ಗಣಿತ, ವಿಜ್ಞಾನದಲ್ಲಿ ಆಸಕ್ತಿ ಅಗತ್ಯ: ರಾಮನಗೌಡ
ಹಗರಿಬೊಮ್ಮನಹಳ್ಳಿ: ಇಂದಿನ ಮಾಹಿತಿ ಮತ್ತು ತಂತ್ರಜ್ಞಾನ ಯುಗದಲ್ಲಿ ಮಕ್ಕಳಿಗೆ ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಿಸುವ ಅಗತ್ಯವಿದೆ. ಶಿಕ್ಷಣ ಇಲಾಖೆ ಪ್ರಸ್ತುತಪಡಿಸುತ್ತಿರುವ ಗಣಿತ ಮತ್ತು ವಿಜ್ಞಾನ ಒಲಂಪಿಯಾಡ್ ಪರೀಕ್ಷೆ ಮಕ್ಕಳಲ್ಲಿನ ಪ್ರತಿಭೆ ಗುರುತಿಸುವಲ್ಲಿ ಸಹಕಾರಿಯಾಗಿದೆ ಎಂದು ಬಿಇಒ ಕೆ. ರಾಮನಗೌಡ ಹೇಳಿದರು.
ಪಟ್ಟಣದ ಪ್ರಾಥಮಿಕ ಶಾಲೆಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ತಾಲೂಕ ಘಟಕ ಮಂಗಳವಾರ ಹಮ್ಮಿಕೊಂಡಿದ್ದ ಒಲಂಪಿಯಾಡ್ ಪರೀಕ್ಷಾ ಪೂರ್ವ ಸಿದ್ಧತಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಇಲಾಖೆ ವತಿಯಿಂದ ಪ್ರಯೋಗಾಲಯ, ಮೇಳಗಳು, ಮಾದರಿ ವಸ್ತುಪ್ರದರ್ಶನ, ಗೋಷ್ಠಿಗಳು, ರೇಡಿಯೋ-ಎಜುಸ್ಯಾಟ್ ಪಾಠ ಮುಂತಾದ ಶೈಕ್ಷಣಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಹೀಗಿದ್ದರೂ ಮಕ್ಕಳಿಗೆ ಗಣಿತ, ವಿಜ್ಞಾನ ವಿಷಯಗಳು ಅತ್ಯಂತ ಕಠಿಣವಾಗಿವೆ. ಅದಕ್ಕೆ ಪರಿಹಾರವಾಗಿ ಒಲಂಪಿಯಾಡ್ ಪರೀಕ್ಷೆಗಳನ್ನು ಇಲಾಖೆ ಆಯೋಜಿಸಿದೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಡಿ.ಟಿ. ತೇನ್ಸಿಂಗ್ ನಾಯ್ಕ ಮಾತನಾಡಿ, ಒಲಂಪಿಯಾಡ್ ಪರೀಕ್ಷೆಗೆ ತಾಲೂಕಿನಿಂದ ಜಿಲ್ಲಾ ಮಟ್ಟಕ್ಕೆ 23 ಮಕ್ಕಳು ಆಯ್ಕೆಯಾಗಿದ್ದಾರೆ. ಈ ಆಯ್ಕೆಯ ಹಿಂದೆ ಆಯಾ ಶಾಲೆಗಳ ಶಿಕ್ಷಕರ ಶ್ರಮ ಸಾಕಷ್ಟಿದೆ. ಅವರ ಕಾರ್ಯ ಶ್ಲಾಘನೀಯ ಎಂದರು.
ರಾಜ್ಯ ಸರ್ಕಾರಿ ನೌಕರ ಸಂಘದ ನಿರ್ದೇಶಕ ಬ್ಯಾಲಾಳು ರಾಮಣ್ಣ, ತಾಲೂಕು ನೋಡಲ್ ಅಧಿಕಾರಿ ಪರಮೇಶ್ವರಯ್ಯ ಸೊಪ್ಪಿಮಠ, ಪಂಚಾಯತ್ ರಾಜ್ಯ ಇಲಾಖೆ ನೌಕರರ ಸಂಘದ ಮುಖಂಡ ಈ. ಕೃಷ್ಣಮೂರ್ತಿ, ಶಾಲಾ ಮುಖ್ಯೋಪಾದ್ಯಾಯ ಲಾಲ್ಸಿಂಗ್ ನಾಯ್ಕ ಭಾಗವಹಿಸಿದ್ದರು.
ಶಿಕ್ಷಕ ಬಿ. ಕೊಟ್ರಪ್ಪ ಪ್ರಾರ್ಥಿಸಿ, ಎಚ್.ಎಂ. ಗುರುಸಿದ್ದಯ್ಯ ಸ್ವಾಗತಿಸಿದರು. ರಂಗನಾಥ ಹವಾಲ್ದಾರ್ ನಿರೂಪಿಸಿದರು. ಮಹಾಂತೇಶ್ ನಾಯ್ಕ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

