ಬಳ್ಳಾರಿ

ಇಂದು ರಸಮಂಜರಿ

Published On :

ಬಳ್ಳಾರಿ: ಬಳ್ಳಾರಿಯ ಅಲಾಪ್ ಸಂಗೀತ ಕಲಾ ಬಳಗದಿಂದ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ನ. 10ರಂದು ಸಂಜೆ 6.15ಕ್ಕೆ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಡಾ. ಪಿ.ಬಿ. ಶ್ರೀನಿವಾಸ ಸವಿನೆನಪಿಗಾಗಿ ಕಾರ್ಯಕ್ರಮ ಆಯೋಜಿಸಿದ್ದು, ಮೋಕ ಜಿಪಂ ಸದಸ್ಯ ಗೋನಾಳ ರಾಜಶೇಖರಗೌಡ ಉದ್ಘಾಟಿಸುವರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆ ಅಧ್ಯಕ್ಷ ಕನುಗೋಲು ಚನ್ನಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಾಣಪುರ ಸಿದ್ದನಗೌಡ, ಬಿ. ನಾಗರಾಜ, ಕೆ. ಕೋಟೇಶ್ವರ ರಾವು, ಡಾ. ಡಿ.ಎಲ್. ರಮೇಶ ಗೋಪಾಲ, ರಮೇಶಗೌಡ ಗೋಪಾಲ, ಖೇಣಿ ಬಸಪ್ಪ, ಡಾ. ಎಂ.ಟಿ. ಮಲ್ಲೇಶಪ್ಪ, ಡಾ. ಕೆ. ಹನುಮಂತಪ್ಪ, ಸಿ. ನಿಂಗಪ್ಪ, ಆನಂದ ನಾಯ್ಕ ಪಾಲ್ಗೊಳ್ಳಲಿದ್ದಾರೆ. ಅನಂತರ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಜೂಜಾಟ: 7 ಜನರ ಬಂಧನ
ಸಂಡೂರು: ಇಸ್ಪೀಟ್‌ನ ಅಂದರ್ ಬಾಹರ್ ಜೂಜಾಟ ಅಡ್ಡೆ ಮೇಲೆ ಸಂಡೂರು ಪೊಲೀಸರು ದಾಳಿ ಮಾಡಿ, 7 ಜನರನ್ನು ಬಂಧಿಸಿದ ಘಟನೆ ಭುಜಂಗ ನಗರದಲ್ಲಿ ನಡೆದಿದೆ. ಸಂಡೂರಿನ ಭುಜಂಗ ನಗರದಲ್ಲಿ ಅಂದರ್ ಬಾಹರ್ ಜೂಜಾಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸಂಡೂರು ಪಿಎಸ್‌ಐ ಪಿ. ಸುರೇಶ್ ನೇತೃತ್ವದ ತಂಡ ದಾಳಿ ಮಾಡಿ, ಕೆಂಚಪ್ಪ, ಸುಬ್ರಹ್ಮಣ್ಯ, ಬಸವರಾಜ್, ಮರಳುಸಿದ್ದಪ್ಪ, ಎರ್ರಿಸ್ವಾಮಿ, ಮೇಟಿ ರಮೇಶ್, ಜಗದೀಶ್ವರ ಎಂಬ ಆರೋಪಿಗಳನ್ನು ಬಂಧಿಸಿ, ಬಂಧಿತರಿಂದ ರು. 25,025 ವಶಪಡಿಸಿಕೊಂಡಿದ್ದಾರೆ. ಈ ಕುರಿತು ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿ ಆತ್ಮಹತ್ಯೆ
ಸಂಡೂರು: ಯುವತಿಯೋರ್ವಳು ಕ್ಷುಲ್ಲಕ ಕಾರಣಕ್ಕೆ ಮನನೊಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಸ್ಮಯೋರ್ ಕಾಲೋನಿಯಲ್ಲಿ ನಡೆದಿದೆ. ಮೃತಳು ಪ್ರಿಯಾಂಕಾ (21). ಅವಳು ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ದೀಪಾವಳಿ ಹಬ್ಬಕ್ಕೆ ಸಂಡೂರಿಗೆ ಬಂದಿದ್ದಳು. ಪೋಷಕರು ಕೆಲಸಕ್ಕೆ ಹೋಗುವುದು ಬೇಡ ಎಂದು ಹೇಳಿದ್ದರಿಂದ ಮನನೊಂದು ಶುಕ್ರವಾರ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಳೆ ಬೈಕ್‌ರ್ಯಾಲಿ
