ಮೆಡಿಕಲ್ ವಿದ್ಯಾಭ್ಯಾಸಕ್ಕೆ ನೆರವಿನ ಹಸ್ತ
ಹಗರಿಬೊಮ್ಮನಹಳ್ಳಿ: ವೈದ್ಯಕೀಯ ವಿಭಾಗದ ಸಿಇಟಿಯಲ್ಲಿ ರಾಜ್ಯಕ್ಕೆ 1303ನೇ ರ್ಯಾಂಕ್ ಗಳಿಸಿದ ಹಗರಿಬೊಮ್ಮನಹಳ್ಳಿ ತಾಲೂಕಿನ ಬಾಚಿಗೊಂಡನಹಳ್ಳಿ ಗ್ರಾಮದ ಪ್ರತಿಭಾವಂತ ಬಡ ವಿದ್ಯಾರ್ಥಿನಿ ಕೆ. ಗಂಗಮ್ಮಳಿಗೆ ನೆರವಾಗಲು ರಾಜ್ಯದ ವಿವಿಧೆಡೆಯಿಂದ ಹಲವರು ಮುಂದಾಗಿದ್ದಾರೆ.
'ಬಡ ವಿದ್ಯಾರ್ಥಿನಿಯ ವೈದ್ಯಳಾಗುವ ಕನಸಿಗೆ ನೀವು ನೆರವಾಗಿ' ಎಂಬ ಶಿರ್ಷಿಕೆಯಲ್ಲಿ ಜೂ. 4ರಂದು 'ಕನ್ನಡಪ್ರಭ' ಪ್ರಕಟಿಸಿದ ವಿಶೇಷ ವರದಿಗೆ ರಾಜ್ಯದ ವಿವಿಧೆಡೆಯಿಂದ ಉತ್ತಮ ಸ್ಪಂದನೆ, ಬೆಂಬಲ ವ್ಯಕ್ತವಾಗಿದ್ದು, ಹಲವರು ನೆರವಿನ ಹಸ್ತ ಚಾಚಿದ್ದಾರೆ. ಪತ್ರಿಕೆಯಲ್ಲಿ ಬಂದ ವರದಿ ಓದಿರುವ ಬೆಂಗಳೂರಿನ ಪ್ರಸನ್ನ ಗಣಪತಿ, ಬೆಳಗಾವಿಯ ಡಾ.ಕೆ. ಸತೀಶ್, ಮೈಸೂರಿನ ಚಂದ್ರಶೇಖರ್, ಗೋಕಾಕ್ನ ಸಂತೋಷ್, ಹಿರೆಕೆರೂರಿನ ಬಣಕಾರ, ಭಟ್ಕಳದ ನಫ್ರಿನ್ ಖಾಜ್, ಬೆಂಗಳೂರಿನ ಯೂಮು, ಬೆಂಗಳೂರಿನ ಸಹನಾ ಸೇವಾ ಸಂಸ್ಥೆಯ ಸಂಜಯ್, ಚಿಕ್ಕಮಗಳೂರಿನ ಪುಟ್ಟಮಹಾದೇವಗೌಡ, ನಾಗಮಂಗಲದ ಬನ್ನಿಗೌಡ, ಚಿಕ್ಕೊಡಿ ಗಡಿಭಾಗದ ಉಗರಖುರ್ದ್ ಗ್ರಾಮದ ಜಿ.ಬಿ. ಕುಲಕರ್ಣಿ, ನೆಲಮಂಗಲದ ರಾಮಾಂಜನೇಯ, ಬಾಲಕೋಟೆಯ ಸುರೇಶ್ಬಾಬು, ಚಿತ್ತಾಪುರದ ಬಸಪ್ಪ, ದಾವಣಗೆರೆಯ ಅಜಯ್ ಸೇರಿದಂತೆ ಹಲವರು ಗಂಗಮ್ಮಳ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ನಗದು ರೂಪದಲ್ಲಿ, ಪುಸ್ತಕಗಳನ್ನು ನೀಡುವ ಮೂಲಕ ಹಾಗೂ ಆಕೆಯ 5 ವರ್ಷದ ವೈದ್ಯಕೀಯ ಕೋರ್ಸ್ಗೆ ನೆರವಾಗುವ ಭರವಸೆ ನೀಡಿದ್ದಾರೆ.
ಜತೆಗೆ ಹೆಸರು ಬಹಿರಂಗ ಪಡಿಸಲು ಇಚ್ಚಿಸದವರು ಗಂಗಮ್ಮಳ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವುದಾಗಿ ವಾಗ್ದಾನ ಮಾಡಿದ್ದಾರೆ.
ಮನೆಯಲ್ಲಿನ ಬಡತನ ನನ್ನ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿತ್ತು. ಆದರೆ, ನನ್ನ ಪಡಿಪಾಟಲನ್ನು ಕಂಡು ಉನ್ನತ ಶಿಕ್ಷಣಕ್ಕೆ ನೆರವಾಗುವ ರೀತಿಯಲ್ಲಿ ವರದಿ ಪ್ರಕಟಿಸುವ ಮೂಲಕ ನನಗೆ ಅನುಕೂಲ ಮಾಡಿಕೊಟ್ಟಿರುವ 'ಕನ್ನಡಪ್ರಭ'ಕ್ಕೆ ಅಭಿನಂದಿಸುತ್ತೇನೆ ಎಂದು ಗಂಗಮ್ಮ ಸಂತಸ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

