ಗೆಲುವಿನಲ್ಲಿ ಕುರುಬರ ಪಾತ್ರ ಮಹತ್ವದ್ದು
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಜು. 15
ಚುನಾವಣೆಯಲ್ಲಿ ಕುರುಬ ಸಮುದಾಯ ತಮ್ಮನ್ನು ಬೆಂಬಲಿಸಿದ್ದರಿಂದಲೇ ಅತಿ ಹೆಚ್ಚು ಅಂತರದ ಗೆಲವು ಸಾಧಿಸಿದ್ದೇನೆ. ಸಮಾಜದ ಸಹಕಾರ ನಿರಂತರವಾಗಿ ಹೀಗೆ ಇರಲಿ ಎಂದು ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.
ಇಲ್ಲಿನ ಜಿಬಿಆರ್ ಕಾಲೇಜು ಆವರಣದಲ್ಲಿ ತಾಲೂಕು ಕುರುಬ ಸಮಾಜದಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಕನಕ ಭವನ ಪೂರ್ಣಗೊಳಿಸಲು ರು. 50 ಲಕ್ಷ ಅಗತ್ಯವಿದ್ದು, ತಮ್ಮ ಅನುದಾನದ ಮೊದಲ ಕಂತಿನಲ್ಲೇ ರು. 25 ಲಕ್ಷ ನೀಡುತ್ತೇನೆ. ಸಿಎಂ ಸ್ದಿದರಾಮಯ್ಯ ಜತೆಗೆ ಚರ್ಚಿಸಿ ಅಗತ್ಯ ಅನುದಾನ ನೀಡಿ ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು. ತಮ್ಮ ಗೆಲುವಿನ ಹಿಂದೆ ಕುರುಬ ಸಮುದಾಯ ಬಹಳ ಮಹತ್ವದ ಪಾತ್ರವಹಿಸಿದೆ. ಹಾಲುಮತ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಕಲ ರೀತಿಯ ಸಹಕಾರ ನೀಡುತ್ತೇನೆ. ಕಾಗಿನೆಲೆ ಶ್ರೀಗಳ ಅಣತಿಯಂತೆ ಸಮಾಜ ನಡೆದುಕೊಂಡ್ದಿದರಿಂದ ಇಲ್ಲಿ ತಮ್ಮ ಗೆಲುವಿನೊಂದಿಗೆ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ ಎಂದರು.
ಸಂಬಂಧ ಗಟ್ಟಿಯಾಗಿದೆ: ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ಉದ್ದೇಶಿತ ಕನಕ ಸಮುದಾಯ ಭವನ ಕೇವಲ ಹಾಲುಮತಸ್ಥರಿಗೆ ಮಾತ್ರ ಸೀಮಿತವಾಗದೆ, ಜಾತ್ಯತೀತ ಕಲ್ಯಾಣ ಮಂಟಪವಾಗಿ, ಅಲೆಮಾರಿಯಾಗಿ ಬದುಕುವ ಕುರಿಗಾರರಿಗೆ ಅನ್ನ, ನೀರು ಕೊಟ್ಟು ಹೊಟ್ಟೆ ತುಂಬಿಸುವ ಲಂಬಾಣಿಗರಿಗೂ ಉತ್ತಮ ಬಾಂಧವ್ಯವಿದೆ. ಅಂಬಲಿ ಮತ್ತು ಕಂಬಳಿಯ ನಡುವಿನ ಸಂಬಂಧ ಇನ್ನೂ ಗಟ್ಟಿಯಾಗಿರಲಿ ಎಂದರು.
ಗುಲ್ಬರ್ಗಾ ವಿಭಾಗದ ಕಾಗಿನೆಲೆ ಪೀಠಾಧಿಪತಿ ಸಿದ್ಧರಮಾನಂದಪುರಿ ಸ್ವಾಮೀಜಿ ಮಾತನಾಡಿದರು. ತಾಲೂಕು ಕುರುಬ ಸಮಾಜದ ಅಧ್ಯಕ್ಷ ಎಚ್. ಬೀರಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯರಾದ ಕೆ.ಎಂ. ಹಾಲಪ್ಪ ಗಾದಿಗನೂರು, ಪ್ರೇಮಕ್ಕ, ಕೆಪಿಸಿಸಿ ಸದಸ್ಯ ಕಲ್ಲುಕಂಬ ಪಂಪಾಪತಿ, ಜಿಲ್ಲಾ ಕಾಂಗ್ರೆಸ್ ಓಬಿಸಿ ಘಟಕದ ಅಧ್ಯಕ್ಷ ಜೆ. ಕೃಷ್ಣ, ಬಳ್ಳಾರಿ ಪಾಲಿಕೆ ಸದಸ್ಯ ಬೆಣಕಲ್ ಬಸವರಾಜಗೌಡ, ಹರಪ್ಪನಹಳ್ಳಿಯ ವೈ.ಕೆ.ಬಿ. ದುರುಗಪ್ಪ, ಬಿ.ಎಚ್.ಬಸವರಾಜ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಗೋಳ ಚಿದಾನಂದ, ಎಪಿಎಂಸಿ ಅಧ್ಯಕ್ಷ ವಾರದ ಗೌಸ್ಮೊಹಿದ್ದೀನ್, ಅರವಳ್ಳಿ ವೀರಣ್ಣ, ತಾಪಂ ಅಧ್ಯಕ್ಷೆ ದುರುಗಮ್ಮ, ಜಿಪಂ ಸದಸ್ಯ ಜಿ. ವಸಂತ, ನವಲಿ ಗ್ರಾಪಂ ಅಧ್ಯಕ್ಷ ಸಿ. ಹಾಲಪ್ಪ ಇತರರಿದ್ದರು.
ಕಾರ್ಯಕ್ರಮದಲ್ಲಿ ಮೈಲಾರಲಿಂಗೇಶ್ವರನ ಕಾರ್ಣಿಕ ನುಡಿಯುವ ಮಾಲತೇಶಪ್ಪ ಕಾರ್ಣಿಕದ, ಪುರಸಭೆ ನೂತನ ಸದಸ್ಯ ಎಚ್. ಕರಿಯಪ್ಪ, ಆರ್. ಪವಿತ್ರ, ಈಟಿ ಲಕ್ಷ್ಮವ್ವ ಅವರನ್ನು ಸನ್ಮಾನಿಸಲಾಯಿತು. ಅತಿಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪ್ರಕಾಶ ಜೈನ್ ಪ್ರಾರ್ಥಿಸಿದರು, ಎಂ. ಪರಮೇಶ್ವರಪ್ಪ ಸ್ವಾಗತಿಸಿದರು. ಬಿ. ಹನುಮಂತಪ್ಪ ಪ್ರಾಸ್ತಾವಿಕ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

