ಬಳ್ಳಾರಿ

26ರಿಂದ ಬಾಲ್ ಬ್ಯಾಡ್‌ಮಿಂಟನ್ ಪಂದ್ಯ (ಸುದ್ದಿ ಸಂಕ್ಷೇಪ)

Published On :

ಬಳ್ಳಾರಿ: ನಗರದ ಬಿಬಿಬಿಎ ಸಂಘದ ವತಿಯಿಂದ ಚಿತ್ರಾಲ ಶಿವಕುಮಾರ್ ಸ್ಮರಣಾರ್ಥ ಪುರುಷರ ಬಾಲ್ ಬ್ಯಾಡ್‌ಮಿಂಟನ್ ಪಂದ್ಯಾವಳಿಯನ್ನು ಜ. 26 ಮತ್ತು 27ರಂದು ಎರಡು ದಿನಗಳ ಕಾಲ ನಗರದ ಮುನಿಸಿಪಾಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಪಂದ್ಯಾವಳಿಯಲ್ಲಿ ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ಸಂಬಂಧಿಸಿದ ಕ್ರೀಡಾಪುಟುಗಳು ಮಾತ್ರ ಭಾಗವಹಿಸಬಹುದಾಗಿದ್ದು, ಆಸಕ್ತ ತಂಡಗಳು ಹೆಚ್ಚಿನ ಮಾಹಿತಿಗಾಗಿ ಮೊ.ಸಂ-9980296399, 9845229285ಗೆ ಸಂಪರ್ಕಿಸಬಹುದು ಎಂದು ಸಂಘದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಬಳ್ಳಾರಿ: 29ರಂದು ವಿದ್ಯುತ್ ವ್ಯತ್ಯಯ
ಬಳ್ಳಾರಿ: ಅಲ್ಲೀಪುರದ 220 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ವಾರ್ಷಿಕ ನಿರ್ವಹಣೆ ಕಾರ್ಯ ಹಮ್ಮಿಕೊಳ್ಳುತ್ತಿದ್ದು, ಕೇಂದ್ರದಿಂದ ಸರಬರಾಜಾಗುವ ವಿದ್ಯುತ್ ಕೇಂದ್ರಗಳಲ್ಲಿ ಜ. 29ರಂದು  ವಿದ್ಯುತ್ ಕಡಿತವುಂಟಾಗಲಿದೆ ಎಂದು ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ. ಬಳ್ಳಾರಿಯ ವಿಠಲಾಪುರ, ಎಮ್ಮಿಗನೂರು, ಬಳ್ಳಾರಿ (ದಕ್ಷಿಣ), ಬಳ್ಳಾರಿ (ಉತ್ತರ), ಮೋಕ, ಪಿ.ಡಿ. ಹಳ್ಳಿ, ಬಿಸಿಲಹಳ್ಳಿ, ಸೋಮಸಮುದ್ರ ಮತ್ತಿತರ ಪ್ರದೇಶಗಳಲ್ಲಿ ಜ. 29ರಂದು ಬೆಳಗ್ಗೆ 9ರಿಂದ ಸಂಜೆ 5 ಗಂಟೆ ವರೆಗೆ ವಿದ್ಯುತ್ ಕಡಿತವುಂಟಾಗಲಿದೆ. ಗ್ರಾಹಕರು ಸಹಕರಿಸಬೇಕಾಗಿ ಮನವಿ ಮಾಡಿದ್ದಾರೆ.

ರಾಜ್ಯ ಆಡಳಿತ ಜೆಡಿಎಸ್ ತೆಕ್ಕೆಗೆ
ಕೊಟ್ಟೂರು: ಮುಂದಿನ ಅವಧಿಗೆ ರಾಜ್ಯ ಆಡಳಿತದ ಸೂತ್ರದಾರರಾಗಿ ಎಚ್.ಡಿ. ಕುಮಾರಸ್ವಾಮಿ ಕೇಂದ್ರೀಕೃತಗೊಳ್ಳುವುದು ನಿಶ್ಚಿತ ಎಂದು ಜೆಡಿಎಸ್‌ನ ಹಗರಿಬೊಮ್ಮನಹಳ್ಳಿ ಕ್ಷೇತ್ರಾಧ್ಯಕ್ಷ ವೈ. ಮಲ್ಲಿಕಾರ್ಜುನ ಹೇಳಿದರು. ಸಮೀಪದ ಚಪ್ಪರದಹಳ್ಳಿಯಲ್ಲಿ ಮಂಗಳವಾರ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ 'ಜಾತ್ಯತೀತ ಜನತಾದಳದ ನಡುಗೆ ರೈತರ ಬಳಿಗೆ' ಎಂಬ ಕಾರ್ಯಕ್ರಮದ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ಈ ಹಿಂದೆ ನಡೆಸಿದ 20 ತಿಂಗಳ ಆಡಳಿತ ರಾಜ್ಯದ ಜನರ ಗಮನ ಸೆಳೆದಿದೆ ಎಂದರು. ಮುಖಂಡ ಮಾತಾ ಗ್ಯಾಸ್ ಎರ್ರಿಸ್ವಾಮಿ ಮಾತನಾಡಿದರು. ಜೆಡಿಎಸ್ ನಡುಗೆ ರೈತರ ಬಳಿಗೆ ಎಂಬ ಧ್ಯೇಯೋದ್ಧೇಶದೊಂದಿಗೆ ಜೆಡಿಎಸ್‌ನ ವೈ. ಮಲ್ಲಿಕಾರ್ಜುನ, ಎರ್ರಿಸ್ವಾಮಿ,ಬನ್ನಿಗೋಳ್ ವಂಕಣ್ಣ, ಎಕಾಂಬ್ರೇಶ್ವರ ನಾಯಕ್, ಎನ್. ಗೋಪಿ, ಹೂಗಾರ ಬಸವರಾಜ್, ಡಿ. ಶರಣಪ್ಪ, ಪರಾಡಿ ಸಣ್ಣ ಹನುಮಂತಪ್ಪ, ಸುಬಾನ್ ಸಾಬ್, ಫೋಟೋ ರಾಮಣ್ಣ, ಬಾಳಿಕಾಯಿ ವೀರೇಶ್ ಮತ್ತಿತರರು ಗೊಲ್ಲರಹಳ್ಳಿ, ದೂಪದಹಳ್ಳಿ, ತಿಮ್ಮಲಾಪುರ, ಕಂದಗಲ್ಲು, ಗಜಾಪರು, ಚಿರಿಬಿ, ಗಂಗಮ್ಣನಹಳ್ಳಿ, ರಾಂಪುರ, ಹರಾಳು, ಅಯ್ಯನಹಳ್ಳಿಗಳಿಗೆ ಭೇಟಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.