ಮತದಾನದಿಂದ ದೂರವುಳಿದ ಆನಂದ್ ಸಿಂಗ್, ಗವಿಯಪ್ಪ
ಹೊಸಪೇಟೆ: ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಆನಂದ ಸಿಂಗ್ ತಿರುಪತಿ ಯಾತ್ರೆಗೆ ತೆರಳಿದ್ದರಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತ ಚಲಾಯಿಸಿಲ್ಲ. ಮಾಜಿ ಶಾಸಕ ಎಚ್.ಆರ್. ಗವಿಯಪ್ಪ ಅವರೂ ಮತಗಟ್ಟೆಗೆ ಆಗಮಿಸಲಿಲ್ಲ.
ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ನಿಂದ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿರುವ ಹಿನ್ನೆಲೆಯಲ್ಲಿ ಆನಂದ ಸಿಂಗ್ ಈ ಬಾರಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿಲ್ಲ ಎಂದು ಅನೇಕರು ಆಡಿಕೊಳ್ಳುತ್ತಿದ್ದಾರೆ. ಆನಂದ ಸಿಂಗ್ ಪ್ರತಿ ವರ್ಷ ಬೆಂಗಳೂರಿನಿಂದ ಪಾದಯಾತ್ರೆಯಲ್ಲಿ ತಿರುಪತಿಗೆ ಹೋಗುತ್ತಾರೆ. ಈ ಬಾರಿಯೂ ವಾಡಿಕೆಯಂತೆ ತೆರಳಿದ್ದಾರೆ ಎಂದು ಅವರ ಆಪ್ತರು ಹೇಳುತ್ತಿದ್ದಾರೆ.
ಆನಂದ ಸಿಂಗ್ ಸಕ್ರಿಯರಾಗಿ ಪಾಲ್ಗೊಳ್ಳದ ಕಾರಣ ಮಾಜಿ ಶಾಸಕ ದಿ. ಶಂಕರಗೌಡ್ರ ಪುತ್ರ ಜಿ. ಭರಮಲಿಂಗನಗೌಡ ಬಿಜೆಪಿ ಜವಾಬ್ದಾರಿ ಹೊತ್ತಿದ್ದರು. ಹೊಸಪೇಟೆಯ 34 ವಾರ್ಡ್ಗಳ ಪೈಕಿ 19ರಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಕಾಂಗ್ರೆಸ್ ಎಲ್ಲ ವಾರ್ಡ್ಗಳಲ್ಲಿ ಕಣಕ್ಕಿಳಿದಿತ್ತು. ಎಚ್.ಆರ್. ಗವಿಯಪ್ಪ ದೂರ ಉಳಿದಿದ್ದರಿಂದ ದೀಪಕ್ಕುಮಾರ್ ಸಿಂಗ್ ಹಾಗೂ ಎಚ್.ಜಿ. ಗುರುದತ್ ಪಕ್ಷದ ಜವಾಬ್ದಾರಿ ವಹಿಸಿದ್ದರು. ಜೆಡಿಎಸ್ ಮುಖಂಡ ಕೆ. ಕೊಟ್ರೇಶ್ ಅವರೂ ಅಭ್ಯರ್ಥಿಯಾಗಿದ್ದರಿಂದ ಆ ಪಕ್ಷಕ್ಕೂ ಸಮರ್ಥ ನಾಯಕರು ಸಿಗದೆ ಪ್ರಚಾರದಲ್ಲಿ ಸೊರಗಿತ್ತು.
ಹೊಸಪೇಟೆ ನಗರಸಭೆ ಚುನಾವಣೆಯಲ್ಲಿ ಮೇಲ್ನೋಟಕ್ಕೆ ಕಾಂಗ್ರೆಸ್ ಮತ್ತು ಬಿಎಸ್ಸಾರ್ ಪಕ್ಷಗಳ ನಡುವೆ ನೇರ ಸ್ಪರ್ಧೆ ಕಾಣಿಸಿದೆ. ಕೆಲವೆಡೆ ಜೆಡಿಎಸ್ ಅಂತರ್ಗಾಮಿಯಂತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

