ಈಗ ಪ್ರಾದೇಶಿಕ ಚಿತ್ರ ಪ್ರಶಸ್ತಿ: ಸಂತಸ
ಬಳ್ಳಾರಿ: ತೆಲುಗು ಸಿನಿಮಾ 'ಈಗ' ಚಿತ್ರಕ್ಕೆ ಉತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಹಾಗೂ ಸಿನಿಮಾದ ವಿಶೇಷ ಪರಿಣಾಮಗಳಿಗಾಗಿ (ಸ್ಪೆಷಲ್ ಎಫೆಕ್ಟ್ಸ್) ನಿರ್ಮಾಪಕರಿಗೆ ನೀಡುವ ಬಿ. ನಾಗಿರೆಡ್ಡಿ ರಾಷ್ಟ್ರೀಯ ಪ್ರಶಸ್ತಿ ದೊರೆತಿರುವುದು ತುಂಬಾ ಸಂತಸ ತಂದಿದೆ ಎಂದು ತೆಲುಗು ಚಲನಚಿತ್ರ ನಿರ್ಮಾಪಕ ಕರ್ರಪಾಟಿ ರಂಗನಾಥ ಸಾಯಿ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಕುಟುಂಬದಿಂದ ಬಂದ ನಾನು ಬಳ್ಳಾರಿ ಜಿಲ್ಲೆಯಲ್ಲೇ ಶಿಕ್ಷಣ ಪಡೆದು, ನಂತರ 1999ರಲ್ಲಿ ಚಲನಚಿತ್ರೋದ್ಯಮಕ್ಕೆ ಪ್ರವೇಶ ಮಾಡಿ, 2006ರಿಂದ ನಿರ್ಮಾಪಕನಾಗಿ ಕಾರ್ಯ ನಿರ್ವಹಿಸಲು ಆರಂಭಿಸಿದೆ. 'ಅಮ್ಮ ಚಪ್ಪಿಂದಿ' ನಾನು ನಿರ್ಮಿಸಿದ ಮೊದಲ ಸಿನಿಮಾಆಗಿದೆ ಎಂದರು.
ವಾರಾಹಿ ಚಲನಚಿತ್ರ ಬ್ಯಾನರ್ ಅಡಿಯಲ್ಲಿ ಮೊದಲು ನಿರ್ಮಾಣ ಮಾಡಿದ, ಖ್ಯಾತ ಸಿನಿಮಾ ನಿರ್ದೇಶಕ ರಾಜಮೌಳಿ ನಿರ್ದೇಶನದ, ಕನ್ನಡ ನಟ ಸುದೀಪ್ ಅಭಿನಯದ 'ಈಗ' ಮನೆಯವರೆಲ್ಲಾ ಕುಳಿತು ಒಟ್ಟಿಗೆ ನೋಡುವ ಸಿನಿಮಾ ಆಗಿದೆ. ಈ ಸಿನಿಮಾಕ್ಕೆ ಉತ್ತಮ ಪ್ರಾದೇಶಿಕ ಪ್ರಶಸ್ತಿ ಮತ್ತು ಸ್ಪೆಷಲ್ ಎಫೆಕ್ಟ್ಸ್ (ವಿಶೇಷ ಪರಿಣಾಮಗಳಿಗೆ)ಗೆ ನಿರ್ಮಾಪಕರಿಗಾಗಿ ಕೊಡಮಾಡುವ ಬಿ. ನಾಗಿರೆಡ್ಡಿ ರಾಷ್ಟ್ರೀಯ ಪ್ರಶಸ್ತಿ ಈ ಎರಡು ಪ್ರಶಸ್ತಿಗಳು ಲಭಿಸಿರುವುದು ತುಂಬಾ ಹೆಮ್ಮೆ ಎನಿಸುತ್ತದೆ. ಸಿನಿಮಾ ನಿರ್ಮಾಣಕ್ಕೆ ತಮಗೆ ಸಹಕರಿಸಿದ ಬಳ್ಳಾರಿ ಜಿಲ್ಲೆಯ ಜನತೆಗೆ, ಸ್ನೇಹಿತರಿಗೆ ಧನ್ಯವಾದಗಳನ್ನು ತಿಳಿಸಿದರು.
ರು. 30 ಕೋಟಿ ಬಜೆಟ್ನಲ್ಲಿ ನಿರ್ಮಾಣಗೊಂಡ 'ಈಗ' ಸಿನಿಮಾಕ್ಕೆ ಪ್ರಶಸ್ತಿ ಬರುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಆದರೆ ನಟ ಸುದೀಪ್ರಿಗೆ ಪ್ರಶಸ್ತಿ ಬರುವುದಾಗಿ ಭಾವಿಸಿದ್ದೆ, ಮುಂದೆ ಅವರಿಗೂ ಪ್ರಶಸ್ತಿ ಲಭಿಸಲಿದೆ ಎಂದ ಅವರು, ನಟ ಸುದೀಪ್ ಅಭಿನಯದಲ್ಲಿ ಕನ್ನಡ ಸಿನಿಮಾ ನಿರ್ಮಾಣ ಮಾಡಬೇಕೆಂಬ ಆಸೆಯಿದೆ. ಇಷ್ಟರಲ್ಲೇ ಕನ್ನಡಚಿತ್ರ ನಿರ್ಮಿಸುವುದಾಗಿ ಹೇಳಿದರು. ಹಾಗೆಯೇ ಮುಂದಿನ ಒಂದು ವರ್ಷದೊಳಗಡೆ ಮತ್ತೊಂದು ತೆಲುಗು ಸಿನಿಮಾ ತೆರೆಯ ಮೇಲೆ ಬರಲಿದೆ ಎಂದು ಹೇಳಿದರು.
ನಿರ್ಮಾಪಕ ಕೆ. ರಂಗಸಾಯಿ, ಸ್ನೇಹಿತರಾದ ಭೂಷಣ್, ರಾಮಕೃಷ್ಣ, ಸಾಯಿ ಕಲ್ಯಾಣ, ರಂಗನಾಥ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

