ಬಳ್ಳಾರಿ

ಕನ್ನಡ ಅಧ್ಯಾಪಕರ ಒಕ್ಕೂಟ ಅಸ್ತಿತ್ವಕ್ಕೆ

Published On :

ಬಳ್ಳಾರಿ: ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಒಕ್ಕೂಟವು ಅಸ್ತಿತ್ವಕ್ಕೆ ಬಂದಿದ್ದು, ಒಕ್ಕೂಟದ ನೂತನ ಅಧ್ಯಕ್ಷರಾಗಿ ವೀರಶೈವ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಡಾ. ಬಿ.ಆರ್. ಮಂಜುನಾಥ್ ಆಯ್ಕೆಯಾಗಿದ್ದಾರೆ. ಗುರವಾರ ಕನ್ನಡ ಸಹ ಪ್ರಾಧ್ಯಾಪಕ ಪ್ರೊ.ಕೆ.ಮಹಾಬಲೇಶ್ವರ ರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಕ್ಕೂಟದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಒಕ್ಕೂಟದ ಅಧ್ಯಕ್ಷರಾಗಿ ಡಾ. ಬಿ.ಆರ್. ಮಂಜುನಾಥ್, ಗೌರವಾಧ್ಯಕ್ಷರಾಗಿ ಪ್ರೊ. ವರಕುಮಾರಗೌಡ, ಉಪಾಧ್ಯಕ್ಷರಾಗಿ ಗಾಯತ್ರಿ ಭಾವಿಕಟ್ಟಿ, ಕಾರ್ಯದರ್ಶಿಯಾಗಿ ಸಿ.ದೇವಣ್ಣ, ಸಹಕಾರ್ಯದರ್ಶಿಯಾಗಿ ಡಾ. ಮಮ್ತಾಜ್ ಬೇಗಂ, ಖಜಾಂಚಿಯಾಗಿ ಎಂ. ಸೋಮಶೇಖರ್, ಗೌರವ ಸಲಹೆಗಾರರಾಗಿ ಪ್ರೊ. ಕೆ. ಮಹಾಬಲೇಶ್ವರ್, ಗಂಗಾವತಿ ಪ್ರತಿನಿಧಿಯಾಗಿ ಡಾ. ಜಾಜಿದೇವೇಂದ್ರಪ್ಪ, ಹೊಸಪೇಟೆ ಪ್ರತಿನಿಧಿಯಾಗಿ ಡಾ. ಕನಕೇಶಮೂರ್ತಿ, ಹೂವಿನಹಡಗಲಿ ಪ್ರತಿನಿಧಿಯಾಗಿ ಎಚ್. ಬಸವರಾಜ, ಕೂಡ್ಲಿಗಿ ಪ್ರತಿನಿಧಿಯಾಗಿ ಡಾ. ಶಿವಕುಮಾರ ಕಂಪ್ಲಿ, ಸಂಡೂರಿನ ಪ್ರತಿನಿಧಿಯಾಗಿ ಡಾ. ವೆಂಕಟೇಶ್, ಸಿರುಗುಪ್ಪ ಪ್ರತಿನಿಧಿಯಾಗಿ ಚೇತನಕುಮಾರ್, ಕೊಪ್ಪಳ ಪ್ರತಿನಿಧಿಯಾಗಿ ಡಾ. ಹುಲಿಗೆಮ್ಮ ಮತ್ತು ಅತಿಥಿ ಉಪನ್ಯಾಸಕರ ಪ್ರತಿನಿಧಿಯಾಗಿ ಡಾ. ಕೆ. ಬಸಪ್ಪ, ಡಾ. ಜೆ. ವಿಜಯಲಕ್ಷ್ಮಿ ಅವರನ್ನು ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷ ಡಾ. ಬಿ.ಆರ್.  ಮಂಜುನಾಥ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತರಬೇತಿಗೆ ಅರ್ಜಿ
ಬಳ್ಳಾರಿ:
ಬಳ್ಳಾರಿಯ ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯು ನಿರುದ್ಯೋಗಿ ಯುವಕ, ಯುವತಿಯರಿಗಾಗಿ ಕಂಪ್ಯೂಟರ್ ಟ್ಯಾಲಿ ಉಚಿತ ತರಬೇತಿಗೆ ಅರ್ಜಿ ಆಹ್ವಾನಿಸಿದೆ. ಬಳ್ಳಾರಿ ನಗರ ಹಾಗೂ ಗ್ರಾಮೀಣ ಪ್ರದೇಶದ 18ರಿಂದ 45 ವಯೋವುತಿಯೊಳಗೆ ಇರಬೇಕು. ತರಬೇತಿ 30 ದಿನಗಳಾಗಿದ್ದು, ಜು ಲೈ ಮೊದಲನೇ ವಾರ ಪ್ರಾರಂಭ. ಊಟ ವಸತಿಯೊಂದಿಗೆ ತರಬೇತಿ ಸಂಪೂರ್ಣ ಉಚಿತವಾಗಿದೆ. ವಾಣಿಜ್ಯಶಾಸ್ತ್ರದಲ್ಲಿ ಪಿಯುಸಿ ಓದಿರುವವರಿಗೆ ಆದ್ಯತೆ. ಆಸಕ್ತರು ಮಾಹಿತಿಯೊಂದಿಗೆ ಬಿಳಿ ಹಾಳೆ ಮೇಲೆ ಅರ್ಜಿ ಬರೆದು ಪಾಸ್‌ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ, 10ನೇ ತರಗತಿಯ ಅಂಕಪಟ್ಟಿಯ ನಕಲು ಪ್ರತಿ ಲಗತ್ತಿಸಿ ಜೂ.30ರೊಳಗೆ ನಿರ್ದೇಶಕರು, ಸಿಂಡ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಡಿ.ಐ.ಸಿ ಕಾಂಪೌಂಡ್,  ಹೊಸಪೇಟೆ ರಸ್ತೆ, ಬಳ್ಳಾರಿ ಇವರಿಗೆ ಕಳುಹಿಸಿಕೊಡಬಹುದಾಗಿದೆ. ಮಾಹಿತಿಗಾಗಿ ದೂ: 08392-244117ಗೆ ಸಂಪರ್ಕಿಸಿರಿ.