ಹೂವಿನಹಡಗಲಿ: ಬೆಂಗಳೂರಿನಲ್ಲಿ ನ. 17ರಂದು ನಡೆಯಲಿರುವ ಗುಜರಾತ್ ಮುಖ್ಯಮಂತ್ರಿ, ಬಿಜೆಪಿ ಪ್ರಧಾನಿ ಹುದ್ದೆ ನಿಯೋಜಿತ ಅಭ್ಯರ್ಥಿ ನರೇಂದ್ರ ಮೋದಿ ರ್ಯಾಲಿ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ನ. 11ರಂದು ತಾಲೂಕು ಬಿಜೆಪಿ ಘಟಕವು ಹೂವಿನಹಡಗಲಿ ವಿಧಾನ ಕ್ಷೇತ್ರದಲ್ಲಿ ಬೈಕ್‌ರ್ಯಾಲಿ ಆಯೋಜಿಸಿದೆ ಎಂದು ತಾಲೂಕು ಬಿಜೆಪಿ ವಕ್ತಾರ ಎಂ.ಬಿ. ಬಸವರಾಜ ತಿಳಿಸಿದ್ದಾರೆ. ರ್ಯಾಲಿಯಲ್ಲಿ ಬಿಜೆಪಿ ಕಾರ್ಯಕರ್ತರು ಕಡ್ಡಾಯವಾಗಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದ್ದಾರೆ. ಬೈಕ್ ರ್ಯಾಲಿ ನ. 11ರಂದು ಬೆಳಗ್ಗೆ 7ಕ್ಕೆ ಸುಕ್ಷೇತ್ರ ಕುರುವತ್ತಿ ಬಸವೇಶ್ವರ ದೇವಸ್ಥಾನದಿಂದ ಆರಂಭವಾಗಲಿದ್ದು, ಮೈಲಾರ, ಹೊಳಲು, ಹಿರೇಹಡಗಲಿ, ಹಗರನೂರು, ತಿಪ್ಪಾಪುರ, ಹೂವಿನಹಡಗಲಿ, ಸೋಗಿ, ಇಟ್ಟಗಿ, ಮೋರಿಗೇರಿ, ಹಂಪಸಾಗರ, ಹೊಳಗುಂದಿ, ಹೂವಿನಹಡಗಲಿಗೆ ತೆರಳಿ ಸಮಾರೋಪಗೊಳ್ಳಲಿದೆ ಎಂದರು.
ಸದಸ್ಯತ್ವ ಪಟ್ಟಿ ಪರಿಷ್ಕರಣೆ
ಬಳ್ಳಾರಿ: ಸೆ. 5ರಂದು ನಡೆದ ಸದಸ್ಯತ್ವ ಅಭಿಯಾನ 2013ರ ಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲಿ ಯಾವುದೇ ರೀತಿಯ ಲೋಪದೋಷ ಸರಿಪಡಿಸಲು ನ. 9ರಿಂದ 11ರ ವರೆಗೆ ಸಂಜೆ ಗಂಟೆವರೆಗೆ ತಿದ್ದುಪಡಿ ಮಾಡಲಾಗುತ್ತದೆ ಎಂದು ಅಖಿಲ ಭಾರತ ಯುವ ಕಾಂಗ್ರೆಸ್ ಪ್ರಾದೇಶಿಕ ಚುನಾವಣೆ ಅಧಿಕಾರಿ ಶಾನವಾಜ್ ಖಾನ್ ತಿಳಿಸಿದರು. ಶನಿವಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಿಯಲ್ಲಿ ಲೋಪದೋಷಗಳಿದ್ದರೆ ನ. 9ರಿಂದ 14ರ ವರೆಗೆ ಲೋಕಸಭಾ ಯುವ ಕಾಂಗ್ರೆಸ್ ರೀಟರ್ನಿಂಗ್ ಆಫೀಸರ್ ಉಮರ್ ಫರುಖ್ ಅವರನ್ನು ಸಂಪರ್ಕಿಸಬಹುದು. ಹೆಚ್ಚಿನ ಮಹಿತಿಗಾಗಿ ಢಿಢಿಢಿ.್ಝಣ್ಛ.್ಝಟಿ ಸಂಪರ್ಕಿಸಬಹುದು. ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎನ್. ಹಬೀಬ್ ರೆಹಮಾನ್, ಪ್ರಧಾನ ಕಾರ್ಯದರ್ಶಿ ಗೋಪಿ ಜಯಲಲಿತ, ಸದಸ್ಯರಾದ ಪಾರನ್, ಧನುಂಜಯ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.