ಳಾರಿ ಅಭಿವೃದ್ಧಿ: ಭೀಮಾ ನಾಯ್ಕ
ಹಗರಿಬೊಮ್ಮನಹಳ್ಳಿ: ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಅಧ್ಯಾಯ ಮುಗಿದಿದ್ದು, ಇನ್ನು ಮುಂದೆ ಬಿಎಸ್ಸಾರ್ ಕಾಂಗ್ರೆಸ್ ಜಿಲ್ಲೆಯ ಏಕೈಕ ರಾಜಕೀಯ ಪಕ್ಷವಾಗಿ ಹೊರಹೊಮ್ಮಲಿದೆ. ಜನತೆ ಬಿಎಸ್ಸಾರ್ ಜೊತೆ ಕೈಜೋಡಿಸಬೇಕೆಂದು ಪಕ್ಷದ ಮುಖಂಡ, ಜಿಪಂ ಸದಸ್ಯ ಎಸ್. ಭೀಮಾನಾಯ್ಕ ಮನವಿ ಮಾಡಿದ್ದಾರೆ.
ಭಾನುವಾರ ಸಂಜೆ ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಜರುಗಿದ ಸ್ವಾಭಿಮಾನಿ ಶ್ರೀರಾಮುಲು ಸಂದೇಶ ಯಾತ್ರೆ ಹಾಗೂ ಬೃಹತ್ ಬಿಎಸ್ಸಾರ್ ಸೇರ್ಪಡೆ ಕಾರ್ಯಕ್ರಮದ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಪಕ್ಷದ ನಾಯಕರ ಒಳಜಗಳದಿಂದಾಗಿ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿ ಬಹು ವರ್ಷಗಳೇ ಸಂದಿವೆ. ನಾಲ್ಕು ವರ್ಷ 10 ತಿಂಗಳ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹಾಗೂ ದುರಾಡಳಿತದಿಂದಾಗಿ ಆ ಪಕ್ಷದ ಬಗ್ಗೆ ಜನರಿಗೆ ಭ್ರಮನಿರಸನವಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿ ನಾಶವಾಗಲಿದೆ. ಬಡವರು, ರೈತ, ಕಾರ್ಮಿಕರ ಹಿತ ರಕ್ಷಣೆಗಾಗಿ ಜನ್ಮ ತಳೆದಿರುವ ಬಿಎಸ್ಸಾರ್ ಕಾಂಗ್ರೆಸ್ನಿಂದ ಮಾತ್ರ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿ ಸಾಧ್ಯ ಎಂದರು.
ಈ ಬಾರಿ ಜಿಲ್ಲೆಯಾದ್ಯಂತ ಬಿಎಸ್ಸಾರ್ ಪರವಾದ ಅಲೆ ಜೋರಾಗಿದ್ದು, ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲೂ ಪಕ್ಷ ಗೆಲುವು ಸಾಧಿಸಲಿದೆ. ಈ ಬಗ್ಗೆ ಜನತೆಯೂ ನಿರ್ಧರಿಸಿದ್ದಾರೆ. ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಬಿಎಸ್ಸಾರ್ ಕ್ಷೇತ್ರ ಸಂಚಾಲಕ ಎಚ್.ಎಂ. ಚೋಳರಾಜ, ಮುಖಂಡರಾದ ಎಂ.ಪಿ. ಪರಮೇಶ್ವರ, ಮೆಗಳಮನಿ ಬಸವರಾಜ, ಪಟ್ಟಣಶೆಟ್ಟಿ ಸುರೇಶ್, ಗೌರಜ್ಜನವರ ಬಸವರಾಜ, ಬಣಕಾರ ತೋಟಪ್ಪ, ಗಿರಿ, ನಾಗರಾಜ ಜನ್ನು, ಹೆಗ್ಡಾಳ ಶ್ರೀನಿವಾಸ, ಸಂಪತ್ ಕುಮಾರ ಬಹಿರಂಗ ಸಭೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