ಇಂದು ಪುಸ್ತಕ ಬಿಡುಗಡೆ
ಹಗರಿಬೊಮ್ಮನಹಳ್ಳಿ:
ನಿವೃತ್ತ ಕೆಇಬಿ ಮುಖ್ಯ ಅಭಿಯಂತ ದಿ. ಬಿಷ್ಟಪ್ಪ ಸಾಲುಮನಿ ಅವರ ಜೀವನ ಮತ್ತು ಸಾಧನೆ ಕುರಿತಂತೆ ಸಾಹಿತಿ ಡಿ. ರಾಮನಮಲಿ ತಂಬ್ರಹಳ್ಳಿ ಬರೆದಿರುವ ಪುಸ್ತಕವನ್ನು  ಜೂ. 10ರಂದು ಬೆಳಗ್ಗೆ 11ಕ್ಕೆ ತಾಲೂಕಿನ ತಂಬ್ರಹಳ್ಳಿಯ ಕೆಪಿಜೆ ಪ್ರೌಢಶಾಲೆಯಲ್ಲಿ ಸಾಹಿತಿ ಕುಂ. ವೀರಭದ್ರಪ್ಪ ಲೋಕಾರ್ಪಣೆ ಮಾಡಲಿದ್ದಾರೆ. ಬೆಂಗಳೂರಿನ ಭಾಷಾಂತರ ನಿರ್ದೇಶನಾಲಯದ ಉಪನಿರ್ದೇಶಕ ಈರಪ್ಪ ಎಂ. ಕಂಬಳಿ ಪುಸ್ತಕ ಪರಿಚಯ ಮಾಡಿಕೊಡಲಿದ್ದಾರೆ. ನಂದಿಪುರದ ಮಹೇಶ್ವರಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ಸಾಹಿತಿ ಹುರಕಡ್ಲಿ ಶಿವಕುಮಾರ ಅಧ್ಯಕ್ಷತೆ ವಹಿಸುವರು. ಎ.ಎಂ.ಆರ್. ಕೊಟ್ರಯ್ಯ, ಅಕ್ಕಿಕೊಟ್ರಪ್ಪ, ಎಚ್.ಬಿ. ನಾಗನಗೌಡ, ಎಸ್. ದೇವಿಪ್ರಸಾದ್ ಭಾಗವಹಿಸಲಿದ್ದಾರೆ ಎಂದು ಸಾಹಿತಿ ಡಿ. ರಾಮನಮಲಿ ತಂಬ್ರಹಳ್ಳಿ ತಿಳಿಸಿದ್ದಾರೆ.

