ಬಳ್ಳಾರಿ

ಎಂ.ಬಿ. ಅಯ್ಯನಹಳ್ಳಿ: ರಾಜ್ಯೋತ್ಸವ

Published On :

ಕೂಡ್ಲಿಗಿ: ಜಗತ್ತಿನ ಅನೇಕ ರಾಷ್ಟ್ರಗಳ ಸ್ಥಳೀಯ ಭಾಷೆಗಳ ಸಂಹಾರಕ್ಕೆ ಆಂಗ್ಲಭಾಷೆ ಆಯುಧವಾಗಿ ಬಳಕೆಯಾಗುತ್ತಿದೆ. ಆಂಗ್ಲಭಾಷೆ ನಮಗೆ ವಿಷಯವಾಗಬೇಕೇ ವಿನಃ ದಿನನಿತ್ಯದ ಮಾಧ್ಯಮವಾಗಬಾರದು ಎಂದು ಪ್ರೌಢಶಾಲೆ ಮುಖ್ಯಶಿಕ್ಷಕ ಡಿ. ಬೋರಯ್ಯ ತಿಳಿಸಿದರು.
ತಾಲೂಕಿನ ಎಂ.ಬಿ. ಅಯ್ಯನಹಳ್ಳಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ನಡೆದ 58ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಸಮೀಕ್ಷೆಯಂತೆ ರಾಜ್ಯ ರಾಜಧಾನಿಯಲ್ಲಿ ಕೇವಲ ಶೇ. 27ರಷ್ಟು ಕನ್ನಡಿಗರಿರುವುದು ದುರಂತ. ನಾಡಿನ ಪ್ರಕೃತಿ, ಖನಿಜ, ವನ್ಯ ಸಂಪತ್ತು ಹಾಳಾಗುತ್ತಿದೆ. ಗಡಿನಾಡಿನಲ್ಲಿ ಅನ್ಯ ರಾಜ್ಯದವರ ಉಪಟಳ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ನಾಡು, ನುಡಿ, ಜಲ, ಸಂಪತ್ತು ಉಳಿವಿಗಾಗಿ ಸರ್ಕಾರ ದಿಟ್ಟಕ್ರಮಕ್ಕೆ ಮುಂದಾಗಬೇಕಿದೆ ಎಂದರು.
ನಿವೃತ್ತ ಶಿಕ್ಷಣಾಧಿಕಾರಿ ಒ.ಬಿ. ಬಸವರಾಜ ಮಾತನಾಡಿ, ಕನ್ನಡ ಭಾಷೆ ಕಲಿಯಲು, ಆಡಲು ತುಂಬ ಸರಳ. ಭಾಷೆಯ ಬಗ್ಗೆ ಎಲ್ಲರಿಗೂ ಅಭಿಮಾನವಿರಬೇಕು. ನಾಡು, ನುಡಿಗೆ ಕುತ್ತು ಒದಗಿದರೆ ಕೆಚ್ಚೆದೆಯ ಹೋರಾಟಕ್ಕೂ ಸೈ ಎನ್ನುವಂಥ ಅಭಿಮಾನಿಗಳಾಗಬೇಕು. ಮಾತೃ-ಮಾತೃಭೂಮಿ ಒಂದೇ ಎಂಬ ಭಾವನೆ ಮೂಡಿದರೆ ಮಾತ್ರ ಭಾಷೆ ಉಳಿಯಲು ಸಾಧ್ಯ ಎಂದರು.
ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹೊಸಮನಿ ಚಿದಾನಂದಪ್ಪ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಎಸ್.ಎಂ. ಸಂಗಮೇಶ್ವರಯ್ಯ, ಭೀಮಸಮುದ್ರ ರಂಗನಾಥ, ಹುಡೇಂ ಕೃಷ್ಣಮೂರ್ತಿ ಮಾತನಾಡಿದರು. ಚಂದ್ರಯ್ಯಸ್ವಾಮಿ, ಪ್ರಾಚಾರ್ಯ ಜೆ.ಬಿ. ಚಂದ್ರಪ್ಪ, ಮುಖ್ಯಶಿಕ್ಷಕ ಕೆ.ವಿ. ಶರಣೇಶ್, ಪ್ರಸನ್ನ ನಾಯ್ಕ, ಪ್ರಕಾಶ್, ರಮೇಶ್ ನಾಯ್ಕ, ಕೊಟ್ರೇಶ್, ನಾಗರಾಜ, ಸಂತೋಷ್ ನಾಯ್ಕ, ಮೆಹಬೂಬಿ, ನೇತ್ರಾವತಿ, ಸುಹಾಸಿನಿ, ಮಂಜುಳಾ, ಚೈತ್ರಾ, ಮಮತಾ, ಶ್ವೇತಾ, ರೇಖಾ, ಪಿ. ಕೊಟ್ರೇಶ್, ಕೋಟಿಲಿಂಗನಗೌಡ ಸೇರಿದಂತೆ ಅನೇಕರು ಇದ್ದರು.
ಕೆ.ಟಿ. ಅಶ್ವಿನಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಮೆಹಬೂಬ್ ಸುಬಾನಿ ಸ್ವಾಗತಿಸಿದರು. ಹೀನಾಕೌಸರ್, ನಸ್ರತ್ ನಿರೂಪಿಸಿದರು. ಕಾರ್ತಿಕ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.