ನಿಧಿ ಚೋರರ ಹಾವಳಿ ತಪ್ಪಿಸಲು ಆಗ್ರಹ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ನ. 3
ನಿಧಿ ಚೋರರ ಹಾವಳಿಯಿಂದ ಪುರಾತನ ಸ್ಮಾರಕಗಳನ್ನು ಸಂರಕ್ಷಿಸುವಂತೆ ಒತ್ತಾಯಿಸಿ ತಾಲೂಕಿನ ಕಮಲಾಪುರದ ವಿಶ್ವಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ಹೊಸಪೇಟೆ ಡಿವೈಎಸ್ಪಿ ಡಿ.ಡಿ. ಮಾಳಿಗಿ ಮೂಲಕ ಸಹಾಯಕ ಆಯುಕ್ತರಿಗೆ ಮನವಿಪತ್ರ ಸಲ್ಲಿಸಿದರು.
ನ. 2ರಂದು ಶನಿವಾರ ತಾಲೂಕಿನ ಕಮಲಾಪುರ ಕೆರೆ ಹತ್ತಿರದ ಗಣೇಶ ಗುಡಿಯ ಹಿಂಭಾಗದ ಮಠದಲ್ಲಿ ದುಷ್ಕರ್ಮಿಗಳು ನಿಧಿ ಆಸೆಗಾಗಿ ಶ್ರೀಗಳ ಮಠವನ್ನು ಸಂಪೂರ್ಣ ನಾಶ ಮಾಡಿದ್ದಾರೆ. ಶ್ರೀಗಳ ಪವಿತ್ರ ಅಸ್ತಿಗಳನ್ನು ಸಮಾಧಿಯಿಂದ ಹೊರ ತೆಗೆದು ಅಪಮಾನ ಮಾಡಿರುವ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕು ಹಾಗೂ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಆಗ್ರಸಿದ್ದಾರೆ.
ಈ ಹಿಂದೆ ಕಮಾಲಾಪುರದ ಗಾರಿಬಾಯಿ ಆಂಜನೇಯಸ್ವಾಮಿ ದೇವಸ್ಥಾನದ ಆವರಣದ ಗಣೇಶ ವಿಗ್ರಹ, ಕೆರೆ ಏರಿ ಮೇಲಿನ ಕಟ್ಟೆ ಭರ್ಮಪ್ಪ ವಿಗ್ರಹ, ಹಂಪಿಯ ರತ್ನಕೂಟದಲ್ಲಿರುವ ಗಣೇಶನ ವಿಗ್ರಹ, ಮೌಲ್ಯವಂತ ಗಾಳಿಗೋಪುರ, ಶಂಬುನಾಥ ದೇವಸ್ಥಾನದ ಹತ್ತಿರದ ವೀರಭದ್ರ ದೇವಸ್ಥಾನ ಸೇರಿದಂತೆ ಇತರೆ ಕೆಲ ಮಂಟಪಗಳು ನಿಧಿ ಚೋರರ ಕೈಯಲ್ಲಿ ಸಿಕ್ಕು ನಾಶ ಹೊಂದುತ್ತಿವೆ. ನಿಧಿ ಚೋರರನ್ನು ಬಂಧಿಸುವಂತೆ ಅನೇಕ ಬಾರಿ ಮನವಿ ಪತ್ರಗಳನ್ನು ನೀಡಿ ಮತ್ತು ರಸ್ತೆ ತಡೆ ನಡೆಸಿದ್ದರೂ ಸಂಬಂಧಿಸಿದ ಯಾವ ಇಲಾಖೆಗಳು ಎಚ್ಚೆತ್ತುಕೊಂಡಿಲ್ಲ ಎಂದು ದೂರಿದ್ದಾರೆ.
ಪ್ರತಿಭಟನೆ ಎಚ್ಚರಿಕೆ: ಹಂಪಿ ಅಭಿವೃದ್ಧಿ ಪ್ರಾಧಿಕಾರ, ಹಂಪಿ ಉಪ ವಿಭಾಗದ ಪೊಲೀಸ್ ಕಚೇರಿ ಇದ್ದರೂ ಸಹ ನಿಧಿ ಚೋರರ ಉಪಟಳ ಪದೇ ಪದೇ ಹಂಪಿ ಹಾಗೂ ಕಮಲಾಪುರದಲ್ಲಿ ನಡೆಯುತ್ತಿವೆ. ತಕ್ಷಣ ನಿರ್ಲಕ್ಷ್ಯ ಮಾಡುತ್ತಿರುವ ಅಧಿಕಾರಿಗಳ ಹಾಗೂ ನಿಧಿ ಚೋರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ವಿರೂಪಗೊಂಡು ಅಪಮಾನಿಸಲ್ಪಟ್ಟ ಮಠವನ್ನು ಶಾಸ್ತ್ರೋಕ್ತವಾಗಿ ಪುನರ್ ನಿರ್ಮಾಣ ಮಾಡಬೇಕು. ಇಲ್ಲವಾದರೆ ರಸ್ತೆತಡೆ ಹಾಗೂ ಹಂಪಿ ಉತ್ಸವದಂದು ಕಪ್ಪು ಬಾವುಟ ಪ್ರದರ್ಶನ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ವಿಶ್ವಹಿಂದೂ ಪರಿಷತ್ನ ಮುಖಂಡರಾದ ಡಾ. ವಿಶ್ವನಾಥ ಮಾಳಗಿ, ಈರಣ್ಣ ಪೂಜಾರಿ, ನಿಂಗಪ್ಪ ಬಡಿಗೇರ್ ಸೇರಿದಂತೆ ಇತರರು ಡಿವೈಎಸ್ಪಿಗೆ ಮನವಿಪತ್ರ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

