ಬಳ್ಳಾರಿ

ಸಾಹಿತ್ಯದಿಂದ ಸಾಮಾನ್ಯರ ಬದುಕು ಹಸನಾಗಲಿ

Published On :

ಹೂವಿನಹಡಗಲಿ: ಅತ್ಯಂತ ವರ್ಣಮಯ ಸಾಹಿತ್ಯದಲ್ಲಿ ಹೆಚ್ಚು ಕೃಷಿ ಮಾಡುವುಕ್ಕಿಂತ ಶೋಷಿತ ಕೂಲಿ ಕಾರ್ಮಿಕರು, ಬಡವರು ಮತ್ತು ಶ್ರೀಸಾಮಾನ್ಯರ ಬದುಕನ್ನು ಹಸನುಗೊಳಿಸುವ ಸಾಹಿತ್ಯದ ಕಡೆಗೆ ಯುವ ಸಮೂಹ ಹೆಚ್ಚು ಗಮನ ಕೊಡಬೇಕೆಂದು ಸಾಹಿತಿ ಎಚ್. ಶೇಷಗಿರಿರಾವ್ ಹೇಳಿದರು.
ಇಲ್ಲಿನ ಜೆಎಸ್‌ಎಸ್ ಶಿಕ್ಷಣ ಸಂಸ್ಥೆ ವಿದ್ಯಾಲಯದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಸಾಹಿತಿ ಸಂವಾದದಲ್ಲಿ ಮಾತನಾಡಿ, ಕನ್ನಡ ಸಾಹಿತ್ಯ ಪರಂಪರೆಗೆ ಬಹುದೊಡ್ಡ ಇತಿಹಾಸ ಇದೆ. 12ನೇ ಶತಮಾನದಲ್ಲಿ ವಚನಗಳ ಕ್ರಾಂತಿ, ದಾಸ ಚಳವಳಿ ಅನಂತರದ ದಿನಗಳಲ್ಲಿ ನವ್ಯ ಮತ್ತು ಬಂಡಾಯ, ದಲಿತ ಸಾಹಿತ್ಯದ ಕೃಷಿಯು ಮೌಲ್ಯಗಳನ್ನು ಹೆಚ್ಚಿಸಿವೆ ಎಂದರು.
ಸಾಹಿತಿಗಳು ಜನಪ್ರಿಯತೆಗೆ ಜೋತು ಬೀಳದೆ ಜನಪರ ಕಾಳಜಿಯೊಂದಿಗೆ ಅವರ ಬದುಕನ್ನು ಅನಾವರಣಗೊಳಿಸುವ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು. ಸಾಹಿತ್ಯ ಸಂವಾದದಲ್ಲಿ ಕಾಲೇಜು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಡಿ.ಇಡಿ. ಕಾಲೇಜಿನ ಪ್ರಾಚಾರ್ಯ ಡಾ. ಎಂ.ಪಿ.ಎಂ. ಮಂಜುನಾಥ, ಕಸಾಪ ಅಧ್ಯಕ್ಷ ಸುರೇಶ ಅಂಗಡಿ, ಗೌರವ ಕಾರ್ಯದರ್ಶಿಗಳಾದ ಎಂ. ಚಿದಾನಂದಪ್ಪ, ನಾಗರಾಜ ಮಲ್ಕಿಒಡೆಯರ್, ಸಾಹಿತಿ ಪದ್ಮರಾಜ ಜೈನ್, ಶಿಕ್ಷಕ ಯಲ್ಲಪ್ಪ ಹಂದ್ರಾಳ ಮಾತನಾಡಿದರು. ಬಿ.ಇಡಿ. ಕಾಲೇಜು ಪ್ರಾಚಾರ್ಯ ಎಚ್.ಪಿ. ರಮೇಶ ಅಧ್ಯಕ್ಷತೆ ವಹಿಸಿದ್ದರು. ಯುವ ಕವಿಗೋಷ್ಠಿಯಲ್ಲಿ ಹೆಚ್ಚಿನ ಯುವ ಕವಿಗಳು ಕವಿತೆ ವಾಚಿಸಿದರು. ದೇವೇಂದ್ರ ನಾಯ್ಕ, ಉಮನೂ ಸಲ್ಮಾ, ಎಸ್.ಆರ್. ವೀಣಾ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.