ಬಳ್ಳಾರಿ

ದಾದಾಪೀರ್ ಧರ್ಮಛತ್ರ ರಕ್ಷಿಸಲು ಆಗ್ರಹ

Published On :

ಹೊಸಪೇಟೆ: ತಾಲೂಕಿನ ಕಮಲಾಪುರ ಪಟ್ಟಣದ ಹಂಪಿ ರಸ್ತೆಯಲ್ಲಿರುವ ದಾದಾಪೀರ್ ಧರ್ಮಛತ್ರವನ್ನು ಸಂರಕ್ಷಿಸುವಂತೆ ಒತ್ತಾಯಿಸಿ ಸ್ಥಳೀಯ ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆ ಪದಾಧಿಕಾರಿಗಳು ಹಂಪಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಕಮಲಾಪುರ ಪಪಂ ವ್ಯಾಪ್ತಿಯ 12ನೇ ವಾರ್ಡ್‌ನ ಹಂಪಿ ಮತ್ತು ಹೊಸಪೇಟೆ ರಸ್ತೆಯಲ್ಲಿ ಕ್ರಿ.ಶ. 1860ರ ಸುಮಾರಿನಲ್ಲಿ ದಾದಾಪೀರ್ ಹೆಸರಿನಲ್ಲಿ ಧರ್ಮ ಛತ್ರವೊಂದನ್ನು ಸ್ಥಾಪಿಸಿದ ಬಗ್ಗೆ ಕೆ. ಶಿವಲೀಲಾ ಅವರ 'ಕಮಲಾಪುರ-ಒಂದು ಸಾಂಸ್ಕೃತಿಕ ಅಧ್ಯಯನ' ಪಿಎಚ್‌ಡಿ ಪ್ರಬಂಧದಲ್ಲಿ ಉಲ್ಲೇಖವಾಗಿದೆ. ಈ ಹಿನ್ನೆಲೆಯಲ್ಲಿ 150 ವರ್ಷಗಳ ಹಿಂದೆ ಈ ಧರ್ಮಛತ್ರ ನಿರ್ಮಿಸಿರುವುದು ಸಂದೇಹಾಸ್ಪದವಾಗಿ ತಿಳಿದು ಬರುತ್ತಿದೆ. ಸರ್ಕಾರ 100 ವರ್ಷಗಳ ಹಿಂದಿನ ಕಟ್ಟಡಗಳನ್ನು ಪಾರಂಪರಿಕ ಕಟ್ಟಡಗಳೆಂದು ಘೋಷಿಸಿದೆ. ಪಾರಂಪರಿಕ ಕಟ್ಟಡಗಳ ಸಾಲಿಗೆ ಸೇರುವ ಧರ್ಮಛತ್ರವನ್ನು ಉಳಿಸಲೇಬೇಕಾದ ಅಗತ್ಯವಿದೆ. ತಕ್ಷಣ ರಸ್ತೆ ಅಗಲೀಕರಣದಲ್ಲಿ ತೆರವುಗೊಳ್ಳುತ್ತಿರುವ ಧರ್ಮಛತ್ರವನ್ನು ಉಳಿಸಲು ಬೇಕಾದ ಅಗತ್ಯ ಕ್ರಮ ಕೈಗೊಳ್ಳಬೇಕು. ಅದನ್ನು ಯಥಾಸ್ಥಿತಿಯಲ್ಲಿ ಕಾಪಾಡಬೇಕು ಎಂದು ಸ್ಥಳೀಯ ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆ ಪದಾಧಿಕಾರಿಗಳಾದ ಡಾ. ವಿಶ್ವನಾಥ ಮಾಳಗಿ, ಕೆ. ವೀರಣ್ಣ ಪೂಜಾರಿ, ಮಂಜುನಾಥ ಸೇರಿದಂತೆ ಇತರರು ಹಂಪಿ ಅಭಿವೃದ್ದಿ ಪ್ರಾಧಿಕಾರಕ್ಕೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.