ಮಕ್ಕಳಿಗೆ ಪೆಂಟವಲೆಂಟ್ ಲಸಿಕೆ ಹಾಕಿಸಿ
ಹೂವಿನಹಡಗಲಿ: ಮಕ್ಕಳನ್ನು ಐದು ಮಾರಕ ರೋಗಗಳಿಂದ ಮುಕ್ತವಾಗಿಡಲು ಪೆಂಟವಲೆಂಟ್ ಲಸಿಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಾಗಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಪಿ. ಬದ್ಯಾನಾಯ್ಕ ತಿಳಿಸಿದರು. ಮಕ್ಕಳಲ್ಲಿ ಕಂಡು ಬರುವ ಗಂಟಲುಮಾರಿ, ನಾಯಿ ಕೆಮ್ಮು, ಧನುರ್ವಾಯು, ಕಾಮಾಲೆ ಹಾಗೂ ಜ್ವರದಲ್ಲಿ ರಕ್ತಸ್ರಾವದಂತಹ ಮಾರಕ ರೋಗಗಳಿಗೆ ಡಿಪಿಟಿ, ಹೆಪಟೈಟಸ್-ಬಿ ಲಸಿಕೆಯನ್ನು ಪ್ರತ್ಯೇಕವಾಗಿ ನೀಡಲಾಗುತಿತ್ತು. ಆದರೆ ಈಗ ಹೊಸದಾಗಿ ಕಂಡುಹಿಡಿಯಲಾಗಿರುವ ಪೆಂಟವಲೆಂಟ್ ಚುಚ್ಚುಮದ್ದನ್ನು ಹುಟ್ಟಿದ 45 ದಿನ, 75 ದಿನ ಹಾಗೂ 105 ದಿನಗಳಲ್ಲಿ 3 ಡೋಸ್ಗಳಂತೆ ನೀಡಿದರೆ ಐದು ಮಾರಕ ರೋಗಗಳನ್ನು ತಡೆಯಬಹುದಾಗಿದೆ ಎಂದರು.
ಮಗುವೊಂದಕ್ಕೆ ಪೆಂಟವಲೆಂಟ್ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಾರ್ವಜನಿಕ ಆಸ್ಪತ್ರೆ ಮುಖ್ಯವೈದ್ಯಾಧಿಕಾರಿ ಡಾ.ಬಿ. ಶಿವಕುಮಾರ್ ಮಾತನಾಡಿ, ಖಾಸಗಿಯಾಗಿ ಅತ್ಯಂತ ದುಬಾರಿಯಾಗಿರುವ ಲಸಿಕೆಗಳು ತಾಲೂಕಿನ ಎಲ್ಲ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಲಭ್ಯವಿದ್ದು, ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮೇಲ್ವಿಚಾರಕಿ ಸಿ.ಸಿ. ಪ್ರೇಮಾ, ಕ್ಷೇತ್ರ ಕಾರ್ಯಕ್ರಮ ವ್ಯವಸ್ಥಾಪಕ ಬಿ.ಈ. ಮಹೇಶ್ಕುಮಾರ್, ಆರೋಗ್ಯ ನಿರೀಕ್ಷಕ ವಿ. ಸಿದ್ದಪ್ಪ ಮುಂತಾದವರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

