ಡೆಂಘೀ ಪತ್ತೆ: ಗ್ರಾಮದಲ್ಲಿ ವೈದ್ಯಕೀಯ ಸೇವೆ
ಹಗರಿಬೊಮ್ಮನಹಳ್ಳಿ: ಡೆಂಘೀ ಸೋಂಕು ಕಾಣಿಸಿಕೊಂಡಿರುವ ಹಗರಿಬೊಮ್ಮನಹಳ್ಳಿ ತಾಲೂಕು ಕಾತ್ಯಾಯನಿಮರಡಿ ಗ್ರಾಮದಲ್ಲಿ ಒಂದು ವಾರ ವೈದ್ಯಕೀಯ ಸೇವೆ ಸೌಲಭ್ಯದ ಕ್ಯಾಂಪ್ ಹಾಕಲು ತಾಲೂಕು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ ಎಂದು ತಾಪಂ ಇಓ ಜೆ. ಗೋಪ್ಯಾನಾಯ್ಕ್ ತಿಳಿಸಿದರು.
ಗ್ರಾಮದಲ್ಲಿ ಸ್ವಚ್ಚತೆ ಕಾಪಾಡಲು ತಕ್ಷಣವೇ ಸೂಕ್ತಕ್ರಮ ವಹಿಸುವಂತೆ ಕಡ್ಲಬಾಳು ಗ್ರಾಮ ಪಂಚಾಯಿತಿ ಪಿಡಿಓಗೆ ಈಗಾಗಲೆ ಆದೇಶಿಸಲಾಗಿದೆ ಎಂದು ಅವರು ಭಾನುವಾರ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. ಕಾತ್ಯಾಯಿನಿಮರಡಿ ಗ್ರಾಮದಲ್ಲಿ ಡೆಂಘೀ ಸೊಂಕು ಪತ್ತೆಯಾಗಿರುವ ಬಗ್ಗೆ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಿಂದ ತಿಳಿದಿದೆ. ಭಾನುವಾರದಿಂದಲೇ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಣಕ್ಕೆ ಸಂಭಂದಿಸಿದಂತೆ ಮುಂಜಾಗ್ರತಾ ಕ್ರಮ ವಹಿಸುವಂತೆ ಗ್ರಾಮಪಂಚಾಯಿತಿಗೆ ಸೂಚಿಸಿದ್ದೇನೆ. ರೋಗ ನಿಯಂತ್ರಣಕ್ಕೆ ಸಂಭಂದಿಸಿದಂತೆ ಜಿಲ್ಲಾ ಆರೋಗ್ಯ ಇಲಾಖೆ ಗಮನಕ್ಕೂ ತರಲಾಗಿದೆ ಎಂದರು.
ತಾಲೂಕಾದ್ಯಂತ ಡೆಂಘೀ ನಿಯಂತ್ರಣಕ್ಕೆ ಸಂಭಂದಿಸಿದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ಈಗಾಗಲೆ ಕೈಗೊಳ್ಳಲಾಗಿದೆ. ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸೊಳ್ಳೆ ನಿರ್ಮೂಲನೆಗೆ ಸಾರ್ವಜನಿಕರು ಪಂಚಾಯಿತಿ ಸಿಬ್ಬಂದಿ ಜತೆಗೆ ಸಹಕರಿಸುವಂತೆ ಹಾಗೂ ಮನೆಯ ಬಚ್ಚಲಿನ ನೀರು ಮತ್ತು ಚರಂಡಿ ನೀರು ರಸ್ತೆ ಮೇಲೆ ಬಹುಕಾಲ ನಿಲ್ಲದಂತೆ ಎಚ್ಚರ ವಹಿಸಬೇಕು. ಮನೆಗಳ ಸುತ್ತಮುತ್ತ ನೈರ್ಮಲ್ಯ ಕಾಪಾಡಿಕೊಳ್ಳುವ ಮೂಲಕ ಸೊಳ್ಳೆಗಳನ್ನು ನಿಯಂತ್ರಿಸಲು ಎಲ್ಲರು ಸಹಕರಿಸುವಂತೆ ತಾಲೂಕಿನ ಜನತೆಯಲ್ಲಿ ಗೋಪ್ಯಾನಾಯ್ಕ್ ಮನವಿ ಮಾಡಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