ತರಬೇತಿ ಕಾರ್ಯಾಗಾರ
ಕೊಟ್ಟೂರು:
ಪಟ್ಟಣದ ಕ್ರಿಯೇಟಿವ್ ಲೇಡೀಸ್ ಅಸೋಸಿಯೇಷನ್‌ನವರು ಇಲ್ಲಿನ ಭಾಗೀರಥಿ ಮರುಳಸಿದ್ಧನಗೌಡ ಕಾಲೇಜಿನಲ್ಲಿ ಆಯೋಜಿಸಿದ್ದ ಯಲಬುರ್ಗಾದ ಅಮರಜ್ಯೋತಿ ಸಂಸ್ಥೆಯ ಮಹಿಳಾ ವಿಶೇಷ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ ಇತ್ತೀಚೆಗೆ ನಡೆಯಿತು. ಕೊಟ್ಟೂರೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಕುಸುಮಾ ಸಜ್ಜನ್, ಸಂಚಾಲಕ ಶರಣಪ್ಪ, ಲೇಡಿಸ್ ಕ್ರಿಯೇಟಿವ್ ಕಾರ್ಯದರ್ಶಿ ನಿರ್ಮಲಾ ಶಿವನಗುತ್ತಿ ಮಾತನಾಡಿದರು. ಅಧ್ಯಕ್ಷೆ ಎಂ. ಸುನಂದಾ ಗುರುಬಸವರಾಜ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಟೈಲರಿಂಗ್‌ನ ಸಾವಿತ್ರಿ, ಸದಸ್ಯರಾದ ಸುಧಾ ಪಂಡಿತಾರಾಧ್ಯ, ಅರುಣ ಕೊಟ್ರೇಶ್ ಇದ್ದರು.

ಆಯತಪ್ಪಿ ಬಿದ್ದು ಮಹಿಳೆ ಸಾವು
ಬಳ್ಳಾರಿ:
ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗ ಆಯ ತಪ್ಪಿಬಿದ್ದು ಮಹಿಳೆಯೋರ್ವಳು ಮೃತ ಪಟ್ಟಿರುವ ಘಟನೆ ನಗರದ ಕೋಟೆ ಮಲ್ಲೇಶ್ವರಸ್ವಾಮಿ ಮುಂದಿನ ರಸ್ತೆಯಲ್ಲಿ ನಡೆದಿದೆ. ಮೃತಳನ್ನು ಬಳ್ಳಾರಿಯ ಶಿರೋಮಣಿ (50) ಎಂದು ಗುರುತಿಸಲಾಗಿದೆ. ಶನಿವಾರ ಸಂಜೆ ಪ್ರಕಾಶ್ ಮತ್ತು ಶಿರೋಮಣಿ ದಂಪತಿ ದ್ವಿಚಕ್ರವಾಹನದಲ್ಲಿ ಹೋಗುತ್ತಿರುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಶಿರೋಮಣಿ ಅವರ ತಲೆಗೆ ಪೆಟ್ಟಾಗಿತ್ತು. ವಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗಿಲ್ಲ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.