ಅನಿಲ್ ಲಾಡ್ ಹೇಳಿಕೆ ಬೇಸರ ಮೂಡಿಸಿದೆ
ಬಳ್ಳಾರಿ: ಮಹಾನಗರ ಪಾಲಿಕೆಯ ಕಾಂಗ್ರೆಸ್ನ ಸದಸ್ಯರು ಕಾಂಗ್ರೆಸ್ಗೆ ಬೆಂಬಲ ನೀಡುತ್ತಿದ್ದೇವೆ. ಕಾಂಗ್ರೆಸ್ ಗೆಲವಿಗಾಗಿ ಶ್ರಮಿಸುತ್ತೇವೆ. ಆದರೆ, ಅನಿಲ್ ಲಾಡ್ ತಮ್ಮ ವಿರುದ್ಧ ಅಪನಂಬಿಕೆಯ ಹಾಗೂ ತಮ್ಮ ಪರವಾಗಿ ಪ್ರಚಾರ ಮಾಡುತ್ತಿಲ್ಲ ಎಂದು ಹೇಳಿಕೆ ನೀಡಿರುವುದು ಬೇಸರ ಮೂಡಿಸಿದೆ ಎಂದು ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ಕುಮಾರಸ್ವಾಮಿ ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷ ಗೆಲವು ಸಾಧಿಸುವ ನಿಟ್ಟಿನಲ್ಲಿ ಪಾಲಿಕೆಯ ಎಲ್ಲ ಸದಸ್ಯರು ಶ್ರಮಿಸುತ್ತಿದ್ದೇವೆ. ಪಕ್ಷವು ಗೆಲ್ಲಬೇಕೆಂಬ ಆಸೆ ತಮ್ಮೆಲ್ಲರದಾಗಿದೆ ಎಂದು ತಿಳಿಸಿದರು.
ಬಳ್ಳಾರಿ ನಗರ ಕ್ಷೇತ್ರದ ಅಭ್ಯರ್ಥಿ ಅನಿಲ್ಲಾಡ್ರ ಗೆಲವಿಗಾಗಿ ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಮಾಜಿ ಸಂಸದ ಕೆ.ಸಿ. ಕೊಂಡಯ್ಯ ಸೇರಿದಂತೆ ಎಲ್ಲರೂ ಪ್ರಚಾರ ಮಾಡುತ್ತಿದ್ದಾರೆ. ಪಕ್ಷದ ಪ್ರಚಾರಕ್ಕೆ ಸಂಬಂಧಿಸಿದಂತೆ ಯಾವೊಂದು ಜವಾಬ್ದಾರಿ ವಹಿಸದಿದ್ದರೂ, ಮಹಾನಗರ ಪಾಲಿಕೆಯ ಸದಸ್ಯರು ಸ್ವಹಿತಾಸಕ್ತಿಯಿಂದ ಪ್ರಚಾರ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಪಾಲಿಕೆಯ ಕಾಂಗ್ರೆಸ್ ಸದಸ್ಯರು ಜೆಡಿಎಸ್ ಪರ ಪ್ರಚಾರ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಾಲಿಕೆಯಲ್ಲಿ ಕಾಂಗ್ರೆಸ್ನಿಂದ ಮತ ಹಾಕಿಸಿಕೊಂಡು ಗೆದ್ದು, ಜೆಡಿಎಸ್ ಪರವಾಗಿ ಪ್ರಚಾರ ಮಾಡಿದರೆ, ಜನರು ಬಡಿಯುತ್ತಾರೆ. ಅನಿಲ್ಲಾಡ್ ಮುಂದೆ ಯಾವುದೇ ಬೇಡಿಕೆ ಇಲ್ಲದೆ ಸ್ವ ಇಚ್ಛೆಯಿಂದಲೇ ಅವರ ಪರವಾಗಿ ಪ್ರಚಾರ ಮಾಡುತ್ತಿದ್ದೇವೆ ಎಂದರು.
ಹೋಟೆಲೊಂದರಲ್ಲಿ ಪಾಲಿಕೆಯ ಸದಸ್ಯರ ಸಭೆ ಕರೆದು ಅನಿಲ್ ಲಾಡ್ ಅವರು ಕ್ಷಮೆ ಕೋರಿರುವುದು ಸತ್ಯ. ನಂತರದಲ್ಲಿ ನಾವುಗಳು ಅನಿಲ್ಲಾಡ್ ಪರವಾಗಿ ಪ್ರಚಾರ ಮಾಡಿದರೂ, ಅನಿಲ್ಲಾಡ್ ಪಾಲಿಕೆಯ ಸದಸ್ಯರು ತಮ್ಮ ಪರವಾಗಿ ಪ್ರಚಾರ ಮಾಡುತ್ತಿಲ್ಲ ಎಂದು ಹೇಳಿಕೆ ನೀಡಿರುವುದು ಬೇಸರ ಮೂಡಿಸಿದೆ. ಇದುವರೆಗೆ ಪೋಲಿಂಗ್ ಏಜೆಂಟ್ ಯಾರೆಂಬುದೇ ಹೇಳಿಲ್ಲ, ನಮ್ಮ ನಮ್ಮ ವಾರ್ಡ್ಗಳಲ್ಲಿ ನಾವೇ ಕಾಳಜಿಯಿಂದ ಪೋಲಿಂಗ್ ಏಜೆಂಟ್ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಪಾಲಿಕೆಯ ಸದಸ್ಯರು ಯಾವೊಂದು ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಗೆಲವಿಗಾಗಿ ಪಣತೊಟ್ಟಿದ್ದೇವೆ. ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದರು. ಅನಿಲ್ ಲಾಡ್ ವಿರುದ್ಧ ತಮಗೆ ಸಿಟ್ಟಿಲ್ಲ ಎಂದು ತಿಳಿಸಿದರು.
ಪಾಲಿಕೆಯ ಸದಸ್ಯರಾದ ಕೆ. ಅಶೋಕ್ಕುಮಾರ್, ಬಿ.ಕೆ. ಕೆರೆಕೋಡಪ್ಪ, ಮಹ್ಮದ್ ಸೇರಿದಂತೆ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

