ಬಳ್ಳಾರಿ

ರೈತರ ಬಗ್ಗೆ ಸರ್ಕಾರ ಚಿಂತಿಸಬೇಕಿದೆ

Published On :

ಬಳ್ಳಾರಿ: ಸರ್ಕಾರಗಳು ರೈತಾಪಿ ವರ್ಗದವರು ಆರ್ಥಿಕ ಸಬಲರಾಗುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕು ಎಂದು ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಇಸ್ಮಾಯಿಲ್ ಎಂ. ಮಕಾಂದರ್ ತಿಳಿಸಿದ್ದಾರೆ.
ನಗರದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಘಟಕದ ವತಿಯಿಂದ ತಾಲೂಕಿನ ಎತ್ತಿನಬೂದಿಹಾಳ್ ಗ್ರಾಮದಲ್ಲಿ ಏರ್ಪಡಿಸಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ಅವರು ಮಾತನಾಡಿದರು.
ಅರ್ಥಶಾಸ್ತ್ರ ಉಪನ್ಯಾಸಕ ಎನ್. ಬಸವರಾಜ ಮಾತನಾಡಿದರು. ಉಪನ್ಯಾಸಕರಾದ ಸಿ.ಎಂ. ಪ್ರಕಾಶ್, ನಾಗೇಂದ್ರಪ್ಪ, ಕಾವಲಯ್ಯ, ಮೌನೇಶ, ಡಾ. ಹೊನ್ನೂರಾಲಿ ನಾಗೇಶರಾವ್, ರುದ್ರಯ್ಯ, ಮಧುಸೂದನ ರೆಡ್ಡಿ, ಖಾಸಿಂ ಸಾಬ್, ರಾಮಣ್ಣ, ಪಂಪನಗೌಡ, ಶಶಿಕಾಂತ, ಎನ್‌ಎಸ್‌ಎಸ್ ಅಧಿಕಾರಿ ಜಿ. ಕೊಟ್ರಪ್ಪ ಇದ್ದರು. ಲಕ್ಷ್ಮಿ ಮತ್ತು ತಂಡದವರು ಪ್ರಾರ್ಥಿಸಿದರು. ರೂಪಾ ಮತ್ತು ತಂಡದವರು ಗೀತೆ ಗಾಯನ ಮಾಡಿದರು. ಜಿ. ಶೇಖರ್ ಸ್ವಾಗತಿಸಿದರು. ಹುಲುಗಪ್ಪನಿರೂಪಿಸಿದರು. ಉಪನ್ಯಾಸಕ ವೈ. ಜನಾರ್ದನ ರೆಡ್ಡಿ ವಂದಿಸಿದರು.
---
ಅಲ್ಲಂ ಸುಮಂಗಳಮ್ಮ ಕಾಲೇಜಿನ ವಾರ್ಷಿಕ ಕ್ರೀಡಾಕೂಟ
ಬಳ್ಳಾರಿ: ನಗರದ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟವನ್ನು ಕಾಲೇಜಿನ ಮೈದಾನದಲ್ಲಿ ಏರ್ಪಡಿಸಲಾಗಿತ್ತು. ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷೆ ಕಾತ್ಯಾಯಿನಿ ಮರಿದೇವ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.  ಕಾಲೇಜು ಪ್ರಾಚಾರ್ಯ ಡಾ. ತೇಜಸ್‌ಮೂರ್ತಿ, ವೈ.ಎಸ್. ಕುಡಪಾಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.