ನಿಗದಿತ ಅವಧಿಯಲ್ಲಿ ಉತ್ತಮ ಕಾರ್ಯನಿರ್ವಹಿಸಿ
ಹಗರಿಬೊಮ್ಮನಹಳ್ಳಿ: ನಮಗೆ ಸಿಕ್ಕಿರುವ ಸಮಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಸರ್ಕಾರಕ್ಕೆ ಒಳ್ಳೆಯ ಹೆಸರು ತರುವಂಥ ಕಾರ್ಯವನ್ನು ಎಲ್ಲ ಸರ್ಕಾರಿ ಸಿಬ್ಬಂದಿ ಮಾಡಬೇಕೆಂದು ರಾಜ್ಯ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಹೊಸಪೇಟೆ ವಿಭಾಗದ ಸಹಾಯಕ ಅಭಿಯಂತ ಪ್ರಕಾಶ ಸಜ್ಜನ್ ಹೇಳಿದರು.
ಪಟ್ಟಣದ ರಾಮನಗರದ ಗಂ.ಭೀ. ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿರುವ ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ಮತ್ತು ಕೊಟ್ಟೂರು ಪಟ್ಟಣದ ನೀರು ಶುದ್ಧೀಕರಣ ಘಟಕದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಂಡಳಿಯ ಹಿರಿಯ ಕಾರ್ಯ ನಿರೀಕ್ಷಕ ನಿರಂಜನಮೂರ್ತಿ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ನೀರು ಶುದ್ಧಿಕರಣ ಘಟಕಗಳಲ್ಲಿ ಸತತ ಒತ್ತಡಗಳ ಮಧ್ಯೆ ಕಾರ್ಯನಿರ್ವಹಿಸುವಂಥ ವಾತಾವರಣವಿದೆ. ಆದರೆ, ನಾವು ಯಾವುದೇ ಕ್ಷಣದಲ್ಲೂ ತಾಳ್ಮೆ ಕಳೆದುಕೊಳ್ಳದೆ ಉತ್ತಮ ಕಾರ್ಯನಿರ್ವಹಿಸುವ ಮೂಲಕ ಸಾರ್ವಜನಿಕರಿಗೆ ಸರಿಯಾದ ಸಮಯಕ್ಕೆ ಕುಡಿಯುವ ನೀರು ಸಿಗುವಂತೆ ವ್ಯವಸ್ಥೆ ಮಾಡಲು ಶ್ರಮಿಸೋಣ ಎಂದರು.
ಸನ್ಮಾನ: ಇದೇ ಸಂದರ್ಭ ಹಿರಿಯ ಕಾರ್ಯ ನಿರೀಕ್ಷಕ ನಿರಂಜನಮೂರ್ತಿ ಅವರನ್ನು ಸನ್ಮಾನಿಸಲಾಯಿತು.
ಮಂಡಳಿಯ ಕಿರಿಯ ಅಭಿಯಂತ ಅನಿತಾಕುಮಾರಿ, ಮಂಡಳಿ ಸಿಬ್ಬಂದಿಗಳಾದ ಮಾರ್ತಾಂಡರಾವ್, ಸಣ್ಣಕಾಶಿ, ಪ್ರವೀಣಕುಮಾರ್, ಕೊಟ್ರೇಶ್, ರವಿ, ಯಮನೂರ, ಪ್ರಹ್ಲಾದ್, ವೀರಣ್ಣ, ಸ್ವಾಮಿರಂಗ, ಹುಸೇನ್ ಸಾಬ್ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

