ಬಳ್ಳಾರಿ

ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 7
ಪ್ರಸ್ತುತ ಎಲ್ಲ ವರ್ಗದ ಜನರು ಒಂದಿಲ್ಲ ಒಂದು ರೀತಿಯ ದುಃಖ, ಸಮಸ್ಯೆ ಅನುಭವಿಸುವಂತಾಗಿದೆ. ಆಧ್ಯಾತ್ಮ ಚಿಂತನೆ ಹಾಗೂ ಉತ್ತಮ ಪುಸ್ತಕಗಳನ್ನು ಅಭ್ಯಾಸಿಸುವ ಗುಣಗಳನ್ನು ಬೆಳೆಸಿಕೊಂಡಲ್ಲಿ ಸಮಸ್ಯೆಗಳಿಂದ ಹೊರಬರಲು ಸಾಧ್ಯ ಎಂದು ಅರ್ಚಕ ವ್ಯಾಸರಾಜಾಚಾರ್ಯ ಅಭಿಪ್ರಾಯಪಟ್ಟರು.
ನಗರದ ಸತ್ಯನಾರಾಯಣಪೇಟೆ ಶ್ರೀಎಳ್ಳುಗಂಟು ಶನೇಶ್ವರ ದೇವಸ್ಥಾನದಲ್ಲಿ ಶನಿ ತ್ರಯೋದಶಿ ನಿಮಿತ್ತ ಶ್ರೀಶನಿದೇವರ ಮೂರ್ತಿ ಅನಾವರಣ ಹಾಗೂ ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಂಡಿದ್ದ ನವಗ್ರಹ ಶಾಂತಿ ಹೋಮ ನೆರವೇರಿಸಿ ಶನಿವಾರ ಅವರು ಮಾತನಾಡಿದರು.
ಇಂದಿನ ಆಧುನಿಕ ಪ್ರಪಂಚದಲ್ಲಿ ಹಣ ನೀಡಿದರೇ ಬೇಕಾದ್ದನ್ನು ಪಡೆಯಬಹುದು ಎಂಬ ಕಲ್ಪನೆಯಿಂದ ಹೊರಬರುವ ಅಗತ್ಯವಿದ್ದು, ಹಣದಿಂದ ನೆಮ್ಮದಿ, ಮನಃ ಶಾಂತಿ ಪಡೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಮೂರ್ತಿ ಅನಾವರಣ: ಶನಿ ತ್ರಯೋದಶಿ ಅಂಗವಾಗಿ ಬೆಳಗ್ಗೆ ದೇವಸ್ಥಾನದಲ್ಲಿ ಶ್ರೀ ನರಸಿಂಹ, ಆಂಜನೇಯ ಹಾಗೂ ಶನಿದೇವರಿಗೆ ವಿಶೇಷವಾಗಿ ಫಳ, ಪಂಚಾಮೃತಾಭಿಷೇಕ, ಗಂಧಾಕ್ಷತೆ ಅಭಿಷೇಕ, ತುಳಸಿ, ನಾನಾ ಹೂವುಗಳ ಅರ್ಚನೆ ನಡೆಯಿತು. ನರಸಿಂಹ, ಆಂಜನೇಯ ಸ್ವಾಮಿ ಮತ್ತು ಶನಿದೇವರಿಗೆ ವಿಶೇಷ ರೇಷ್ಮೆ, ರಜತ ಅಲಂಕಾರ ಮಾಡಲಾಗಿತ್ತು. ದೇವಸ್ಥಾನದ ಆವರಣದಲ್ಲಿ 7 ಅಡಿಗಳಷ್ಟು ಎತ್ತರದ ಶನಿದೇವರ ಮೂರ್ತಿಯನ್ನು ಅನಾವರಣಗೊಳಿಸಿ ವಿಶೇಷ ಪೂಜೆ ನೆರವೇರಿಸಲಾಯಿತು.
ನಂತರ ಶನಿದೇವರ ಹೊಸ ಮೂರ್ತಿ ಸಮೀಪದಲ್ಲಿ ಲೋಕ ಕಲ್ಯಾಣಾರ್ಥವಾಗಿ ಗಣಪತಿ, ನವಗ್ರಹ, ಮೃತ್ಯುಂಜಯ ಸಹಿತ ಲಕ್ಷ್ಮೀ ನಾರಾಯಣ ಹೋಮ ಜರುಗಿತು. ದೇವಸ್ಥಾನದ ಆವರಣದಲ್ಲಿ ಉಚಿತ ದೀಪೋತ್ಸವ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ರಾಘವೇಂದ್ರ ಶರ್ಮ, ಕೃಷ್ಣಮೂರ್ತಿ, ಘನಮಲ್ಲನಗೌಡ, ಡಾ. ಪ್ರಸಾದ್, ಪದ್ಮನಾಭ್, ಕುಮಾರ್, ಡಾ. ಸುರೇಶ್, ರಾಮಚಂದ್ರಾಚಾರ್ಯ, ಈರಣ್ಣಗೌಡ, ಶ್ರೀನಿವಾಸ್, ನಟರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.