ಭರದಿಂದ ಸಾಗಿದೆ ಕಾಲುವೆ ಹೂಳೆತ್ತುವ ಕಾರ್ಯ
ಹಗರಿಬೊಮ್ಮನಹಳ್ಳಿ: ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಏತನೀರಾವರಿ ಯೋಜನೆಗಳ ಜಾಕ್ವೆಲ್ಸ್ ಹಾಗೂ ಕಾಲುವೆಗಳಲ್ಲಿ ತುಂಬಿರುವ ಹೂಳು ತೆಗೆಯುವ ಕಾರ್ಯ ಭರದಿಂದ ಸಾಗಿದೆ.
ತುಂಗಭದ್ರಾ ಜಲಾಶಯದ ಹಿನ್ನೀರು ಬಳಸಿಕೊಂಡು ತಾಲೂಕಿನ 14 ಏತನೀರಾವರಿ ಯೋಜನೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ ಬನ್ನಿಗೋಳ, ಅಂಕಸಮುದ್ರ ಯೋಜನೆಗಳನ್ನು ಹೊರತುಪಡಿಸಿ ಉಳಿದ 12 ಏತ ಯೋಜನೆಗಳ ಜಾಕ್ವೆಲ್ಸ್ ಮತ್ತು ಕಾಲುವೆಗಳಲ್ಲಿ ತುಂಬಿರುವ ಹೂಳನ್ನು ಸಣ್ಣ ನೀರಾವರಿ ಇಲಾಖೆ ವತಿಯಿಂದ ತೆಗೆಸಿ, ಹೊಲಗಳಿಗೆ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೆ ಹಿನ್ನೀರು ಜಾಕ್ವೆಲ್ ಬಳಿಗೆ ಬಂದಿದ್ದರಿಂದ ಬನ್ನಿಗೋಳ, ಅಂಕಸಮುದ್ರ ಯೋಜನೆಗಳಲ್ಲಿ ಹೂಳು ಮೇಲೆತ್ತಲು ಸಾಧ್ಯವಾಗಿಲ್ಲ ಎಂದು ಸಣ್ಣ ನೀರಾವರಿ ಇಲಾಖೆ ಎಇಇ ಶಿವಕುಮಾರ ತಿಳಿಸಿದರು.
ಹೆಚ್ಚಾದ ಹೂಳಿನಿಂದ ನಮ್ಮ ಹೊಲಗಳಿಗೆ ನದಿ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಹೂಳಿನ ಸಮಸ್ಯೆ ನಿವಾರಿಸಿ ಅಚ್ಚುಕಟ್ಟು ಪ್ರದೇಶಕ್ಕೆ ಒಳಪಡುವ ರೈತರ ಹಿತರಕ್ಷಣೆ ಮಾಡಬೇಕೆಂದು ಇತ್ತೀಚಿಗೆ ಶಾಸಕ ಎಸ್. ಭೀಮಾನಾಯ್ಕ ಅವರಲ್ಲಿ ಅಚ್ಚುಕಟ್ಟುದಾರರು ಮನವಿ ಮಾಡಿಕೊಂಡಿದ್ದರು. ಶಾಸಕರ ಆದೇಶದಂತೆ ಸಣ್ಣನೀರಾವರಿ ಇಲಾಖೆ ವತಿಯಿಂದ ಈಗ ಹೂಳೆತ್ತುವ ಕಾರ್ಯ ಭರದಿಂದ ಸಾಗುವಂತಾಗಿದೆ. ಹಲವು ವರ್ಷಗಳಿಂದಲೂ ಹೂಳಿನ ಸಮಸ್ಯೆ ನಿವಾರಣೆಯಾಗದೆ ನಮಗೆಲ್ಲ ತುಂಬಾ ತೊಂದರೆಯಾಗಿತ್ತು. ಕಾಲುವೆಗಳಲ್ಲಿ ಹೆಚ್ಚಿನ ಹೂಳು ತುಂಬಿದ್ದರಿಂದ ಅಚ್ಚುಕಟ್ಟು ಕೊನೆ ಭಾಗದಲ್ಲಿನ ಹೊಲಗಳಿಗೆ ನೀರು ಸರಾಗವಾಗಿ ಮುಟ್ಟದೆ, ರೈತರು ತೊಂದರೆ ಅನುಭವಿಸುತ್ತಿದ್ದರು. ಆದರೆ ಈಗ ಹೂಳು ತೆಗೆಸಿದ್ದರಿಂದ ಎಲ್ಲ ಹೊಲಗಳಿಗೂ ನೀರು ಸರಾಗವಾಗಿ ಹರಿಯಲಿದೆ ಎಂದು ರೈತರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

