ಅಲ್ಪಸಂಖ್ಯಾತ ವೀರಶೈವರು ರಾಜಕಾರಣಕ್ಕೆ ಬಲಿ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಜ. 28
ಭಾರತದಲ್ಲಿ ಬಹುಸಂಖ್ಯಾತರಾಗಿರುವ ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯಗಳಿಗೆ ಕೇಂದ್ರ ಸರ್ಕಾರ ಓಟ್ ಬ್ಯಾಂಕ್ಗಾಗಿ ಅಲ್ಪಸಂಖ್ಯಾತರ ಪಟ್ಟಿಗೆ ಸೇರ್ಪಡೆ ಮಾಡಿದೆ. ಆದರೆ ದೇಶದಲ್ಲಿ ವೀರಶೈವ ಜನಾಂಗ ಅಲ್ಪಸಂಖ್ಯಾತರಾಗಿದ್ದರು ಯಾವುದೇ ಪ್ರಯೋಜನವಿಲ್ಲ. ಈ ಜನಾಂಗ ರಾಜಕಾರಣಕ್ಕೆ ಬಲಿಯಾಗಿದೆ ಎಂದು ವೀರಶೈವ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗೇಶ್ವರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಹಿರೇಹಡಗಲಿಯಲ್ಲಿ ಗ್ರಾಮದರ್ಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಾತ್ಯತೀತ ರಾಷ್ಟ್ರವೆಂದು ಹೇಳಿಕೊಳ್ಳುವ ರಾಜಕಾರಣಿಗಳು ನಿರಂತರ ಓಟ್ ಬ್ಯಾಂಕ್ಗಾಗಿ 16 ಕೋಟಿಗೂ ಹೆಚ್ಚು ಮುಸ್ಲಿಮರು, 10 ಕೋಟಿಗೂ ಹೆಚ್ಚು ಕ್ರಿಶ್ಚಿಯನ್ ಸಮುದಾಯಗಳನ್ನು ಅಲ್ಪಸಂಖ್ಯಾತರ ಪಟ್ಟಿಗೆ ಸೇರ್ಪಡೆ ಮಾಡಿ, ಲಿಂಗಾಯಿತರನ್ನು ಬಹುಸಂಖ್ಯಾತರ ಪಟ್ಟಿಯಲ್ಲಿ ಸೇರಿಸಿ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿದರು.
ವೀರಶೈವ ಲಿಂಗಾಯಿತ ಒಳಪಂಗಡಗಳು ಚಿನ್ನಪ್ಪರೆಡ್ಡಿ, ಹಾವನೂರು ವರದಿಯ ಪರಿಣಾಮ ಒಡೆದು ಹೋಗಿದ್ದರಿಂದ ಒಳಪಂಗಡಗಳು ಮೀಸಲಾತಿಯ ಪೂರ್ಣ ಲಾಭ ಪಡೆದುಕೊಂಡಿವೆ. ಆದರೆ ಈವರೆಗೂ ಪಂಚಮಸಾಲಿ ಸಮಾಜ ವೀರಶೈವ ಧರ್ಮದಲ್ಲಿ ಅಪಸ್ವರ ಬರದಂತೆ ಪಾವಿತ್ರತೆ ಕಾಪಾಡಿಕೊಂಡು ಬಂದಿದೆ ಎಂದರು.
ಪೀಠಕ್ಕಿಂತ ಸಮಾಜ ದೊಡ್ಡದು: ಮೂರಂಕಿಯಷ್ಟು ಮಠಗಳು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿವೆ ಎಂದ ಅವರು, ಇಂದಿನ ಮಠ ಮಾನ್ಯಗಳಲ್ಲಿ ಸ್ವಾಮೀಜಿಗಳ ಸಂಬಂಧಿಕರಿಂದ ತುಂಬಿಕೊಂಡಿವೆ, ಭಕ್ತರಿಗಾಗಿಯೇ ಉಳಿದುಕೊಂಡಿರುವ ಮಠಗಳ ಸಂಖ್ಯೆ ಕ್ಷೀಣಿಸುತ್ತಿದೆ. ಸಾಕಷ್ಟು ಮಠ ಮಾನ್ಯಗಳು ಈಗಾಗಲೇ ತಮ್ಮ ಅಸ್ತಿತ್ವ ಕಳೆದುಕೊಂಡು, 2 ಸಾವಿರಕ್ಕೂ ಅಧಿಕ ಮಠಗಳ ವ್ಯಾಜ್ಯಗಳು ನ್ಯಾಯಾಲದ ಮೆಟ್ಟಿಲೇರಿವೆ ಎಂದ ಅವರು, ಪೀಠಕ್ಕಿಂತ ಸಮಾಜ ದೊಡ್ಡದು.
ಆದ್ದರಿಂದ ವೀರಶೈವ ಲಿಂಗಾಯಿತ ಪಂಚಮಸಾಲಿ ಸಮಾಜವನ್ನು ಪ್ರಬುದ್ಧವಾಗಿ ಬೆಳೆಸುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ನಿರಂತರವಾಗಿ ಸಂಘಟನಾತ್ಮಕ ಹೋರಾಟ ಮಾಡಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅವಕಾಶಗಳನ್ನು ಪಡೆಯಬೇಕು ಎಂದು ಹೇಳಿದರು.
ಸಮಾಜದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಪಾಟೀಲ ಬಸವನಗೌಡ, ಚುನಾವಣೆ ಬಂದಾಗ ಸಮಾಜದಲ್ಲಿ ರಾಜಕಾರಣ ಬೆರೆಸುವ ಹುನ್ನಾರ ನಡೆಸುತ್ತಾರೆ. ಇಂತಹ ಕುತಂತ್ರಗಳಿಗೆ ಯಾರು ಮಣೆ ಹಾಕದೆ ಸಮಾಜ ಬಾಂಧವರು ಸಂಘಟನೆಗೆ ಮುಂದಾಗಬೇಕಿದೆ ಎಂದರು.
ರಾಜ್ಯ ಸಮಿತಿ ಸದಸ್ಯ ಚನ್ನಬಸಪ್ಪ ಮಾತನಾಡಿದರು. ಕೆ. ಪತ್ರೇಶ ಗ್ರಾಮ ಘಟಕದ ಅಧ್ಯಕ್ಷ ಬಳ್ಳೊಳ್ಳಿ ವೀರಣ್ಣ, ತಾಲೂಕು ಸಮಿತಿ ಸದಸ್ಯ ಗಡ್ಡನವರ ಶಿವಪುತ್ರಪ್ಪ ಇತರರಿದ್ದರು. ಎಂ.ಎಸ್. ಶಂಭುಲಿಂಗಪ್ಪ ಕಾರ್ಯಕ್ರಮ ನಿರ್ವಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

