ಇಂದು ಶಾಸಕ ಆನಂದ ಸಿಂಗ್ರಿಂದ ಭೂಮಿ ಪೂಜೆ
ಹೊಸಪೇಟೆ: ಭಾರತ ವಿಕಾಸ ಪರಿಷದ್ನ ವಿಜಯನಗರ ಘಟಕದಿಂದ ಭೂಮಿಪೂಜೆ ಸಮಾರಂಭ ನಗರದ ಸಂಡೂರು ರಸ್ತೆಯ ವಿವೇಕಾನಂದ ನಗರದಲ್ಲಿ ಜು. 27ರಂದು ಬೆಳಗ್ಗೆ 10.45ಕ್ಕೆ ನಡೆಯಲಿದೆ. ಶಾಸಕ ಬಿ.ಎಸ್. ಆನಂದ್ ಸಿಂಗ್ ಭೂಮಿಪೂಜೆಗೆ ನೆರವೇರಿಸುವರು.
ಭಾರತ ವಿಕಾಸ ಪರಿಷದ್ನ ಮಹಾಪೋಷಕ ಕೆ.ಜಿ. ಸುಬ್ಬರಾವ್ ಶೆಟ್ಟಿ, ಗುಲ್ಬರ್ಗಾ ವಿವಿ ಸಿನೇಟ್ ಸದಸ್ಯ ಹಾಗೂ ವಲಯ ರೇಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಬಾಬುಲಾಲ್ ಜೈನ್, ಪರಿಷದ್ನ ರಾಷ್ಟ್ರೀಯ ವಿತ್ತ ಸಚಿವ ಕೆ.ಎಲ್. ಗುಪ್ತಾ, ದೆಹಲಿಯ ನಿಕಟಪೂರ್ವ ಹೆಚ್ಚುವರಿ ಮಹಾ ಕಾರ್ಯದರ್ಶಿ ಎಸ್. ದೌಲತ್ ರಾವ್ ಮುಖ್ಯಅತಿಥಿಗಳಾಗಿ ಭಾಗವಹಿಸುವರು.
ಮಧ್ಯಾಹ್ನ 12 ಗಂಟೆಗೆ ನಗರದ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಗೆ 50 ಮಂಚಗಳ ಸಮರ್ಪಣಾ ಸಮಾರಂಭ ಆಸ್ಪತ್ರೆ ಆವರಣದಲ್ಲಿ ನಡೆಯಲಿದೆ. ಪರಿಷದ್ನ ಕರ್ನಾಟಕ ಉತ್ತರ ಪ್ರಾಂತ ಅಧ್ಯಕ್ಷ ಶ್ಯಾಮ ಆರ್. ಚೌಧರಿ, ಆಸ್ಪತ್ರೆ ವೈದ್ಯಾಧಿಕಾರಿ ಡಾ. ಎಚ್. ಎರ್ರಿಯಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ. ಶಂಕರ್ ನಾಯಕ, ಪರಿಷದ್ನ ರಾಷ್ಟ್ರೀಯ ವಿತ್ತ ಸಚಿವ ಕೆ.ಎಲ್. ಗುಪ್ತಾ ಮುಖ್ಯಅತಿಥಿಗಳಾಗಿ ಭಾಗವಹಿಸುವರು.
ಪರಿಷದ್ನ ವಿಜಯನಗರ ಘಟಕದ ಅಧ್ಯಕ್ಷ ಕಾಂತಿಲಾಲ್ ಜೈನ್ ಅಧ್ಯಕ್ಷತೆ ವಹಿಸುವರು ಎಂದು ಪ್ರಾಂತ ಪ್ರಧಾನ ಸಚಿವ ಡಾ. ಪ್ರಮೋದ್ ಬಾಸಕರ್, ಪ್ರಾಂತ ಕೋಶ್ಯಾಧ್ಯಕ್ಷ ಕೆ. ನರಸಿಂಹಮೂರ್ತಿ ಅಪ್ಪಣ್ಣ, ಪ್ರಾಂತ ಸಂಘಟನಾ ಕಾರ್ಯದರ್ಶಿ ಗೋವಿಂದ ಕುಲಕರ್ಣಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

