ಬಡವರಿಗೆ ಉಚಿತ ಪಡಿತರ: ಶ್ರೀರಾಮುಲು ಭರವಸೆ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಮಾ. 3
ಬಡವರ, ಶ್ರಮಿಕರ, ರೈತರ ಹೆಸರಿನಲ್ಲಿ ಹುಟ್ಟಿಕೊಂಡಿರುವ ಬಿಎಸ್ಸಾರ್ ಕಾಂಗ್ರೆಸ್ ಪಕ್ಷಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಶೀರ್ವದಿಸಿದರೆ ರಾಜ್ಯದ ಬಡವರಿಗೆ ಉಚಿತ ಪಡಿತರ ಆಹಾರ ಧಾನ್ಯ ವಿತರಣೆ, ಗುಡಿಸಲು ವಾಸಿಗಳಿಗೆ ಆರ್ಸಿಸಿ ಮನೆ, ಪುರಸಭೆಗೆ ರು. 50 ಕೋಟಿ ಅನುದಾನ ನೀಡುವ ಭರವಸೆಯನ್ನು ಬಿಎಸ್ಸಾರ್ ಕಾಂಗ್ರೆಸ್ ಸಂಸ್ಥಾಪಕ ಬಿ. ಶ್ರೀರಾಮುಲು ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಪುರಸಭೆ ಚುನಾವಣೆ ನಿಮಿತ್ತ ಭಾನುವಾರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ನಡೆಸಿ ಮಾತನಾಡುತ್ತಾ, ತಮ್ಮ ಪಕ್ಷದಿಂದ ಸಾಕಷ್ಟು ಬಡವರ ಪರವಾಗಿ ಯೋಜನೆಗಳನ್ನು ರೂಪಿಸಿ ಪ್ರಣಾಳಿಕೆಯಲ್ಲಿ ಪದವೀಧರರಿಗೆ ನೌಕರಿ ನೀಡಲು ಈ ಭಾಗದಲ್ಲಿ ಕಾರ್ಖಾನೆಯೊಂದನ್ನು ಸ್ಥಾಪನೆ ಮಾಡುತ್ತೇವೆ, ನಂತರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿ ಪದವೀಧರರಿಗೂ ರು. 5 ಸಾವಿರ ಗೌರವಧನ ನೀಡುತ್ತೇವೆಂದು ಹೇಳಿದರು.
ಇಡೀ ರಾಜ್ಯದ ಗಮನ ಬಳ್ಳಾರಿಗೆ ಕಡೆಗೆ ನೆಟ್ಟಿದ್ದು, ಬಿಎಸ್ಸಾರ್ ಕಾಂಗ್ರೆಸ್ ಪಕ್ಷ ಬಳ್ಳಾರಿ ಜಿಲ್ಲೆಯದ್ದು ಎಂದು ಎಲ್ಲರೂ ಹೆಮ್ಮಯಿಂದ ಹೇಳಿಕೊಳ್ಳುವಂತಾಗಬೇಕು. ಆದರಿಂದ ಮತದಾರ ಬಂಧುಗಳು ಫ್ಯಾನ್ ಗುರ್ತಿಗೆ ಮತ ನೀಡಿ ಹೆಚ್ಚಿನ ಬಹುಮತದಿಂದ ಜಯಗಳಿಸಲು ಮಲ್ಲಿಗೆ ನಾಡು ಕಾರಣವಾಗಬೇಕೆಂದು ಹೇಳಿದರು.
ಅಭಿವೃದ್ಧಿವಿರೋಧಿ: ಸಂಸದೆ ಜೆ. ಶಾಂತಾ ಮಾತನಾಡಿ, ಈ ಹಿಂದೆ ತಾಲೂಕಿನ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದರೂ ಈ ಭಾಗದ ಶಾಸಕರ ಸರಿಯಾಗಿ ಸ್ಪಂದನೆ ಇಲ್ಲದ ಕಾರಣ ಅಭಿವೃದ್ಧಿ ವಿರೋಧಿಯಾಗಿದ್ದಾರೆ. ಬಡವರಿಗೆ ಬಂದಿದ್ದ ಮನೆಗಳನ್ನು ತಮ್ಮ ಕಾರ್ಯಕರ್ತರಿಗೆ, ಸಂಬಂಧಿಕರಿಗೆ ನೀಡಿ ಬಡವರನ್ನು ಬೀದಿ ಪಾಲು ಮಾಡಿದ್ದಾರೆಂದು ದೂರುತ್ತಾ, ಬಿಎಸ್ಸಾರ್ ಕಾಂಗ್ರೆಸ್ ಪಕ್ಷಕ್ಕೆ ಮನ್ನಣೆ ನೀಡಿ ಹೂವಿನಹಡಗಲಿ ಪುರಸಭೆ ಚಿತ್ರಣ ಬದಲಾವಣೆಗೆ ಶ್ರಮಿಸೋಣ ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ಬಿಜೆಪಿ ಘಟಕಾಧ್ಯಕ್ಷ ಮಹೇಂದ್ರ ಜ್ಯೋತಿ, ಹೇಮಂತಕುಮಾರ ಭಾರತಿ ಸೇರಿದಂತೆ ಹಲವರು ಶ್ರೀರಾಮುಲು ನೇತೃತ್ವದಲ್ಲಿ ಬಿಎಸ್ಸಾರ್ ಸೇರ್ಪಡೆಯಾದರು. ವಿಧಾನಪರಿಷತ್ ಸದಸ್ಯ ಮೃತ್ಯುಂಜಯ ಜಿನಾಗ, ರಾಜ್ಯ ಉಪಾಧ್ಯಕ್ಷ ಶಿರಾಜ್ ಶೇಖ್, ಶಿವಪ್ಪ ನಾಯ್ಕ, ಎಂಜಿನಿಯರ್ ಕುಬೇಂದ್ರನಾಯ್ಕ, ಕೊಟ್ರೇಶ ನಾಯ್ಕ, ಮಾರೆಪ್ಪ, ಮೀರಾಬಾಯಿ ಸೇರಿದಂತೆ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

