ಆಂಧ್ರಕ್ಕೆ 1.242 ಟಿಎಂಸಿ ನೀರು ಬಿಡುಗಡೆ
ಬಳ್ಳಾರಿ: ತುಂಗಭದ್ರಾ ಮಂಡಳಿ ಸೋಮವಾರ ತುಂಗಭದ್ರಾ ಜಲಾಶಯದಿಂದ 1.242 ಟಿಎಂಸಿ (3000 ಕ್ಯುಸೆಕ್) ನೀರನ್ನು ನದಿಗೆ ನೀರನ್ನು ಬಿಡುತ್ತಿದೆ. ರೇಲ್ವೆ ರಾಜ್ಯ ಸಚಿವ ಕೋಟ್ಲಾ ಸೂರ್ಯಪ್ರಕಾಶ ರೆಡ್ಡಿ ಕರ್ನೂಲ್ ಕ್ಷೇತ್ರದ ಸಂಸದರಾಗಿದ್ದು, ಆಂಧ್ರದ ಮಂತ್ರಾಲಯ, ಕರ್ನೂಲ್ ನಗರ, ಅದರ ಸುತ್ತಮುತ್ತಲ ನಗರ ಪಂಚಾಯತ್ ಮತ್ತು ಗ್ರಾಮಗಳಲ್ಲಿ ಕುಡಿಯವ ನೀರಿನ ತೀವ್ರ ಕೊರತೆ ಇದೆ. ಅವರ ಆದೇಶದ ಮೇರೆಗೆ ಆಂಧ್ರದ ನೀರಾವರಿ ಮತ್ತು ಸಿಎಡಿ ವಿಭಾಗದ ಮುಖ್ಯ ಅಭಿಯಂತರ ಮುರಳೀಧರ್ ಅವರು ತುಂಗಭದ್ರಾ ಮಂಡಳಿಗೆ ಮಾ. 15ರಂದು ಪತ್ರ ಬರೆದು (ಪತ್ರ ಸಂಖ್ಯೆ: ಇ.ಎನ್.ಸಿ (1) ಸಿಇ.ಐ/ಒ.ಟಿ.ಟಿ.ಬಿ.ಡಿ/ಎ.ಇ.ಇ.2/68219 ವಾಲಿಂ 11 ಅಡಿ) ನೀರು ಬಿಡುವಂತ ಕೋರಿದ್ದರು. ಆಂಧ್ರ ಪ್ರದೇಶದ ಕೋಟಾದಲ್ಲಿ ಕುಡಿಯುವ ನೀರಿಗಾಗಿ 9.734 ಟಿಎಂಸಿ, ಇದ್ದು ಅದರಲ್ಲಿ 8.492 ಟಿಎಂಸಿ ಉಪಯೋಗಿಸಿದೆ. ಬಾಕಿ 1.242 ಟಿಎಂಸಿ ನೀರನ್ನು ಕೇಸಿ ಕೆನಲ್ಗೆ ತುಂಗಭದ್ರಾ ನದಿಯ ಮೂಲಕ ಬಿಡುಗಡೆ ಮಾಡಲು ಮನವಿ ಮಾಡಿದ್ದಾರೆ. ಅದರನ್ವಯ ತುಂಗಭದ್ರಾ ಮಂಡಳಿ ಮಾ. 17ರಿಂದ 3000 ಕ್ಯುಸೆಕ್ ನೀರನ್ನು 4 ದಿನಗಳ ಕಾಲ ನದಿಗೆ ಹರಿಬಿಟ್ಟಿದೆ. ಮಾಜಿ ಸಂಸದ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ಅವರು ಕರ್ನೂಲ್ ಸಂಸದ ಕೋಟ್ಲಾ ಸೂರ್ಯ ಪ್ರಕಾಶ್ ರೆಡ್ಡಿ ಅವರನ್ನು ಅಭಿನಂದಿಸಿದ್ದಾರೆ. ಈ ನೀರು ಬಳ್ಳಾರಿ ಮತ್ತು ಸಿರುಗುಪ್ಪ ತಾಲೂಕುಗಳ ಮುಖಾಂತರ ಕರ್ನೂಲ್ ಜಿಲ್ಲೆ ಸೇರುವುದರಿಂದ ನದಿಯ ಎರಡೂ ಬದಿ ಗ್ರಾಮಸ್ಥರು ಈ ನೀರನ್ನು ಕುಡಿಯಲು ಬಳಸಬೇಕೆಂದು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

