ಬಳ್ಳಾರಿ

ಪೀಠಾರೋಹಣ ಸಮಾರಂಭ ಇಂದಿನಿಂದ

Published On :

ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ಫೆ. 14ರಿಂದ 18ರವರೆಗೆ ಜರುಗುವ ವೀರಶೈವ ಪಂಚಮಸಾಲಿ ಜಗದ್ಗುರುಗಳ 5ನೇ ಪೀಠಾರೋಹಣ ಸಮಾರಂಭದ ಸಿದ್ಧತಾ ಕಾರ್ಯಗಳು ಭರದಿಂದ ಸಾಗುತ್ತಿವೆ ಎಂದು ಸಮಾಜದ ಮುಖಂಡ ಬಾವಿ ಬೆಟ್ಟಪ್ಪ ಬುಧವಾರ ತಿಳಿಸಿದರು. ಪಟ್ಟಣದ ರಾಮನಗರದ ಕೆಚ್ಚಿನಬಂಡಿ ರಸ್ತೆಯಲ್ಲಿ 12 ಎಕರೆ ಹೊಲದಲ್ಲಿ ಸಮಾರಂಭ ಜರುಗಲಿದ್ದು, ಐವತ್ತು ಸಾವಿರ ಜನರು ಕುಳಿತುಕೊಳ್ಳುವ ವ್ಯವಸ್ಥ್ಥೆ ಕಲ್ಪಿಸಲಾಗಿದೆ ಎಂದರು.  ವಿವಿಧ ಮಠಾಧೀಶರು, ಸಿಎಂ ಶೆಟ್ಟರ್, ಮಾಜಿ ಸಿಎಂ ಕುಮಾರಸ್ವಾಮಿ, ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ, ಸಚಿವರಾದ ನಿರಾಣಿ, ಬೆಳ್ಳುಬ್ಬಿ, ಆನಂದಸಿಂಗ್, ಸಂಸದೆ ಶಾಂತಾ, ಅನಿಲ್ ಲಾಡ್, ಶಾಸಕ ನೇಮಿರಾಜ ನಾಯ್ಕ್, ನಾಗೇಂದ್ರ, ಶ್ರೀರಾಮುಲು ಆಗಮಿಸಲಿದ್ದಾರೆ ಎಂದರು. ಫೆ. 17ರಂದು ಇತ್ತೀಚಿಗೆ ಲಿಂಗೈಕ್ಯರಾದ ಡಾ. ಮಹಾಂತ ಸ್ವಾಮೀಜಿ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿದೆ. ಫೆ. 18ರಂದು ಸಿಎಂ ಆಗಮಿಸಲಿದ್ದು. ಅಂದು ಪೀಠಾರೋಹಣ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಸಮಾಜದ ರಾಜ್ಯ ಯುವ ಘಟಕದ ಅಧ್ಯಕ್ಷ ಹನಸಿ ಸಿದ್ದೇಶ್, ತಾಲೂಕಾಧ್ಯಕ್ಷ ಬ್ಯಾಡಗಿ ರಾಜೇಶ್, ಪ್ರಧಾನ ಕಾರ್ಯದರ್ಶಿ ಉಪ್ಪಾರಗಟ್ಟಿ ವೀರನಗೌಡ, ವೀರಭದ್ರಪ್ಪ, ಪಂಚಮಸಾಲಿ ಸಹಕಾರಿ ಬ್ಯಾಂಕ್ ನಿರ್ದೇಶಕ ಶಿವಶಂಕರಗೌಡ, ಯು.ಕೆ. ಕೊಟ್ರೇಶ್, ಗುರು, ತರಕಾರಿ ಪ್ರಕಾಶ್, ಭದ್ರವಾಡಿ ವಿನಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.