ಎಸ್ಸೆಸ್ಸೆಲ್ಸಿ: ಆಯುಷ್ ಜಿಲ್ಲೆಗೆ ಪ್ರಥಮ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಮೇ 7
ಪ್ರಸಕ್ತ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಗರದ ದೀಪಾಯನ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿ ಆಯುಷ್ ಅಗರ್ವಾಲ್ ಶೇ. 97.76ರಷ್ಟು (611) ಅತಿಹೆಚ್ಚು ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಜಿಲ್ಲೆಯಲ್ಲಿ ಹೆಚ್ಚು ಅಂಕ ಪಡೆದ 20 ವಿದ್ಯಾರ್ಥಿಗಳಲ್ಲಿ ಹೊಸಪೇಟೆ ತಾಲೂಕಿನವರೇ 7 ವಿದ್ಯಾರ್ಥಿಗಳಿರುವುದು ಮತ್ತೊಂದು ವಿಶೇಷ. ಪ್ರಥಮ, ದ್ವಿತೀಯ ಮತ್ತು ನಾಲ್ಕನೇ ಸ್ಥಾನ ಹೊಸಪೇಟೆ ತಾಲೂಕಿಗೆ ಸಂದಿವೆ. ಎರಡನೇ ಸ್ಥಾನವನ್ನು ಹೊಸಪೇಟೆಯ ಕಾನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಶ್ರೀನಿತ್ಯಾ ಶೇ. 97.44ರಷ್ಟು (609) ಅಂಕಗಳನ್ನು ಪಡೆದಿದ್ದಾಳೆ. ಇದೇ ರೀತಿ ದೀಪಾಯನ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿ ಬಿ. ವಿನಾಯಕ ಶೇ. 96.64ರಷ್ಟು (604) ಅಂಕಗಳನ್ನು ಪಡೆದು ಜಿಲ್ಲೆಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾನೆ.
ಟಿ.ಬಿ. ಡ್ಯಾಂನ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿ ಎಂ.ಡಿ. ರೋಹಿತ್ ಶೇ. 96.32 (602) ಅಂಕಗಳನ್ನು ಪಡೆದಿದ್ದಾನೆ. ಟಿಎಂಎಇಎಸ್ ರೋಸ್ಬಡ್ ಆಂಗ್ಲ ಶಾಲೆ ವಿದ್ಯಾರ್ಥಿ ಗಿರೀಶ್ ಭಾಗವತ್ 602 ಅಂಕಗಳನ್ನು ಪಡೆದಿದ್ದಾನೆ. ದೀಪಾಯನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಎಂ. ನಿಖಿತಾ ಶೇ. 96, ವರ್ಷ ಆರ್. ವಸ್ತ್ರದ್ ಶೇ. 95.68ರಷ್ಟು ಅಂಕಗಳನ್ನು ಪಡೆದು ಜಿಲ್ಲೆಗೆ 18 ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿ ಆಯಿಶ್ ಅಗರ್ವಾಲ್ 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ಜಿಲ್ಲೆಗೆ ಪ್ರಥಮ ಸ್ಥಾನ ಬಂದಿರುವುದು ನನಗೆ ಬಹಳ ಖುಷಿ ತಂದಿದೆ. ಪರಿಶ್ರಮಕ್ಕೆ ಬೆಲೆ ಸಿಕ್ಕೇ ಸಿಗುತ್ತದೆ ಎಂದು ನಾನು ಭವಿಸಿಕೊಂಡಿದ್ದೆ. ನನ್ನ ತಾಯಿ ನೀಲಂ ಆಗರ್ವಾಲ್, ತಂದೆ ವಿನೋದ್ ಅಗರ್ವಾಲ್ ಉತ್ತೇಜನ ಕೊಟ್ಟಿದ್ದರು. ಅದೇ ರೀತಿ ನಮ್ಮ ಶಾಲೆಯ ಎಲ್ಲ ಶಿಕ್ಷಕರ ಶ್ರಮವೂ ನನಗೆ ಸ್ಪೂರ್ತಿ ನೀಡಿತ್ತು. ಮುಂದೆ ಸೈನ್ಸ್ ಮಾಡಿ ಉತ್ತಮ ವಿಜ್ಞಾನಿಯಾಗಬೇಕೆಂಬ ಆಸೆ ಇದೆ ಎನ್ನುತ್ತಾನೆ.
ಜಿಲ್ಲೆಗೆ ಪ್ರಥಮ ಸ್ಥಾನ ತಂದ, ಉಳಿದ ವಿದ್ಯಾರ್ಥಿಗಳನ್ನು ಕ್ಷೇತ್ರಶಿಕ್ಷಣಾಧಿಕಾರಿ ಪಿ. ಸುನಂದಾ ಹಾಗೂ ಶಾಲೆಯ ಮುಖ್ಯಗುರು ಶ್ರೀಗುರು ರಾಘವೇಂದ್ರಚಾರ್ ಅಭಿನಂದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

