ಬಳ್ಳಾರಿ

ರೆಡ್ಡಿ ವಿಚಾರಣೆ ಮುಂದೂಡಿಕೆ

Published On :


ಸಂಡೂರು: ಮಾಚಿ ಸಚಿವ ಜನಾರ್ದನ ರೆಡ್ಡಿ ಮತ್ತಿತರ ಮೂವರ ವಿರುದ್ಧ ಟಪಾಲ್ ನಾರಾಯಣ ರೆಡ್ಡಿ ಅವರು 2006ರಲ್ಲಿ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ಗಡಿ ಗುರುತು ನಾಶ ಹಾಗೂ ಜೀವ ಬೆದರಿಕೆ ಪ್ರಕರಣದ ವಿಚಾರಣೆ ಸೋಮವಾರ ಸಂಡೂರು ನ್ಯಾಯಾಲಯದಲ್ಲಿ ನಡೆಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶ ಶಿವಾನಂದ ಮಾರುತಿ ಜಪರೆ ಅವರು ಮಾರ್ಚ್ 30ಕ್ಕೆ ಮುಂದೂಡಿದ್ದಾರೆ. ಈ ಪ್ರಕರಣದಲ್ಲಿ ಇತರ ಆರೋಪಿಗಳಾಗಿರುವ ರಾಮಚಂದ್ರ ರೆಡ್ಡಿ ಹಾಗೂ ಲಕ್ಷ್ಮೀ ಪ್ರಸಾದ್ ಅವರು ಸೋಮವಾರ ಸಂಡೂರು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಜನಾರ್ದನ ರೆಡ್ಡಿ ಅವರು ಹಾಜರಾಗದಿರುವ ಕಾರಣ, ಅವರಿಗೆ ಮುಂದಿನ ವಿಚಾರಣೆ ವೇಳೆ ಹಾಜರಾಗಲು ನ್ಯಾಯಾಧೀಶರು ವಾರೆಂಟ್ ಹೊರಡಿಸಿದರು. ಆರೋಪಿಗಳ ಪರವಾಗಿ ವಕೀಲ ಪಾಟೀಲ್ ಸಿದ್ದಾರೆಡ್ಡಿ ಅವರು ಹಾಜರಾಗಿದ್ದರು. ಸರ್ಕಾರದ ಪರವಾಗಿ ಎಪಿಪಿ ಶರಣಬಸಪ್ಪ ಹಾಜರಾಗಿದ್ದರು.
ಕಲ್ಲಿನಿಂದ ಜಜ್ಜಿ ಮಹಿಳೆ ಕೊಲೆ
ಬಳ್ಳಾರಿ:  ಬಹಿರ್ದೆಸೆಗೆ ಹೋದ ಮಹಿಳೆಯೋರ್ವಳ ಮುಖಕ್ಕೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿ, ಕೊರಳಲ್ಲಿದ್ದ ಮಾಂಗಲ್ಯ ಸರ ಕಿತ್ತುಕೊಂಡು ಹೋದ ಘಟನೆ ತಾಲೂಕಿನ ಸಿರುಗುಪ್ಪ ರಸ್ತೆಯ ಲಕ್ಷ್ಮಿನಗರ ಕ್ಯಾಂಪಿನಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಮೃತಳನ್ನು ಲಕ್ಷ್ಮಿನಗರ ಕ್ಯಾಂಪ್‌ನ ಸುಜಾತಾ (32) ಎಂದು ಗುರುತಿಸಲಾಗಿದ್ದು, ಈಕೆ ಸೋಮವಾರ ಬೆಳಗ್ಗೆ 5.15ರ ಸುಮಾರಿಗೆ ಬಹಿರ್ದೆಸೆಗೆ ಹೋಗಿ ಅರ್ಧ ಗಂಟೆಯಾದರೂ ಮನೆಗೆ ಬಂದಿರಲಿಲ್ಲ. ನೋಡಲು ಹೋದಾಗ ಸುಜಾತ ಕೊಲೆಯಾಗಿ ಬಿದ್ದಿದ್ದಳು. ಕ್ಯಾಂಪ್‌ನ ಸಮೀಪದಲ್ಲಿ ಎಚ್‌ಎಲ್‌ಸಿ ಡಿಸ್ಟ್ರಿಬ್ಯೂಟರ್ ಕೆನಾಲ್ ಮೇಲೆ ಸುಜಾತಾಳ ಮುಖಕ್ಕೆ ಕಲ್ಲಿನಿಂದ ಹೊಡೆದು ಕೊಲೆ ಮಾಡಲಾಗಿತ್ತು. ಈಕೆ ಮೂಲತಃ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿ ಮಂಡಲದ ಕುಚಿಪುಡಿ ಗ್ರಾಮದವಳಾಗಿದ್ದು, 10 ವರ್ಷಗಳ ಹಿಂದೆ ಲಕ್ಷ್ಮಿನಗರ ಕ್ಯಾಂಪ್‌ನಲ್ಲಿ ಬಂದು ವಾಸವಾಗಿದ್ದರು. ಗಂಡ ಶ್ರೀನಿವಾಸ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದನು. ಇವರಿಗೆ ಇಬ್ಬರು ಮಕ್ಕಳಿದ್ದಾರೆ.   ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.