ಬಳ್ಳಾರಿ

ಜೋಳಕ್ಕೆ ಜೋನಿ ರೋಗ: ಹತೋಟಿಗೆ ತಜ್ಞರ ಸಲಹೆ

Published On :

ಬಳ್ಳಾರಿ: ಹಗರಿ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ೤ ಎಸ್.ಟಿ. ಯಂಜೇರಪ್ಪ, ಮಣ್ಣು ತಜ್ಞ ಕೆ. ವಿಜಯಶೇಖರ್, ಸಿರುಗುಪ್ಪ ಕೃಷಿ ಸಂಶೋಧನಾ ಕೇಂದ್ರದ ತಳಿ ತಜ್ಞ ಡಾ೤ ಜೆ.ಎಂ. ನಿಡಗುಂದಿ, ಬೇಸಾಯ ತಜ್ಞ ಎಂ.ವೈ. ಅಜಯ್ ಕುಮಾರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಂ. ಗುರುಸಿದ್ಧಮೂರ್ತಿ ಅವರನ್ನು ಒಳಗೊಂಡ ತಂಡ ಬಳ್ಳಾರಿ ತಾಲೂಕು ಕಮ್ಮರಚೇಡು ಗ್ರಾಮಕ್ಕೆ ಭೇಟಿ ನೀಡಿ, ಹೈಬ್ರಿಡ್ ಜೋಳದ ಬೆಳೆಗೆ ಜೋನಿ ರೋಗ ತಗುಲಿದ್ದನ್ನು ಪತ್ತೆಹಚ್ಚಿದ್ದಾರೆ. ಜೋನಿ ರೋಗದ ಪ್ರಾರಂಭದಲ್ಲಿ ಸಸ್ಯ ಹೇನಿನ ಬಾಧೆಗೆ ತುತ್ತಾಗುತ್ತದೆ. ಹೇನುಗಳು ಎಲೆಯ ಹಿಂಭಾಗದಲ್ಲಿ ಗುಂಪಾಗಿ ಅವಿತು ರಸ ಹೀರುವುದರಿಂದ ಬೆಳೆ ಒಣಗಲು ಆರಂಭಿಸುತ್ತದೆ. ಶಿಲೀಂದ್ರ ಬಾಧೆ ಹೆಚ್ಚಾಗಿ ಎಲೆ ಕಪ್ಪು ಬಣ್ಣಕ್ಕೆ ತಿರುಗುವುದು.
ಜೋನಿ ರೋಗಕಾರಕ ಶಿಲೀಂದ್ರದಿಂದ ಎಲೆ ಹಾಗೂ ತೆನೆಯ ಮೇಲೆ ಮುತ್ತಿನ ಹನಿಗಳಂತಹ ಅಂಟು ದ್ರವ ಉತ್ಪತ್ತಿಯಾಗಿ ಎಲೆ ಮತ್ತು ತೆನೆ ಕಪ್ಪು ಬಣ್ಣಕ್ಕೆ ತಿರುಗಿ ಕಾಳು ಕಟ್ಟುವಿಕೆಗೆ ಅಡ್ಡಿಪಡಿಸುತ್ತದೆ. ಹೀಗಾಗಿ, ಜೋಳದ ತೆನೆ ಜೊಳ್ಳಾಗಿ ಇಳುವರಿ ಕುಂಠಿತಗೊಳ್ಳುತ್ತದೆ. ಕಾಳುಗಳ ಗುಣಮಟ್ಟವೂ ಕುಸಿಯುತ್ತದೆ. ಜೋನಿ ರೋಗದ ಹತೋಟಿಗೆ ಪ್ರಾರಂಭದಲ್ಲಿ ಬೇವಿನ ಬೀಜದ ಕಷಾಯ (5 ಮಿ.ಲೀ. ಪ್ರತಿ ಲೀಟರ್ ನೀರಿಗೆ) ಅಥವಾ ಬೇವಿನ ಕೀಟ ನಾಶಕ ಸಿಂಪರಣೆ (3 ಮಿ.ಲೀ. ಪ್ರತಿ ಲೀಟರ್ ನೀರಿಗೆ) ಜತೆಗೆ 2 ಗ್ರಾಂ ಜೈರಾಮ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಲು ವಿಜ್ಞಾನಿಗಳು ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.