ಬಳ್ಳಾರಿ

ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ

Published On :

ಬಳ್ಳಾರಿ: ತುಂಗಭದ್ರಾ ಜಲಾಶಯದ ಗರಿಷ್ಠ ಮಟ್ಟ 1,633 ಅಡಿ ಇದ್ದು, 1,631.85 ಅಡಿ ನೀರು ಸಂಗ್ರಹವಾಗಿದೆ.  ಜಲಾಶಯಕ್ಕೆ 1,34,189 ಕ್ಯುಸೆಕ್ ಒಳಹರಿವಿದ್ದು, ಅದರ ಪ್ರಮಾಣ ಹೆಚ್ಚಾಗುವ ಸಂಭವವಿರುವುದರಿಂದ ಜಲಾಶಯದ ನೀರನ್ನು ಯಾವ ಮುನ್ಸೂಚನೆಯಿಲ್ಲದೆ ನದಿಗೆ ಬಿಡಲಾಗುವುದು. ಹೊರಹರಿವಿನ ಪ್ರಮಾಣ 1,47,098 ಕ್ಯುಸೆಕ್‌ನಷ್ಟಿದ್ದು, 1.5 ಲಕ್ಷಕ್ಕೆ ಹೆಚ್ಚಿಸಬಹುದಾಗಿದೆ. ನದಿ ತೀರ ಪ್ರದೇಶದ ಜನರು ಸುರಕ್ಷಿತ ಸ್ಥಳಕ್ಕೆ ತೆರಳಬೇಕೆಂದು ಟಿಬಿ ಡ್ಯಾಂ ಕಾರ್ಯನಿರ್ವಾಹಕ ಅಭಿಯಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಪರಿಚಿತ ಶವ ಪತ್ತೆ
ಬಳ್ಳಾರಿ: ಅಪರಿಚಿತ ವ್ಯಕ್ತಿಯ ಶವವೊಂದು ಇಲ್ಲಿನ ಗಾಂಧಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನ ಪತ್ತೆಯಾಗಿದೆ. ಮೃತನು ಅಂದಾಜು 60 ವರ್ಷ ವಯಸ್ಸುಳ್ಳವನಾಗಿದ್ದು, 5.4 ಅಡಿ ಎತ್ತರ, ದುಂಡು ಮುಖ, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು, ತಲೆಯಲ್ಲಿ ಬಿಳಿ ಕೂದಲು, ಬಿಳಿ ಗಡ್ಡ ಚಹರೆ ಹೊಂದಿದ್ದಾನೆ. ಈತನ ಶವ ಜು. 29ರಂದು ಮಧ್ಯಾಹ್ನ 12.30ಕ್ಕೆ ನಗರದ ಹಳೇ ಬಸ್ ನಿಲ್ದಾಣದಲ್ಲಿ ದೊರೆತಿದ್ದು, ವಾರಸುದಾರರು ಯಾರೂ ಇಲ್ಲದ ಕಾರಣ ಶವವನ್ನು ನಗರದ ವಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಈ ಬಗ್ಗೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಸಂಬಂಧಿಕರಿದ್ದಲ್ಲಿ ದೂ.ಸಂ.-08392-258100, 272192ಗೆ ಸಂಪರ್ಕಿಸುವಂತೆ ಠಾಣಾಧಿಕಾರಿ ತಿಳಿಸಿದ್ದಾರೆ.
ಬೈಕ್ ಕಳ್ಳತನ: ದೂರು ದಾಖಲು
ಬಳ್ಳಾರಿ: ನಗರದಲ್ಲಿ ಎರಡು ಕಡೆ ಬೈಕ್ ಕಳ್ಳತನವಾಗಿರುವ ಕುರಿತು ನಗರದ ಗಾಂಧಿನಗರ ಠಾಣೆ ಹಾಗೂ ಕೌಲ್‌ಬಜಾರ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ನಗರದ ತಾಳೂರು ರಸ್ತೆಯಲ್ಲಿನ ವೆಂಕಟೇಶ್ವರ ದೇವಸ್ಥಾನ ಎದುರು ಜು. 9ರಂದು ಬೆಳಗ್ಗೆ 9.30ಕ್ಕೆ ಹೀರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಬೈಕ್‌ನ್ನು ನಿಲ್ಲಿಸಿ, ತಾಳೂರು ಗ್ರಾಮದ ಪಿಜಿಬಿ ಬ್ಯಾಂಕ್‌ಗೆ ಹೋಗಿದ್ದಾರೆ. ರಾತ್ರಿ 7.30ಕ್ಕೆ ಬಂದು ನೋಡಿದರೆ, ಸ್ಥಳದಲ್ಲಿ ಬೈಕ್ ಇರಲಿಲ್ಲ ಎಂದು ಬೈಕ್‌ನ ಮಾಲೀಕ ಗಾಂಧಿನಗರ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಕೋಟೆ ಪ್ರದೇಶದ ಸಾಯಿಬಾಬಾ ದೇವಸ್ಥಾನ ಎದುರು ಜು. 26ರಂದು ಬೆಳಗ್ಗೆ 10.30ಕ್ಕೆ ಚಂದ್ರಮೌಳಿ ಎನ್ನುವವರು ಬೀಗ ಹಾಕಿ ನಿಲ್ಲಿಸಿದ್ದ ಹೀರೋ ಹೊಂಡಾ ಫ್ಯಾಷನ್ ಪ್ಲಸ್ ಬೈಕ್ ಕಳುವಾಗಿದ್ದು, ನಗರದ ಕೌಲ್‌ಬಜಾರ್ ಠಾಣೆಗೆ ವಾಹನದ ಮಾಲೀಕ ದೂರು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.